News Kannada
Friday, October 07 2022

ಕರಾವಳಿ

ಡಿವೈಡರ್ ಏರಿ ಬೈಕಿಗೆ ಡಿಕ್ಕಿ ಹೊಡೆದ ಕಾರು: ಸಹಸವಾರ ಸಾವು - 1 min read

Photo Credit :

ಡಿವೈಡರ್ ಏರಿ ಬೈಕಿಗೆ ಡಿಕ್ಕಿ ಹೊಡೆದ ಕಾರು: ಸಹಸವಾರ ಸಾವು

ಉಳ್ಳಾಲ: ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಡಿವೈಡರ್ ಹಾರಿದ ಕಾರು ಬೈಕಿಗೆ ಡಿಕ್ಕಿ ಹೊಡೆದು, ಸಹಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ  ಘಟನೆ ತೊಕ್ಕೊಟ್ಟು ಕಾಪಿಕಾಡು ಸಮೀಪ ರಾ.ಹೆ.66 ರಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಕಣ್ವತೀರ್ಥ ನಿವಾಸಿ ಗಂಗಾಧರ್ .ಕೆ.ಎಂ (45)  ಸಾವನ್ನಪ್ಪಿದವರು. ಬೈಕ್ ಸವಾರ ಭಗವಾನ್ ದಾಸ್   ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ತಲಪಾಡಿಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ  ತೊಕ್ಕೊಟ್ಟು ಮಂಗಳೂರ್ ಸ್ವೀಟ್ಸ್ ಮಾಲೀಕರಿಗೆ ಸೇರಿದ ಕಾರನ್ನು ಅವರ ಪುತ್ರ  ಅಮಿತ ವೇಗದಲ್ಲಿ ತಲಪಾಡಿ ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ.  ಕಾಪಿಕಾಡು ಸಮೀಪ   ನಿಯಂತ್ರಣ ತಪ್ಪಿದ ಕಾರು ಡಿವೈಡರನ್ನು ಏರಿ ತೊಕ್ಕೊಟ್ಟುವಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ  ಬೈಕಿಗೆ  ಡಿಕ್ಕಿ ಹೊಡೆದಿದೆ. ಘಟನೆಯಿಂದ ಉದ್ರಿಕ್ತ ಗುಂಪು ಕಾರು ಹಾನಿ ನಡೆಸಲು ಮುಂದಾಗಿದ್ದು, ಸಕಾಲಿಕ ಪೊಲೀಸರ ಆಗಮನದಿಂದ  ಅದು ನಿಂತಂತಾಗಿದೆ. ಕುಂಪಲ ನಿವಾಸಿ ಯುವಕರ ತಂಡ ಗಾಯಾಳುವನ್ನು ಹಾಗೂ ಸಹಸವಾರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.  ಮೃತ ಗಂಗಾಧರ್  ಕಾರ್ಪೆಂಟರ್ ಆಗಿದ್ದು, ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.

See also  ರಾಷ್ಟ್ರೀಯ ಕ್ರೀಡಾಕೂಟಕ್ಕೆ ರಕ್ಷಿತ್ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು