News Kannada
Wednesday, October 05 2022

ಕರಾವಳಿ

ಮನೆಗೆ ತೆರಳಿ ದೀಕ್ಷಿತ್ ಗೌಡನ ಭೇಟಿ ಮಾಡಿದ ಸಚಿವ ರಮಾನಾಥ ರೈ - 1 min read

Photo Credit :

ಮನೆಗೆ ತೆರಳಿ ದೀಕ್ಷಿತ್ ಗೌಡನ ಭೇಟಿ ಮಾಡಿದ ಸಚಿವ ರಮಾನಾಥ ರೈ

ಸುಳ್ಯ: ಇತ್ತೀಚೆಗೆ ಮನೆ ಬಿಟ್ಟು ತೆರಳಿದ ಕಾರಣ ಮತಾಂತರಗೊಂಡಿದ್ದಾನೆ ಎಂಬ ಆರೋಪಕ್ಕೊಳಗಾಗಿದ್ದ ಸುಳ್ಯ ಅರಂಬೂರಿನ ದೀಕ್ಷಿತ್ ಗೌಡ ಮನೆಗೆ ಹಿಂತಿರುಗಿ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಮನೆಗೆ ತೆರಳಿ ಆತನನ್ನು ಭೇಟಿ  ಮಾಡಿದ್ದಾರೆ.

ಸೆ.8 ರಂದು ಮುಂಜಾನೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಈತ ನಮಾಜ್ ಮಾಡುತ್ತಿದ್ದಾನೆ ಎಂಬ ಅನುಮಾನದಿಂದ ತಂದೆ ಜನಾರ್ಧನ ಗೌಡ ಇದನ್ನು ಪ್ರಶ್ನಿಸಿದ್ದರು. ಇದರಿಂದ ಮನಸ್ತಾಪ ಉಂಟಾಗಿ ದೀಕ್ಷಿತ್ ಮನೆ ಬಿಟ್ಟು ತೆರಳಿದ್ದ. ಬಳಿಕ ಮನೆಯವರು ದೀಕ್ಷಿತ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದರು. ಈ ಮಧ್ಯೆ ದೀಕ್ಷಿತ್ ಗೌಡ ಮತಾಂತರಗೊಂಡಿದ್ದಾನೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿತ್ತು. ಇದೀಗ ದೀಕ್ಷಿತ್ ಗೌಡ ಮನೆಗೆ ಹಿಂತಿರುಗಿ ಬಂದಿದ್ದಾನೆ. ಈ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು ದೀಕ್ಷಿತ್ ಗೌಡನ ಮನೆಗೆ ಭೇಟಿ ನೀಡಿದ್ದಾರೆ. ನಾನು ಮತಾಂತರ ಆಗಿಲ್ಲ, ಮತಾಂತರ ಆಗಿದ್ದೇನೆ ಎಂದು ಯಾರೋ ಅಪಪ್ರಚಾರ ಮಾಡಿದ್ದಾರೆ, ತಂದೆಯೊಂದಿಗೆ ಉಂಟಾದ ಮನಸ್ತಾಪದಿಂದ  ಮನೆ ಬಿಟ್ಟು  ತೆರಳಿದ್ದೆ ಎಂದು ದೀಕ್ಷಿತ್ ಗೌಡ ಸಚಿವರಲ್ಲಿ ಮತ್ತು ಮಾಧ್ಯಮ ಪ್ರತಿನಿಧಿಗಳಲ್ಲಿ ಹೇಳಿದ್ದಾರೆ. ಮತಾಂತರ ಆಗಿದ್ದೇನೆ ಎಂಬ ಪ್ರಚಾರ ಆಗಿದೆ ಎಂಬ ವಿಚಾರ ಗಮನಕ್ಕೆ ಬಂದ ಕೂಡಲೇ ಹಿಂತಿರುಗಿ ಬಂದಿದ್ದೇನೆ ಎಂದು ದೀಕ್ಷಿತ್ ಗೌಡ ಸಚಿವರಲ್ಲಿ ವಿವರಿಸಿದರು. ದೀಕ್ಷಿತ್ ಗೌಡ ಮತ್ತು ಕುಟುಂಬಸ್ಥರಲ್ಲಿ ಮಾತನಾಡಿದ ಸಚಿವರು ಅವರಿಗೆ ಧೈರ್ಯ ತುಂಬಿದರು.

ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ದಿವ್ಯಪ್ರಭಾ ಚಿಲ್ತಡ್ಕ, ಎಸ್.ಸಂಶುದ್ದೀನ್, ಪಿ.ಎಸ್.ಗಂಗಾಧರ, ಕೆ.ಗೋಕುಲ್ದಾಸ್ ಮತ್ತಿತರರು ಉಪಸ್ಥಿತರಿದ್ದರು.

ಮತಾಂತರದ ಹೆಸರಿನಲ್ಲಿ ರಾಜಕೀಯ: ಸಚಿವ ರೈ
ಮತಾಂತರದ ಗುಲ್ಲೆಬ್ಬಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.  ಸುಳ್ಯ ಅರಂಬೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತಾಂತರ ಮತ್ತಿತರ ಸೂಕ್ಷ್ಮ ವಿಷಯಗಳನ್ನು ಎತ್ತಿಕಟ್ಟಿ ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಸಲಾಗುತಿದೆ. ಈ ರೀತಿಯ ಊಹಾಪೋಹಗಳಿಗೆ, ವದಂತಿ ಮತ್ತು ಅಪ ಪ್ರಚಾರಗಳಿಗೆ ಜನರು ಕಿವಿಗೊಡಬಾರದು ಎಂದು ಸಚಿವರು ಹೇಳಿದರು.

See also  ವೈದ್ಯೆಯ ಅಪಮಾನದ ವಿಡಿಯೋ ವೈರಲ್ :ಜಿ.ಪಂ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು