News Kannada
Tuesday, October 04 2022

ಕರಾವಳಿ

ಕೋಟಿಚೆನ್ನಯ್ಯ ಪ್ರತಿಯೊಬ್ಬ ನಾಗರಿಕರ ಬದುಕಿಗೆ ಅದರ್ಶವಾಗಲಿ : ಶಾಸಕ ವಿ.ಸುನೀಲ್ ಕುಮಾರ್ - 1 min read

Photo Credit :

ಕೋಟಿಚೆನ್ನಯ್ಯ ಪ್ರತಿಯೊಬ್ಬ ನಾಗರಿಕರ ಬದುಕಿಗೆ ಅದರ್ಶವಾಗಲಿ : ಶಾಸಕ ವಿ.ಸುನೀಲ್ ಕುಮಾರ್

ಕಾರ್ಕಳ: ಕೋಟಿಚೆನ್ನಯ್ಯ ಅವರು ಪ್ರತಿಯೊಬ್ಬ ನಾಗರಿಕರ ಬದುಕಿಗೆ ಆದರ್ಶವಾಗಲಿ. ಸಮಾಜದಲ್ಲಿ ನ್ಯಾಯಪರ ಹೋರಾಟಕ್ಕೆ ಪ್ರೇರಣೆಯಾಗಲಿ ಎಂದು ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ನಲ್ಲಿ ಕೋಟಿ ಚೆನ್ನಯ್ಯ ಯುವ ವೇದಿಕೆ ಕಾರ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಪ್ರಾಯೋಜಕತ್ವದಲ್ಲಿ ಆಯೋಜಿಸಿದ 460ನೇ ಕೋಟಿ ಚೆನ್ನಯ್ಯ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಕೋಟಿಚೆನ್ನಯ್ಯ ಥೀಮ್ ಪಾರ್ಕ್ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿತ್ತಾದರೂ ಅದರ ಅಭಿವೃದ್ಧಿ ವೇಗ ಕುಂಠಿತಗೊಳ್ಳುತ್ತಿದ್ದ ಕಾರಣಕ್ಕಾಗಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ ಮನವಿಗೆ ಪುರಸ್ಕರಿಸಿ ಹೆಚ್ಚುವರಿಯಾಗಿ 1ಕೋಟಿ ಅನುದಾನ ಬಿಡುಗಡೆಗೊಂಡಿದೆ. ಇದರಿಂದ ಪ್ರಮುಖ ರಸ್ತೆ ಅಭಿವೃದ್ಧಿ ಇಂಟರ್ಲಾಕ್ ಸಹಿತ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಫಲವಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ 2ಕೋಟಿ ಅನುದಾನ ಬಿಡುಗಡೆಯ ಪ್ರಸ್ತಾಪ ಸಲ್ಲಿಸಲಾಗಿದೆ. ಅದು ಶೀಘ್ರದಲ್ಲಿಯೇ ಬಿಡುಗಡೆಗೊಂಡು ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಚುರುಕು ಗೊಳ್ಳುತ್ತದೆ. ಸಂಸ್ಕೃತಿ, ಕಲೆ ಉಳಿಸುವ ಕಾರ್ಯಗಳು ಇಲ್ಲಿ ನಡೆಯುವ ಮೂಲಕ ಪ್ರಸಿದ್ಧಿ ಹೊಂದಲಿದೆ ಎಂಬ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ತುಳುಚಿತ್ರ ನಟ ನವೀನ್ ಡಿಪಡೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತನ್ನಲ್ಲಿರುವ ಪ್ರತಿಭೆಯನ್ನು ಸಮಾಜದಲ್ಲಿ ಗುರುತಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕನು ಮುಂದಾಗಬೇಕು. ಆಗ ವ್ಯಕ್ತಿಯನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಶಾಂತಿಯುತ ಜೀವನದಿಂದ ನೆಮ್ಮದಿ ಬದುಕು ಪ್ರಾಪ್ತಿಯಾಗುತ್ತದೆ. ಕಲಿಕೆಗೆ ಹೆಚ್ಚಿನ ಒತ್ತು ನೀಡುವುದರಿಂದ ಸ್ವಾವಲಂಬಿಗಳಾಗಲು ಸಾಧ್ಯವಿದೆ ಎಂದರು. 

ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಧಾ ಪ್ರಮುಖ ತುಳುವ ಬೊಳ್ಳಿ ದಯಾನಂದ ಕತ್ತರ್ಸರ್ ಮಾತನಾಡಿ, ಮೂಡನಂಬಿಕೆಯಿಂದ ದೂರವಾಗಿ ಮೂಲನಂಬಿಕೆಯತ್ತ ಯುವ ಜನಾಂಗ ಮುಂದಾಗಬೇಕು. ಗರಡಿಯ ಮಹತ್ವ ತಿಳಿದುಕೊಳ್ಳುವ ಮೂಲಕ ದೇಹದೃಢ ಕಾರ್ಯಚಟುವಟಿಕೆಗಳಲ್ಲಿ ತೊಡಗಿ ಹೆಚ್ಚಿನ  ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಪರಿಸರ ಉಳಿಸುವ ಜೊತೆಗೆ ಗೋವುಗಳನ್ನು ಸಾಕಿ ಸಲಹಿ ಉತ್ತಮ ಸಮಾಜ ನಿರ್ಮಾಣ ಗುರಿ ಹೊಂದಬೇಕು ಎಂದರು.  

ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್ ಎಸ್.ಕೋಟ್ಯಾನ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ, ಐಸ ಚಲನಚಿತ್ರದ ನಿರ್ಮಾಪಕ ಉದಯ ಶೆಟ್ಟಿ ಕಾಂತಾವರ, ಕೋಟಿ ಚೆನ್ನಯ್ಯ ಕನ್ನಡ ಧಾರಾವಾಹಿಯ ನಿರ್ದೇಶಕ ಚಂದ್ರಹಾಸ ಆಳ್ವ ಸಂದಭೋಚಿತವಾಗಿ ಮಾತನಾಡಿ ಕೋಟಿಚೆನ್ನಯ್ಯ ಅವರ ಆದರ್ಶಗಳನ್ನು ಜಾತಿ-ಧರ್ಮ-ಭಾಷೆ ಎಲ್ಲೆ ಮೀರಿ ಪ್ರತಿಯೊಬ್ಬ ನಾಗರಿಕರ ಅಂತರಾಳದಲ್ಲಿ ಬೆಳೆಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು.

See also  ಜ್ಯುವೆಲ್ಲರಿ ದರೋಡೆ ಪ್ರಕರಣ: ಅಫ್ಘಾನಿಸ್ತಾನ ಪ್ರಜೆಗಳಿಬ್ಬರ ಸಹಿತ ಮೂವರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು