News Kannada
Sunday, September 25 2022

ಕರಾವಳಿ

ಮೈಸೂರು-ಧರ್ಮಸ್ಥಳ ಸಂಪರ್ಕಕ್ಕೆ ಸೇತುವೆ ನಿರ್ಮಾಣ: ಶೇ. 75 ರಷ್ಟು ಭಾಗ ಪೂರ್ಣ - 1 min read

Photo Credit :

 ಮೈಸೂರು-ಧರ್ಮಸ್ಥಳ ಸಂಪರ್ಕಕ್ಕೆ ಸೇತುವೆ ನಿರ್ಮಾಣ: ಶೇ. 75 ರಷ್ಟು ಭಾಗ ಪೂರ್ಣ

ಪುತ್ತೂರು: ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳವನ್ನು ಮೈಸೂರು ಭಾಗದಿಂದ ಸಂಪರ್ಕಿಸಲು ಪೂರಕವಾಗುವ ನಿಟ್ಟಿನಲ್ಲಿ ಕುದ್ಮಾರು ಗ್ರಾಮದ ಶಾಂತಿಮೊಗರಿನಲ್ಲಿ ಕುಮಾರಾಧಾರ ನದಿಗೆ ಹದಿಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯ ಶೇ. 75 ರಷ್ಟು ಭಾಗ ಪೂರ್ಣಗೊಂಡಿದೆ. ಈ ಮೂಲಕ ಬಹು ವರ್ಷದ ಕನಸು ನನಸಾಗುವ ದಿನ ಸನ್ನಿಹಿತದಲ್ಲಿದೆ.

ಮೆಗಾ ಪ್ರಾಜೆಕ್ಟ್
ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ 2015 ರಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿಯ ಟೆಂಡರ್ ಮೊತ್ತ 13.81 ಕೋ.ರೂ. ಸವಣೂರು ಕಾಣಿಯೂರು ರಸ್ತೆಯ ಶಾಂತಿಮೊಗರು-ಬರೆಪ್ಪಾಡಿ ರಸ್ತೆಯಿಂದ 1 ಕಿ.ಮೀ ದೂರದಲ್ಲಿ ಕುಮಾರಾಧಾರ ನದಿಗೆ ಈ ಸೇತುವೆ ನಿರ್ಮಿಸಲಾಗುತ್ತಿದೆ. ನದಿ ತಟದಿಂದ 215 ಮೀಟರ್ ಉದ್ದ ಇದೆ. 18 ಮೀಟರ್ ಎತ್ತರ, 12 ಮೀಟರ್ ಅಗಲ ಇದೆ. ಎರಡು ಬದಿ ತಡಗೋಡೆ ಹೊರತು ಪಡಿಸಿ, ಮಧ್ಯಬಾಗದಲ್ಲಿ 9 ಆಧಾರ ಸ್ತಂಭಗಳಿವೆ. 21.6 ಅಂತರದಲ್ಲಿ ಕಿಂಡಿ ಇವೆ.
ಎರಡೇ ವರ್ಷದಲ್ಲಿ ಪೂರ್ಣ
ಕಾಮಗಾರಿ ಪೂರ್ಣಗೊಳ್ಳಲು ಕರಾರಿನಲ್ಲಿ ನೀಡಿದ ಅವಧಿ 36 ತಿಂಗಳು. ಕಾಮಗಾರಿ ಆರಂಭಗೊಂಡು 1 ವರ್ಷ 3 ತಿಂಗಳು ಆಗಿದೆ. 7.5 ಕೋ.ರೂ ವೆಚ್ಚದಲ್ಲಿ ಶೇ.75 ರಷ್ಟು ಭಾಗ ಪೂರ್ಣಗೊಂಡಿದೆ. ಆ ಅಂದಾಜಿನಲ್ಲಿ 2017 ರ ಮೇ ಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ. ಹಾಗಾಗಿ ಕರಾರು ಅವಧಿಗೆ ಮುಂಚಿತವಾಗಿಯೇ ಸೇತುವೆ ಸಾರ್ವಜನಿಕರ ಸೇವೆಗೆ ಸಿದ್ದವಾಗಲಿದೆ. ಪ್ರಸ್ತುತ 6 ನೇ ಪಿಲ್ಲರ್ ನಿಂದ 7 ನೇ ಪಿಲ್ಲರ್ ಗೆ ಸ್ಲಾಬ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಳೆಗಾಲದ ಕಾರಣ, ಇನ್ನೂ ನೆಲ ಮಟ್ಟದ ಕಾಮಗಾರಿ ಆರಂಭಗೊಳ್ಳುವುದು ದಶಂಬರ್ ಬಳಿಕ.
ಧರ್ಮಸ್ಥಳಕ್ಕೆ ಮೈಸೂರು, ಮಡಿಕೇರಿ, ಸುಳ್ಯ, ಕಾಸರಗೋಡು ಭಾಗದಿಂದ ತೆರಳುವವರಿಗೆ ಇದು ಸಮೀಪದ ರಸ್ತೆಯಾಗಲಿದೆ. ಪ್ರಸ್ತುತ ಮಡಿಕೇರಿ-ಸುಳ್ಯ-ಪುತ್ತೂರು-ಉಪ್ಪಿನಂಗಡಿ-ಬೆಳ್ತಂಗಡಿ ಮಾರ್ಗವಾಗಿ ಸಂಚಾರ ವ್ಯವಸ್ಥೆ ಇದೆ. ಹೊಸ ಸೇತುವೆ ಸಂಚಾರ ಮುಕ್ತವಾದರೆ ಮಡಿಕೇರಿ-ಸುಳ್ಯ-ಬೆಳ್ಳಾರೆ-ಸವಣೂರು-ಶಾಂತಿಮೊಗರು ಮಾರ್ಗವಾಗಿ ಅಲಂಕಾರಿಗೆ ಸಂಪರ್ಕ ಸಾಧ್ಯವಾಗುತ್ತದೆ. ಅಂದರೆ ಅಲಂಕಾರು-ಸುರುಳಿ-ಆರ್ಲ (ನೆಲ್ಯಾಡಿ)-ಗೋಳಿತೊಟ್ಟು- ಪಟ್ರಮೆ ಮುಖಾಂತರ ಧರ್ಮಸ್ಥಳಕ್ಕೆ ಸಂಪರ್ಕ ಹತ್ತಿರವಾಗುತ್ತದೆ. ಇದರಿಂದ ಸುಮಾರು 67 ಕಿ.ಮೀ ದೂರ ಸಂಚಾರ ಉಳಿತಾಯವಾಗುತ್ತದೆ.
ರಸ್ತೆ ವಿಸ್ತರಣೆ
ಮಂಗಳೂರು-ಬೆಂಗಳೂರು, ಮಾಣಿ-ಮೈಸೂರು, ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ, ರಾಷ್ಟೀಯ ಹೆದ್ದಾರಿಗೆ ಈ ಸೇತುವೆ ಸಂಪರ್ಕ ಸೇತುವಾಗಲಿದೆ. ಪರಿಣಾಮ ಈ ಸೇತುವೆಯಲ್ಲಿ ಜನ ಸಂಚಾರವು ಅಧಿಕಗೊಳ್ಳಲಿದೆ. ಶಾಂತಿಮೊಗರು-ಬರೆಪ್ಪಾಡಿ 1 ಕಿ.ಮೀ ದೂರದ ರಸ್ತೆ ಅಭಿವೃದ್ಧಿ ಕಾರ್ಯವು ನಡೆಯಲಿದೆ. ಸವಣೂರು-ಬೆಳ್ಳಾರೆ ರಸ್ತೆಯ ಕನ್ನಡಕುಮೇರು ತನಕದ 1.5 ಕಿ.ಮೀ ರಸ್ತೆ 1.ಕೋಟಿ ಅನುದಾನದಲ್ಲಿ ವಿಸ್ತರಣೆಯಾಗಿದೆ. ಮುಂದುವರಿದ ಭಾಗವಾಗಿ ಪರಣೆ-ಪೆರುವಾಜೆ-ಮಾಸ್ತಿಕಟ್ಟೆ ಮೂಲಕ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ  8.5 ಕಿ.ಮೀ ದೂರದ ರಸ್ತೆ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.
ಸೇತುವೆ ಬಳಿ ರಸ್ತೆ ಅಭಿವೃದ್ಧಿ
ಕುದ್ಮಾರು  ಭಾಗದಲ್ಲಿ ಸೇತುವೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಖಾಸಗಿ ಸ್ಥಳ ಪಡೆದುಕೊಳ್ಳುವ ಪ್ರಕ್ರಿಯೆ ಜಿಲ್ಲಾಧಿಕಾರಿ ಅವರ ಹಂತದಲ್ಲಿದೆ.  
ಟೆಂಡರ್ ನಿಯಮ ಸಡಿಲಿಕೆ
2011-12 ರಲ್ಲಿ ಉದ್ದೇಶಿತ ಸೇತುವೆ ನಿರ್ಮಾಣ ಮಂಜೂರುಗೊಂಡಿತ್ತು. ಸುಮಾರು 9 ಕೋ.ರೂ ಅಂದಾಜು ವೆಚ್ಚದ ಯೋಜನೆಗೆ ಟೆಂಡರ್ ನಿಯಮದ ಬಿಗು ತಡೆ ಒಡ್ಡಿತ್ತು. ಶೇ.80 ಕೆಲಸ ಪೂರ್ಣಗೊಂಡ ಬಳಿಕ ಹಣ ಪಾವತಿಸುವ ನಿಯಮದಿಂದ, ಟೆಂಡರ್ ಕಾರ್ಯದಲ್ಲಿ ಭಾಗವಹಿಸಲು ಯಾರು ಮುಂದಾಗಲಿಲ್ಲ. ಪರಿಣಾಮ 8 ಬಾರಿ ಟೆಂಡರ್ ಆದರೂ, ಯೋಜನೆ ಅನುಷ್ಠಾನದ ಹಂತಕ್ಕೆ ತಲುಪಲಿಲ್ಲ. ಆ ಬಳಿಕ ನಿಯಮ ಸಡಿಲಿಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಂಜೂರುಗೊಂಡ ಯೋಜನೆ ಮೂರು ವರ್ಷ ಕಳೆದ ಬಳಿಕ ಅದರ ವೆಚ್ಚ ಗಾತ್ರವು 13 ಕೋ. ರೂ. ಗೆ ಏರಿಕೆ ಕಂಡಿತ್ತು. ಕೊನೆಗೂ ಪೂರ್ವಭಾವಿ ಕಾರ್ಯ ಮುಗಿದು, ಟೆಂಡರ್ ಪ್ರಕ್ರಿಯೆ ನಡೆದು, 2015 ರಲ್ಲಿ ಕಾಮಗಾರಿ ಆರಂಭಗೊಂಡಿತ್ತು.
ಭೂ ಸ್ವಾಧೀನಕ್ಕೆ  ಹಸಿರು ನಿಶಾನೆ
ಆರಂಭದಲ್ಲಿ ಸೇತುವೆಯ ಇಕ್ಕೆಲೆಯಲ್ಲಿ ಭೂ ಒತ್ತುವರಿ ಸಂಬಂಧಿಸಿ ಸ್ಥಳೀಯರ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಅದು ಪರಿಹಾರಗೊಂಡು ಕಂದಾಯ ಅಧಿಕಾರಿಗಳಿಂದ ದೃಢೀಕರಿಸಿಗೊಂಡು ಮೇಲಾಧಿಕಾರಿಗೆ ಸಲ್ಲಿಕೆ ಆಯಿತು. ಅನಂತರ ಸೇತುವೆ ಇಕ್ಕೆಲೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಎಲ್ಲಾ ಗೊಂದಲ ಬಗೆಹರಿದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

See also  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಹೆಚ್ಚಳಕ್ಕೆ ಸರ್ಕಾರ ಅಸ್ತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು