News Kannada
Wednesday, October 05 2022

ಕರಾವಳಿ

ಭಾಷೆಗಳ ನಡುವೆ ಸಂವಹನ ಇರಬೇಕು: ಸಚಿವ ರಮೇಶ್ ಕುಮಾರ್ - 1 min read

Photo Credit :

ಭಾಷೆಗಳ ನಡುವೆ ಸಂವಹನ ಇರಬೇಕು: ಸಚಿವ ರಮೇಶ್ ಕುಮಾರ್

ಕಾಸರಗೋಡು: ಭಾಷೆಗಳ ನಡುವೆ ಸಂವಹನ ಇರಬೇಕು ಹೊರತು, ಭಾಷೆಯ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸುವ, ಇತಿಹಾಸವನ್ನು ತಿರುಚಲು ಅವಕಾಶ ನೀಡಬಾರದು ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್ ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ಸುಬ್ಬಯ್ಯಕಟ್ಟೆ ಕನ್ನಡ ಸಂಘ, ಮಡಿಕೇರಿ ಕೊಡವ ಸಾಹಿತ್ಯ ಅಕಾಡಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ  ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ 13ನೇ ಜಾನಪದ ಸಂಚಾರ ಕಾರ್ಯಕ್ರಮ ಹಾಗೂ ಓಣಂ ಹಬ್ಬ ಆಚರಣಾ ಸಮಾರಂಭವನ್ನು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್ ರಮೇಶ್ ಕುಮಾರ್ ಉದ್ಘಾಟಿಸಿದರು.

ಮಾತೃ ಭಾಷೆಗೆ ಮೊದಲ ಮನ್ನಣೆ ನೀಡಬೇಕು. ಭಾಷೆಗಳ ನಡುವೆ ಪರಸ್ಪರ ಸೌಹಾರ್ಧತೆ ಮುಖ್ಯ. ಜೀವನ ಕ್ರಮ ಬದಲಾದರೂ ಮಾತೃ ಭಾಷೆ ಬದಲಾಗದು. ಸಮಾಜವನ್ನು ಭಾಷೆಯ ಹೆಸರಿನಲ್ಲಿ ಒಡೆಯುವ ಕೆಲಸ ಬೇಡ. ಎಲ್ಲರೂ ಒಗ್ಗಟಾಗಿದ್ದಲ್ಲಿ ಮಾತ್ರ ಈ ದೇಶ ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು. ಕರ್ನಾಟಕ  ಜಾನಪದ ಪರಿಷತ್ ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ್ ನಾಣಿತ್ತಿಲು ಅಧ್ಯಕ್ಷತೆ  ವಹಿಸಿದ್ದರು.

ಕಾಸರಗೋಡು ಸಂಸದ ಪಿ.ಕರುಣಾಕರನ್, ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತ್ ಅಧ್ಯಕ್ಷ  ಎ.ಕೆ.ಎಂ ಅಶ್ರಫ್, ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಅಬ್ದುಲ್ ರಹಮಾನ್  ಸುಬ್ಬಯ್ಯಕಟ್ಟೆ, ಡಾ.ಅನಂತ ಕಾಮತ್, ಸಮಾಜಸೇವಕ ಸೀತಾರಾಮ ಶೆಟ್ಟಿ, ಬಿ.ಕೆ ಖಾದರ್ ಹಾಜಿ, ಹನೀಫ್  ಚೇವಾರ್, ರಾಮಕೃಷ್ಣ ಭಂಡಾರಿ, ಬಷೀರ್ ಬಿ.ಎ ಮೊದಲಾದವರು ಉಪಸ್ಥಿತರಿದ್ದರು.

ಎಸ್.ಕೆ ಬಾಲಕೃಷ್ಣ ಸ್ವಾಗತಿಸಿ, ವಸಂತ ಮಾಸ್ಟರ್ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ಕೊಡವ ಸಾಹಿತ್ಯ ಅಕಾಡಮಿ ಮಡಿಕೇರಿ ಕಾಲ 3 ತಂಡದಿಂದ ವೈವಿಧ್ಯಮಯ ಜಾನಪದ ನೃತ್ಯ ವೈಭವ, ತುಳುನಾಡಿನ ನೃತ್ಯ ಹಾಡುಗಳು ಮನಸೆಳೆದವು.

See also  ಓ ಬೇಲೆ ಹೇಳಿ ನಾಟಿ ಮಾಡಿದ ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು