News Kannada
Tuesday, September 27 2022

ಕರಾವಳಿ

ಕಾಸರಗೋಡಿಗೆ ಸರಿಯಾದ ಶೌಚಾಲಯ ಇಲ್ಲದ ಸ್ಥಿತಿ - 1 min read

Photo Credit :

ಕಾಸರಗೋಡಿಗೆ ಸರಿಯಾದ ಶೌಚಾಲಯ ಇಲ್ಲದ ಸ್ಥಿತಿ

ಕಾಸರಗೋಡು: ಸಂಪೂರ್ಣ ಶೌಚಾಲಯ ಗುರಿಯೊಂದಿಗೆ  ಬಯಲು ಸ್ವಚ್ಛ  ಜಿಲ್ಲೆಯನ್ನಾಗಿ  ಕಾಸರಗೋಡನ್ನು ಘೋಷಿಸಿದ್ದರೂ ಕಾಸರಗೋಡು ಸೇರಿದಂತೆ ನಗರಕ್ಕೆ ತಲಪುವವರು ಶೌಚಾಲಯ ಇಲ್ಲದ ಸ್ಥಿತಿ ತಲೆದೋರಿದೆ.

ಅಕ್ಟೊಬರ್ 9 ರಂದು ಸಂಪೂರ್ಣ ಬಯಲು ಸ್ವಚ್ಛ ಜಿಲ್ಲೆಯನ್ನಾಗಿ  ಘೋಷಿಸಲಾಗಿತ್ತು.ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತಾ  ಮಿಷನ್  ನೇತೃತ್ವದಲ್ಲಿ   ಈ ಯೋಜನೆ ಜಾರಿಗೆ ತರಲಾಗಿತ್ತು. ಆದರೆ  ನಗರಕ್ಕೆ ತಲಪುವವರಿಗೆ ಪ್ರಾಥಮಿಕ ಕಾರ್ಯಕ್ಕೆ  ತೆರೆದ ಸ್ಥಳವೇ ಅನಿವಾರ್ಯವಾಗಿದೆ. ನಗರದಲ್ಲಿರುವ  ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿದ್ದ ಶೌಚಾಲಯಕ್ಕೆ ಬೀಗ ಜಡಿದು ಒಂದು ವಾರ ಕಳೆಯಿತು. ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಇ-ಶೌಚಾಲಯ  ಮೂಲೆಗೆ ಸೇರಿ  ಪ್ರದರ್ಶನ ವಸ್ತುವಾಗಿ ಉಳಿದುಕೊಂಡಿದೆ.

ಕುಂಬಳೆ  ಬಸ್ಸು ನಿಲ್ದಾಣದಲ್ಲಿ  ಶೌಚಾಲಯ ಇದ್ದರೂ ಅದು ಸಾರ್ವಜನಿಕರ ಉಪಯೋಗಕ್ಕೆ ಲಭಿಸುತ್ತಿಲ್ಲ.  ಬೀಗ ಜಡಿಯಲಾಗಿದೆ. ಬದಿಯಡ್ಕ, ಉಪ್ಪಳದಲ್ಲೂ  ಸ್ಥಿತಿ ಭಿನ್ನವಾಗಿಲ್ಲ. ಕಾಸರಗೋಡು ಹಳೆ ಬಸ್ಸು ನಿಲ್ದಾಣ ನಗರಸಭಾ ಕಟ್ಟಡದಲ್ಲಿರುವ ಶೌಚಾಲಯಕ್ಕೆ  ಬೀಗ ಜಡಿಯಲಾಗಿದೆ ಮಾತ್ರವಲ್ಲ. ಹೊರಗಡೆ ಅಳವಡಿಸಿದ್ದ  ಬಲ್ಬ್ ಗಳು ಕೂಡಾ ನಾಪತ್ತೆಯಾಗಿದೆ. ಮೋಟಾರ್ ಪಂಪ್  ಹಾಳಾದುದರಿಂದ ನೀರು ಪೂರೈಕೆ ಯಾಗುತ್ತಿಲ್ಲ. ಇದರಿಂದ ಮುಚ್ಚಲಾಗಿದೆ ಎಂಬ ಉತ್ತರ ಅಧಿಕಾರಿಗಳು ನೀಡುತ್ತಾರೆ. ಆದರೆ ವಾರದಿಂದ ನಗರಸಭೆಗೆ  ಮೋಟಾರ್ ದುರಸ್ತಿಗೊಳಿಸಲು ಸಾಧ್ಯವಾಗಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಗರಕ್ಕೆ ಹಲವು  ಅಗತ್ಯ ಸೇವೆಗಳಿಗೆ ಸಾವಿರಾರು ಮಂದಿ ತಲಪುತ್ತಾರೆ. ಆದರೆ ಪ್ರಾಥಮಿಕ  ಕಾರ್ಯಕ್ಕೆ ಸೌಲಭ್ಯವಿಲ್ಲದೆ ಮಹಿಳೆಯರು, ವಿದ್ಯಾರ್ಥಿನಿಯಯರು, ಮಕ್ಕಳು, ವರ್ತಕರು ಹಾಗೂ ಇನ್ನಿತರರು ಸಮಸ್ಯೆಗೆ  ಸಿಲುಕುತ್ತಿದ್ದಾರೆ.

ಜಿಲ್ಲೆಯನ್ನು   ಸಂಪೂರ್ಣ ಶೌಚಾಲಯ ಎಂದು ಘೋಷಿಸಿದ್ದರೂ ಕಾಸರಗೋಡು ಜಿಲ್ಲೆಯ ಪೇಟೆಗಳಿಗೆ ತಲಪುವವರ ಸಮಸ್ಯೆಗೆ  ಕೊನೆ ಇಲ್ಲದಂತಾಗಿದೆ.

See also  ರೈಲು ನಿಲ್ದಾಣದ ಪರಿಸರವನ್ನು ಸ್ವಚ್ಛಗೊಳಿಸಿದ ಶಾಲಾ ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು