News Kannada
Tuesday, October 04 2022

ಕರಾವಳಿ

ಮಾದಕ ವಸ್ತು-ಮದ್ಯ ಮಾಫಿಯಾ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ: ಇ. ಚಂದ್ರಶೇಖರನ್ - 1 min read

Photo Credit :

ಮಾದಕ ವಸ್ತು-ಮದ್ಯ ಮಾಫಿಯಾ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ: ಇ. ಚಂದ್ರಶೇಖರನ್

ಕಾಸರಗೋಡು: ಮದ್ಯ-ಮಾದಕ ವಸ್ತು ಮಾಫಿಯಾ ವಿರುದ್ಧ ಸಮಾಜ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಭಿಪ್ರಾಯಪಟ್ಟರು.

ಅವರು ಗಾಂಧಿ ಜಯಂತಿ ಆಚರಣೆ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ, ಅಬಕಾರಿ ಇಲಾಖೆ ಆದಿತ್ಯವಾರ ಕಾಞ೦ಗಾಡ್ ನಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಜಾಗ್ರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂತ್ರಜ್ಞಾನ, ಶಿಕ್ಷಣ ವಲಯದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಹೊಸ ತಲೆಮಾರಿಗೆ ಮಾದಕ ವಸ್ತು-ಮದ್ಯ ಮಾಫಿಯಾ ಕಂಟಕವಾಗಿ ಪರಿಣಮಿಸಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸಚಿವರು ಈ ಸಂಧರ್ಭ ಹೇಳಿದರು.

ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್, ಕಾಸರಗೋಡು ಅಬಕಾರಿ ಸಹಾಯಕ ಆಯುಕ್ತ ಮ್ಯಾಥ್ಯೂ ಕುರಿಯನ್, ನಗರಸಭಾ ಅಧ್ಯಕ್ಷರಾದ ಭೀಫಾತಿಮ್ಮ ಇಬ್ರಾಹಿಂ, ಎನ್.ಜುಲೈಕಾ, ವಿ.ಪಿ ಜಾನಕಿ, ಜಿಲ್ಲಾ ವಾರ್ತಾಧಿಕಾರಿ ಇ.ವಿ ಸುಗತನ್, ಸಿ.ಕೆ ಸುನಿಲ್ ಕುಮಾರ್, ಎನ್.ಗಂಗಾಧರನ್, ಎನ್.ಜಿ ರಘುನಾಥನ್  ಮೊದಲಾದವರು ಉಪಸ್ಥಿತರಿದ್ದರು .

See also  ಪಾಕ್ ಕುತಂತ್ರದ ಬಗ್ಗೆ ಜನರು ಜಾಗೃತರಾಗಬೇಕು: ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು