News Kannada
Monday, September 26 2022

ಕರಾವಳಿ

ಮನೆ ನಿವೇಶನಕ್ಕೆ ಅರಣ್ಯ ಸಮಸ್ಯೆ: ಜಂಟಿ ಸರ್ವೇಗೆ ಡಿಸಿ ಆದೇಶ - 1 min read

Photo Credit :

ಮನೆ ನಿವೇಶನಕ್ಕೆ ಅರಣ್ಯ ಸಮಸ್ಯೆ: ಜಂಟಿ ಸರ್ವೇಗೆ ಡಿಸಿ ಆದೇಶ

ಸುಳ್ಯ: ಗ್ರಾಮೀಣ ಪ್ರದೇಶದಲ್ಲಿ ಮನೆ ನಿವೇಶನ ಮತ್ತು 94ಸಿ ಹಕ್ಕು ಪತ್ರ ವಿತರಣೆಗೆ ಅರಣ್ಯ ಭೂಮಿಯ ಸಮಸ್ಯೆಯನ್ನು ಪರಿಹರಿಸಲು ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಆದೇಶ ನೀಡಿದ್ದಾರೆ.


ಗುರುವಾರ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ವಸತಿ ನಿವೇಶನ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಳವನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆಕ್ಷೇಪ ಇದ್ದರೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಗಡಿಗುರುತು ಮಾಡಬೇಕು. ಅರಣ್ಯ ಎಂದು ತಿಳಿದರೆ ಅದನ್ನು ಹೊರತು ಪಡಿಸಿ ಉಳಿದ ಸ್ಥಳಕ್ಕೆ ಅರಣ್ಯ ಇಲಾಖೆಯ ವತಿಯಿಂದ ನಿರಾಕ್ಷೇಪಣಾ ಪತ್ರ ಪಡೆದು ಫಲಾನುಭವಿಗಳಿಗೆ ನೀಡಲು ಕಂದಾಯ ಇಲಾಖೆ ಕ್ರಮ ಜರುಗಿಸಬೇಕು ಎಂದು ಅವರು ತಹಶೀಲ್ದಾರ್ರಿಗೆ ಆದೇಶ ನೀಡಿದರು. ಗ್ರಾಮ ಪಂಚಾಯಿತಿಗಳು  ಮನೆ ನಿವೇಶನ ಗುರುತಿಸಲು ಆದ್ಯತೆ ನೀಡಬೇಕು ಎಂದರು.

94ಸಿ ಮತ್ತು 94ಸಿಸಿ ಯೋಜನೆಯಡಿಯಲ್ಲಿ ಅರ್ಹರಾದ ಎಲ್ಲರೂ ಅರ್ಜಿ ಸಲ್ಲಿಸಬೇಕು. ಯಾವುದೇ ಅರ್ಜಿಗಳನ್ನೂ ತಿಸರಸ್ಕರಿಸಬಾರದು. ಗೋಮಾಳದಲ್ಲಿ ಅಥವಾ ಅರಣ್ಯ ಬಫರ್ ಜಾಗದಲ್ಲಿ ಮನೆ ಕಟ್ಟಿದ್ದರೆ  ಕಾನೂನಿನಲ್ಲಿ ತಿದ್ದುಪಡಿ ತಂದು ಅವರಿಗೆ ಹಕ್ಕು ಪತ್ರ ಕೊಡುವುದಾಗಿ ಕಂದಾಯ ಮತ್ತು ಅರಣ್ಯ ಸಚಿವರು ಭರವಸೆ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿ 94ಸಿಸಿ ಯೋಜನೆಯಡಿಯಲ್ಲಿ ಒಂದೂ ಕಾಲೂ ಸೆಂಟ್ಸ್ ಬದಲು ಮೂರು ಸೆಂಟ್ಸ್ ನೀಡಲು ತಿದ್ದುಪಡಿ ತರುವುದಾಗಿ ಕಂದಾಯ ಸಚಿವರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಅರ್ಹರಾದ ಎಲ್ಲರಿಗೂ ಹಕ್ಕು ಪತ್ರ ದೊರೆಯಲಿದೆ. ಯಾವುದೇ ಅರ್ಜಿಗಳನ್ನೂ ತಿಸ್ಕರಿಸಬಾರದು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು. ಈ ಹಿಂದೆ ತಿರಸ್ಕೃತಗೊಂಡ ಅರ್ಜಿಯನ್ನೂ ಅರ್ಹತೆ ಇದ್ದರೆ ಮತ್ತೆ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಕೊಲ್ಲಮೊಗ್ರ ಮತ್ತು ಕಲ್ಮಕಾರ್ ನಲ್ಲಿ ಆರ್ ಟಿಸಿಯಲ್ಲಿ ಸುರಕ್ಷಿತ ಅರಣ್ಯ ಎಂದು ನಮೂದಾಗಿರುವುದರಿಂದ ಜನರಿಗೆ ಹಕ್ಕು ಪತ್ರ ನೀಡಲು ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದರು. ಈ ಕುರಿತು ಪರಿಶೀಲನೆ ನಡೆಸಲಾಗಿದ್ದು ಹಲವು ದಶಕಗಳ ಹಿಂದೆಯೇ ಹಾಗೆ ನಮೂದಾಗಿದೆ. ಇದನ್ನು ಸರ್ಕಾರಿ ಮಟ್ಟದಲ್ಲಿ ಸರಿಪಡಿಸಬೇಕಾಗಿದೆ. ಈ ಕುರಿತು ಒಂದು ವಾರದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ  ಸಲ್ಲಿಸುವುದಾಗಿ ಸಹಾಯಕ ಕಮೀಷನರ್ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಸುಳ್ಯದ ಮಿಲಿಟ್ರಿ ಗ್ರೌಂಡ್ ನ ಸ್ಥಳದಲ್ಲಿ ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡಲು ಕೇಂದ್ರ ರಕ್ಷಣಾ ಸಚಿವಾಲಯದಿಂದ ಅನುಮತಿ ದೊರೆಯಬೇಕಾಗಿದೆ. ಈ ಪ್ರದೇಶದ ಜನರ ಮನವಿಯಂತೆ ಪರಿಶೀಲನೆ ನಡೆಸಿ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆತರೆ ಮರು ಸರ್ವೇ ನಡೆಸಿ ಹಕ್ಕು ಪತ್ರ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

See also  ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಬಸ್-ಟೆಂಪೋ ಮುಖಾಮುಖಿ ಡಿಕ್ಕಿ:17 ಮಂದಿಗೆ ಗಾಯ, ಮೂವರ ಪರಿಸ್ಥಿತಿ ಗಂಭೀರ

ಅ.15ರೊಳಗೆ ವರದಿ ನೀಡಲು ಆದೇಶ:
ಸುಳ್ಯ ನಗರದಲ್ಲಿ ಹಲವು ನಿವೇಶನಗಳಲ್ಲಿ ಹಕ್ಕು ಪತ್ರ ದೊರೆತವರು ವಾಸವಿಲ್ಲದೆ ಬೇರೆಯವರು ಮನೆ ಕಟ್ಟಿ ವಾಸಿಸುತ್ತಿದ್ದಾರೆ. ಇದರಿಂದ ಹಲವು ಬಡವರಿಗೆ ಸರ್ಕಾರೀ ಸೌಲಭ್ಯ ದೊರೆಯುತ್ತಿಲ್ಲ ಎಂದು ಶಾಸಕರು ಹೇಳಿದರು. ಈ ಕುರಿತು ಕಂದಾಯ ಇಲಾಖೆ ಮತ್ತು ನಗರ ಪಂಚಾಯಿತಿ ಸರ್ವೇ ನಡೆಸಿ ಅ.15ರೊಳಗೆ ವರದಿ ನೀಡುವಂತೆ ನಗರ ಪಂಚಾಯಿತಿ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಮಂಜೂರಾತಿ ಆದವರರು ವಾಸವಿಲ್ಲದಿದ್ದರೆ ಅದನ್ನು ರದ್ದುಪಡಿಸಿ ನಿವೇಶನದಲ್ಲಿ ವಾಸವಿರುವವರಿಗೆ ಹಕ್ಕು ಪತ್ರ ನೀಡುವುದಾಗಿ ಡಿಸಿ ಹೇಳಿದ್ದಾರೆ.

110 ಕೆವಿ ಸಬ್ ಸ್ಟೇಷನ್ ವಿಶೇಷ ಸಭೆ:
ಸುಳ್ಯ ತಾಲೂಕಿಗೆ ಮಂಜೂರಾಗಿರುವ 110 ಕೆವಿ ಸಬ್ಸ್ಟೇಷನ್ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಂಗಾರ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ ಆಗ್ರಹಿಸಿದರು. ಈ ಕುರಿತು ಕೆಪಿಟಿಸಿಎಲ್ ಮತ್ತು ಸಂಧಪಟ್ಟವರಿಂದ ಮಾಹಿತಿ ಪಡೆಯಲಾಗುವುದು ಮತ್ತು ಈ ಕುರಿತು ಚರ್ಚಿಸಲು ಸುಳ್ಯದಲ್ಲಿ ವಿಶೇಷ ಸಭೆ ಕರೆಯುವುದಾಗಿ ಡಿಸಿ ತಿಳಿಸಿದರು.

ಕ್ರೀಡಾಂಗಣ ಪೂರ್ತಿಗೆ ಕ್ರಮ:
ಒಂದೂವರೆ ದಶಕಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯ ತಾಲೂಕು ಕ್ರೀಡಾಂಗಣದ ಬಗ್ಗೆ ಪತ್ರಕರ್ತರು ಜಿಲ್ಲಾಧಿಕಾರಿಯ ಗಮನ ಸೆಳೆದರು. ಈ ಕುರಿತು ಸಹಾಯಕ ಕಮೀಷನರ್ ಅವರೊಂದಿಗೆ ಡಿಸಿ ಚರ್ಚಿಸಿದರು. ಈಗಾಗಲೇ ಸುಮಾರು 95 ಲಕ್ಷ ರೂ ಕ್ರೀಡಾಂಗಣಕ್ಕಾಗಿ ಖರ್ಚು ಮಾಡಲಾಗಿದೆ. ಇಲ್ಲಿ 200 ಮೀಟರ್ ಟ್ರ್ಯಾಕ್ ನಿರ್ಮಿಸಲಷ್ಟೇ ಸ್ಥಳ ದೊರೆಯವಹುದು ಎಂದು ಎಸಿ ತಿಳಿಸಿದರು. ಈಗ ನಿರ್ಮಿಸಿದ ಸ್ಥಳದಲ್ಲಿ 200 ಮೀಟರ್ ಟ್ರ್ಯಾಕ್ನ ಕ್ರೀಡಾಂಗಣವನ್ನು ಶೀಘ್ರ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲು ಮತ್ತು 400 ಮೀಟರ್ ಟ್ರ್ಯಾಕ್ ನ ಕ್ರೀಡಾಂಗಣಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ ಸೂಚಿಸಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶುಭದಾ ಎಸ್.ರೈ, ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಸದಸ್ಯ ಪ್ರಕಾಶ್ ಹೆಗ್ಡೆ, ಟಿ.ಎಂ.ಶಹೀದ್, ಹರೀಶ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು