News Kannada
Friday, September 30 2022

ಕರಾವಳಿ

ವಾನರರಿಗೂ ಓಣಂ ಹಬ್ಬದ ಸವಿಯೂಟ - 1 min read

Photo Credit :

ವಾನರರಿಗೂ ಓಣಂ ಹಬ್ಬದ ಸವಿಯೂಟ

ಕಾಸರಗೋಡು: ಓಣಂ ಹಬ್ಬದ ಸವಿಯೂಟ ಮಾನವರಿಗೆ ಮಾತ್ರವಲ್ಲ ವಾನರರಿಗೂ ಭೋಜನ ವ್ಯವಸ್ಥೆ ಕಲ್ಪಿಸುವ ಮೂಲಕ ಕಾಸರಗೋಡು ತ್ರಿಕ್ಕರಿಪುರ ಇಡಯಿಲ್ ಕ್ಕಾಡ್ ನ  ಸಂಘವೊಂದು ಮುಂದೆ ಬಂದಿದ್ದು, 40ಕ್ಕೂ ಅಧಿಕ ವಾನರು ಭೋಜನ ಸೇವಿಸುವ ಮೂಲಕ ಖುಷಿಪಟ್ಟರು.

ಇಡಯಿಲ್ ಕ್ಕಾಡ್ ನವೋದಯ ವಾಚನಾಲಯ ಮತ್ತು ಗ್ರಂಥಾಲಯ ಅಧೀನತೆಯ ಬಾಲವೇದಿ ಕಾರ್ಯಕರ್ತರು ವಾನರಿಗೆ ಈ ಭೋಜನ ಆಯೋಜಿಸಿದ್ದರು. ಓಣಂ ಹಬ್ಬದ ಹಿನ್ನಲೆಯಲ್ಲಿ ವಾನರಿಗೆ ಈ ವೈಶಿಷ್ಟ ಔತಣ ವ್ಯವಸ್ಥೆ ಮಾಡಲಾಗಿತ್ತು.  ಸೌಲಭ್ಯಕ್ಕೂ ಕೊರತೆ ಇರಲಿಲ್ಲ. ಮೇಜು, ಬೆಂಚಿನ ವ್ಯವಸ್ಥೆ, ಬಾಳೆಲೆ ಹಾಕಿ ಅನ್ನ, ಹಣ್ಣು ಹಂಪಲು ಬಡಿಸಲಾಯಿತು. ಕ್ಯಾರೆಟ್, ಮುಳ್ಳು ಸೌತೆ, ಟೊಮೆಟೊ, ಕಬ್ಬು, ಕಲ್ಲಂಗಡಿ, ಪೇರಳೆ, ಪಪ್ಪಾಯ ಹೀಗೆ 25 ರಷ್ಟು ಬಗೆಯ ಆಹಾರ ವಾಸ್ಯುಗಳು, ಜೊತೆಗೆ ಕುಡಿಯಲು ಗ್ಲಾಸಿನಲ್ಲಿ ನೀರು ಕೂಡಾ ಸಜ್ಜುಗೊಳಿಸಲಾಗಿತ್ತು. ಆದರೆ ಎಲ್ಲಾ ಆಹಾರ ವಸ್ತುಗಳು ಉಪ್ಪು ರಹಿತವಾಗಿತ್ತು.

ಮಕ್ಕಳು ಬಾಳೆಲೆಯಲ್ಲಿ ಬಡಿಸಿದ ಕೂಡಲೇ ವಾನರಿಗೆ ದಿನಂಪ್ರತಿ ಆಹಾರ ನೀಡುತ್ತಿರುವ ಪರಿಸರದ ಮಾಣಿಕ್ಯ ಎಂಬ ಮಹಿಳೆ ಪಪ್ಪಿ ಎಂದು ಕರೆಯುತ್ತಿದ್ದಂತೆ ಮರದ ರೆಂಬೆಗಳಿಂದ ಧಾವಿಸಿ ಬಂದ ವಾನರು ಸಿಕ್ಕಿದ್ದು ಲಾಭವೆಂಬಂತೆ ಆಹಾರ ಸೇವಿಸಿ ಖುಷಿ ಪಟ್ಟುಕೊಂಡರು.

ವಾನರ ಸಂತತಿ ನಾಶದತ್ತ ಸಾಗುತ್ತಿದೆ. ದಿನ ಕಳೆದಂತೆ ಸಂಖ್ಯೆ ಇಳಿಮುಖವಾಗುತ್ತಿದೆ. ಈ ನಿಟ್ಟಿನಲ್ಲಿ ಇಡಯಿಲ್ ಕ್ಕಾಡ್ ಪ್ರದೇಶದ ನಾಗರಿಕರ ಕಾರ್ಯ ಕೂಡಾ ಶ್ಲಾಘ ನಿಯವಾಗಿದೆ. ಸ್ಥಳದಲ್ಲಿ 40ರಷ್ಟು ವಾನರು  ಸ್ಥಳೀಯರ ಸಂರಕ್ಷಣೆಯಲ್ಲಿದೆ. ಪ್ರತಿ ವರ್ಷ ಓಣಂ ಸಂದರ್ಭದಲ್ಲಿ ವಾನರಿಗೆ  ಓಣಂ ಸದ್ಯ ( ಔತಣ) ವನ್ನು ನೀಡಲಾಗುತ್ತಿದೆ. ಕಳೆದ 20 ವರ್ಷಗಳಿಂದ ವಾನರಿಗೆ ಓಣಂ ಭೋಜನ ನೀಡಲಾಗುತ್ತಿದೆ. ಆರಂಭದಲ್ಲಿ ಆಹಾರ ಸೇವಿಸಲು ಬೆರಳಿಕೆಯಷ್ಟು ಮಾತ್ರ ವಾನರು ಬರುತ್ತಿದ್ದರು. ಈಗ ಹೆಚ್ಚುತ್ತಾ ಇದೆ.40 ಕ್ಕೂ ಅಧಿಕ ವಾನರು ಬರುತ್ತಿದೆ.

ಆರಂಭದಲ್ಲಿ ವಾನರ ಭೋಜನ ವೀಕ್ಷಿಸಲು ಇಲ್ಲಿಗೆ ಆಗಮಿಸುವವರು ಹಲವು ತರದ  ಆಹಾರ ಪದಾರ್ಥಗಳನ್ನು ತರುತ್ತಿದ್ದರು. ಆದರೆ ಉಪ್ಪು ಬಳಸಿದ ಆಹಾರ ಬೆಳವಣಿಗೆ  ಮತ್ತು ವಂಶಾಭಿವೃದ್ದಿಗೆ ಸಮಸ್ಯೆ ತಲೆದೋರುತ್ತಿದೆ ಎಂಬ ಅಧ್ಯಯನ ವರದಿ ಹಿನ್ನಲೆಯಲ್ಲಿ  ಉಪ್ಪು ಬೆರೆಸಿದ ಆಹಾರ ವಸ್ತುಗಳನ್ನು ನೀಡುತ್ತಿಲ್ಲ. ಉಪ್ಪು ರಹಿತ ಆಹಾರವನ್ನು ನೀಡಲಾಗುತ್ತಿದೆ. ಸುಖ, ಸಂತೋಷದ ಬಗ್ಗೆ  ಮಾತ್ರ ಚಿಂತಿಸುವ ಮಧ್ಯೆ ಪ್ರಾಣಿಗಳಿಗೂ ಹಬ್ಬದೂಟ  ನೀಡಿ ನೆಮ್ಮದಿ ಕಾಣುವ ಕಾಸರಗೋಡು ತ್ರಿಕ್ಕರಿಪುರ ಇಡಯಿಲ್ ಕ್ಕಾಡ್ ನ ನಾಗರಿಕರು ಶ್ಲಾಘನೆಗೆ ಪಾತ್ರರಾಗಿದ್ದಾರೆ.

See also  ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು