News Kannada
Monday, September 26 2022

ಕರಾವಳಿ

ಹೆರಿಗೆ ವಿಭಾಗದಲ್ಲಿ ವೈದ್ಯರಿಲ್ಲದೇ ಬೆಡ್ ಗಳೆಲ್ಲ ಖಾಲಿ ಖಾಲಿ - 1 min read

Photo Credit :

ಹೆರಿಗೆ ವಿಭಾಗದಲ್ಲಿ ವೈದ್ಯರಿಲ್ಲದೇ ಬೆಡ್ ಗಳೆಲ್ಲ ಖಾಲಿ ಖಾಲಿ

ಕಾರ್ಕಳ: ವೈದ್ಯರಿಲ್ಲದೇ ತಾಲೂಕು ಸರಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ಬೆಡ್ ಗಳೆಲ್ಲವೂ ಖಾಲಿ ಖಾಲಿಯಾಗಿದೆ. ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಈ ಸಮಸ್ಸೆ ತಲೆದೋರಿದ್ದು ಜನಪ್ರತಿನಿಧಿಗಳಾಗಲಿ ಅಥವಾ ಇಲಾಖಾಧಿಕಾರಿಗಳು ತುರ್ತು ರೀತಿಯಲ್ಲಿ ಸ್ಪಂದಿಸದೇ ಹೋಗಿರುವುದರಿಂದ ಇದರ ನೋವು ಬಡವರ್ಗದ ರೋಗಿಗಳು ಅನುಭವಿಸಬೇಕಾದ ದುರ್ಗತಿ ಎದುರಾಗಿದೆ.

 ಪ್ರಮುಖ ವೈದ್ಯರೇ ಹಾಸಿಗೆ ಹಿಡಿದಾಗ…

ತಾಲೂಕು ಸರಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ವಿಕ್ರಂ ಹೆಬ್ಬಾರ್ ಅವರು ಹೆರಿಗೆ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತದ್ದರು. ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಇದ್ದ ಅವರನ್ನು ಜೂನ್ 19ರಂದು ಹೆಚ್ಚಿನ ಚಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ಆರ್ ಹೆಚ್ಎಂನಡಿ ಹೆರಿಗೆ ವಿಭಾಗದಲ್ಲಿ ದುಡಿಯುತ್ತಿದ್ದ ಡಾ.ದಿಶಾ ಆಗಸ್ಟ್ 27ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾರ್ಕಳದ ಇಎಸ್ಐ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಿಂಗಳೊಂದಕ್ಕೆ ಸರಾಸರ 50 ಹೆರಿಗೆ

ಮೇಲ್ದಾರ್ಜೆಗೇರಿದ ತಾಲೂಕು ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 50 ಹೆರಿಗೆಯಾಗುತ್ತಿತ್ತು. ಇದರಲ್ಲಿ ಮೂಡಬಿದ್ರಿ, ಬೆಳ್ತಂಗಡಿ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಕಡೆಗಳಿಂದಲೂ ಗರ್ಭೀಣಿಯರು ಬರುತ್ತಿದ್ದರು. ಅವರಲ್ಲಿ ಸರಾಸರಿ 30 ಮಂದಿಯರು ಸಾಮಾನ್ಯ, 20 ಮಂದಿಯರು ಶಸ್ತ್ರಚಿಕಿತ್ಸೆಗೊಳಗಾಗಿ ಮಕ್ಕಳನ್ನು ಜನ್ಮ ನೀಡುತ್ತಿದ್ದರು.

30 ಬೆಡ್ ಗಳು

ಹೆರಿಗೆ ವಾರ್ಡ್ ನಲ್ಲಿ ಒಟ್ಟು 30 ಬೆಡ್ ಗಳಿದ್ದು ಪ್ರತಿದಿನ ಅವುಗಳೆಲ್ಲವೂ ತುಂಬಿ ತುಳುಕುತ್ತಿತ್ತು. ಇದೇ ಕಾರಣದಿಂದಾಗಿ ಓಎನ್ ಜಿಸಿ ಸಹಭಾಗಿತ್ವದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಗೆ ಅಗತ್ಯವಾದ ಹೆಚ್ಚುವರಿ 20 ಚೆಡ್ ಒಳಗೊಂಡಿರುವ ಸುಸಜ್ಜಿತವಾದ ಸುಮಾರು 1 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸುವಲ್ಲಿ ಮಾಜಿಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಕಾರಣಿಭೂತರಾಗಿದ್ದಾರೆ. ಕಾಮಗಾರಿ ಅಂತಿಮ ಹಂತಿಮದಲ್ಲಿದ್ದು ನೂತನ ಕಟ್ಟಡ ಉದ್ಘಾಟನೆಯ ಕ್ಷಣಗಣನೆಗೆ ಇರುವಾಗಲೇ ಹೆರಿಗೆ ವಿಭಾಗದಲ್ಲಿ ವೈದ್ಯರ ಬರ ಎದುರಾಗಿದೆ.

 

ವಾರಕ್ಕೆ ಎರಡು ದಿನ ತಾತ್ಕಾಲಿಕ ವೈದ್ಯರು ಲಭ್ಯ!

ಹೆಬ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ. ರಂಜಿತ್ ನಾಯಕ್ ಅವರನ್ನು ಇಲಾಖೆಯು ತಾತ್ಕಾಲಿಕ ನೆಲೆಯಲ್ಲಿ  ಸೋಮವಾರ ಹಾಗೂ ಗುರುವಾರ ತಾಲೂಕು ಸರಕಾರಿ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ನಿಯೋಜಿಸಿದೆ. ಇದರಿಂದ ಬಹುತೇಕ ರೋಗಿಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂಬುವುದಕ್ಕೆ ಹೆರಿಗೆ ವಿಭಾಗದ ಬೆಡ್ ಗಳೇ ಸಾರಿ ಹೇಳುತ್ತದೆ.

ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ -ಉದಯ ಎಎಸ್.ಕೋಟ್ಯಾನ್, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಲೆದೋರಿರುವ ಹಲವು ಸಮಸ್ಸೆಗಳ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಸಮಸ್ಯೆ ತರಿತ್ವದಲ್ಲಿ ಬಗೆಹರಿಯಲಿದೆ.

 

See also  ತುಳುನಾಡ ರಕ್ಷಣಾ ವೇದಿಕೆ ಯುವ ಘಟಕದ ಪದಾಧಿಕಾರಿಗಳ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು