News Kannada
Tuesday, September 27 2022

ಕರಾವಳಿ

ನೂರು ಬೆಡ್ ನ ಆಸ್ಪತ್ರೆಗೆ ಒಂದೇ ವ್ಹೀಲ್ ಚೆಯರ್ ! - 1 min read

Photo Credit :

ನೂರು ಬೆಡ್ ನ ಆಸ್ಪತ್ರೆಗೆ ಒಂದೇ ವ್ಹೀಲ್ ಚೆಯರ್ !

ಬಂಟ್ವಾಳ:  ಇದು ನೂರು ಬೆಡ್ ನ ಆಸ್ಪತ್ರೆಯಾಗುವ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆಯ ಕಥೆ.  ಹೇಳ ಹೊರಟರೆ ದಿನಂಪ್ರತಿ ನೂರಾರು ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಹುಜನೋಪಯೋಗಿ ಆಸ್ಪತ್ರೆಯೂ ಹೌದು.. ಆದರೆ ಇಲ್ಲಿಗೆ ಬಂದ ರೋಗಿಗಳನ್ನು ಅತ್ತಿತ್ತ ಕರೆದೊಯ್ಯಬೇಕಾದರೆ, ಎಷ್ಟೇ ದೊಡ್ಡವರಾದರೂ ಹೊತ್ತುಕೊಂಡೇ ಸಾಗಬೇಕು.. ಯಾಕೆಂದರೆ ಇಲ್ಲಿರುವುದು ಒಂದೇ ವ್ಹೀಲ್ ಚೆಯರ್..!

ಆಸ್ಪತ್ರೆ ಎಂದ ಮೇಲೆ  ಇಲ್ಲಿಗೆ  ಬರುವವರು ರೋಗಿಗಳು, ಅಶಕ್ತರು, ವಯೋವೃದ್ಧರು, ವಿಕಲಚೇತನರು.. ಇವರಲ್ಲಿ ಬಹುತೇಕರು ಆಸ್ಪತ್ರೆಯ ವ್ಹೀಲ್ ಚೆಯರ್ ಅನ್ನು ಆಶ್ರಯಿಸುವಂತಾದ್ದು ಸಾಮಾನ್ಯ ಸಂಗತಿ. ಆದರೆ  ನೂರು ಬೆಡ್ ನ ಆಸ್ಪತ್ರೆಯಾಗುವ  ಹಂತದಲ್ಲಿರುವ  ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರೆ ಅಲಿನ್ಲ ವ್ಹೀಲ್ ಚೆಯರ್ ಅನ್ನು ನೀವು ಕೇಳಲೇಬಾರದು. ಯಾಕೆಂದರೆ ಪ್ರತಿದಿನ 350 ರಿಂದ 400 ರೋಗಿಗಳಿಗೆ ಚಿಕಿತ್ಸೆ ನೀಡಲಾಗುವ ಈ ಆಸ್ಪತ್ರೆಯಲ್ಲಿ ಸದ್ಯಕ್ಕೆ ಉಪಯೋಗಕ್ಕಿರುವುದು  ಕೇವಲ ಒಂದೇ ವ್ಹೀಲ್ ಚೆಯರ್.

ಕೆಲ ದಿನಗಳ ಹಿಂದೆ ಸರಪಾಡಿ ನಿವಾಸಿ ಸುಮಾರು 55 ವರ್ಷದ ವಿಕಲಚೇತನ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕರೆಯಿಸಲಾಗಿತ್ತು. ಬೆಳಿಗ್ಗೆ  7 ಗಂಟೆಗೆ ಆಸ್ಪತ್ರೆಗೆ ಬಂದ ಈ ವ್ಯಕ್ತಿಯ  ಕಾಲು ನೋವಿಗಾಗಿ ಎಕ್ಸ್ರೇ ತೆಗೆಸಬೇಕಾಗಿತ್ತು. ರಿಕ್ಷಾದಲ್ಲಿ ಬಂದ ಈ ವ್ಯಕ್ತಿಯನ್ನು ರಿಕ್ಷಾ ಚಾಲಕ ಹೊತ್ತುಕೊಂಡೇ ಒಳಗೆ ಕರೆದುಕೊಂಡು ಬಂದಿದ್ದರು.  ಈ ವೇಳೆ ವ್ಹೀಲ್ ಚೆಯರ್ ನ ಅಗತ್ಯ ಇತ್ತಾಧರೂ, ಇದ್ದ ಒಂದು ವ್ಹೀಲ್ ಚೆಯರ್ ನಲ್ಲಿ ಅಶಕ್ತರೊಬ್ಬರನ್ನು ಕುಳ್ಳಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕಾರಣದಿಂದ ಸರಪಾಡಿಯ ವಿಕಲಚೇತನ ವ್ಯಕ್ತಿಗೆ ವ್ಹೀಲ್ ಚೆಯರ್ ಅಗತ್ಯವಿದ್ದರೂ ಸಿಗಲಿಲ್ಲ. ಕೊನೆಯಲ್ಲಿ ಕುಳಿತುಕೊಂಡಿದ್ದಲ್ಲಿಗೇ ಬಂದ ವೈದ್ಯರು ಚಿಕಿತ್ಸೆ ನೀಡಿ ಎಕ್ಸ್ರೇ ಗೆ ಸೂಚಿಸಿದರು. ಆದರೆ ಎಕ್ಸ್ರೇ ಕೊಠಡಿಗೆ ಸಾಗಲು ವ್ಹೀಲ್ ಚೆಯರ್ ಬೇಕಿತ್ತಾಧರೂ ಇದ್ದ ಒಂದು ವ್ಹೀಲ್ ಚೆಯರ್, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದಕಾರಣದಿಂದ ಬಂದಿದ್ದ ಅಶಕ್ತರೊಬ್ಬರಿಗೆ ವ್ಹೀಲ್ ಚೆಯರ್ ನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು..

ಹೀಗಾಗಿ ಬೆಳಿಗ್ಗೆ  7 ಗಂಟೆಗೆ ಆಸ್ಪತ್ರೆಗೆ ಬಂದಿದ್ದ ವಿಲಕಚೇತನ ವ್ಯಕ್ತಿ ಬೆಳಗ್ಗಿನ ಉಪಹಾರವೂ ಇಲ್ಲದೆ, ಅಪರಾಹ್ನ 2 ಗಂಟೆಯವರೆಗೂ ಆಸ್ಪತ್ರೆಯ ಮೂಲೆಯ ಚೆಯರ್ ನಲ್ಲೇ ಕುಳಿತುಕೊಳ್ಳಬೇಕಾಯಿತು.  ಇಂತಹಾ ಹಲವಾರು ಘಟನೆಗಳು ದಿನಂಪ್ರತಿ ನಡೆಯುತ್ತಿದೆಯಾದರೂ, ಆಸ್ಪತ್ರೆ ವೈದ್ಯರು ಮಾತ್ರ ಅಸಹಾಯಕರಾಗುತ್ತಿದ್ದಾರೆ.

ಏನು ಕಾರಣ..?

ಬಂಟ್ವಾಳ ಆಸ್ಪತ್ರೆಯ 30 ಬೆಡ್ ನಿಂದ 100 ಬೆಡ್ ನ ಸರ್ಕಾರಿ ಆಸ್ಪತ್ರೆಯಯಾಗುವ ಕನಸು ಹಲವು ವರ್ಷಗಳ ಹಿಂದಿನದು. ಕಳೆದ 2012 ರಿಂದ ಈ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದೆಯಾದರೂ, ಇನ್ನೂ ಪೂರ್ಣಗೊಂಡಿಲ್ಲ. ಹಾಗಿದ್ದೂ ತ್ವರಿತ ಸರ್ವೇ ನೀಡುವ ಉದ್ದೇಶದಿಂದ ಕಾಮಗಾರಿ ಪೂರ್ಣಗೊಂಡ ಆಸ್ಪತ್ರೆಯ ಒಂದು ಪಾಶ್ರ್ವದಲ್ಲಿ  ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 100 ಬೆಡ್ ನ ಆಸ್ಪತ್ರೆ ಎಂಬ ಸುತ್ತೋಲೆ  ಇಲ್ಲಿ ವೈದ್ಯಾಧಿಕಾರಿಗಳ ಕೈ ಸೇರಿದ್ದರೂ, ಆಸ್ಪತ್ರೆಗೆ ಬೇಕಿರುವ ಅಗತ್ಯ ಸವಲತ್ತುಗಳು ಇನ್ನೂ ಪೂರೈಕೆಯಾಗಿಲ್ಲ.  ಆಸ್ಪತ್ರೆಯ ಕಾಮಗಾರಿ ನವೆಂಬರ್ ನಲ್ಲಿ ಊರ್ಣಗೊಂಡು ಬಳಿಕ ಎಲ್ಲಾ ಸವಲತ್ತುಗಳು ಆಸ್ಪತ್ರೆಗೆ ತಲುಪಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಇಲ್ಲಿನ ವೈದ್ಯರು.

See also  ಮೇಯರ್ ರಾಜೀನಾಮೆಗೆ ಒತ್ತಾಯ: ಬಿಜೆಪಿ-ಕಾಂಗ್ರೆಸ್ ಸದಸ್ಯರ ವಾಗ್ವಾದ

ಸದ್ಯಕ್ಕೆ ಆಸ್ಪತ್ರೆಯ ದಾಸ್ತಾನು ವಹಿಯಲ್ಲಿ ನಾಲ್ಕು ವ್ಹೀಲ್ ಚಯರ್ ನ ಉಲ್ಲೇಖವಿದೆಯಾದರೂ, ಉಳಿದ ಮೂರು ಸುಸ್ಥಿತಿಯಲ್ಲಿಲ್ಲ. ಅದರೆಲ್ಲದರ ರಿಪೇರಿ ಕೆಲಸ ಆಗಬೇಕಿದೆ ಎನ್ನುವ ಇಲ್ಲಿನ ವೈದ್ಯಾಧಿಕಾರಿ ಡಾ.ರಾಧಿಕಾ ರವರು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಕೆಲವೊಮ್ಮೆ  ನಾವೂ ಅಸಹಾಯಕರಾಗುತ್ತೇವೆ ಎನ್ನುತ್ತಾರೆ.

ಆಸ್ಪತ್ರೆ ಪ್ರವೇಶಿಸಲು ಸರಿಯಾದ ಸಲಕರಣೆ ಒದಗಿಸಲು ಸರ್ಕಾರ ಗಮನಹರಿಸಬೇಕಿದೆ, ಜೊತೆಯಲ್ಲಿ ಸಂಘಸಂಸ್ಥೆಗಳೂ ಆಸ್ಪತ್ರೆಯ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಚಿತ್ತಹರಿಸಬೇಕಿದೆ. ಆಸ್ಪತ್ರೆಯಲ್ಲಿ ಸದ್ಯಕ್ಕೆ ಬಳಸುವ ಸ್ಥಿತಿಯಲ್ಲಿರುವುದು ಒಂದೇ ವ್ಹೀಲ್ ಚೆಯರ್, ಉಳಿದವು ರಿಪೇರಿಯಲ್ಲಿದೆ. ಸಂಘ ಸಂಸ್ಥೆಗಳು, ದಾನಿಗಳು ಆಸ್ಪತ್ರೆಗೆ ವ್ಹೀಲ್ ಚೆಯರ್ ನಂತಹ  ಕೊಡುಗೆ ನೀಡಿದರೆ  ರೋಗಿಗಳಿಗೆ ಅನುಕೂಲವಾದೀತು.

ಡಾ.ರಾಧಿಕಾ ವೈದ್ಯಾಧಿಕಾರಿ ಬಂಟ್ವಾಳ ಸರ್ಕಾರಿ ಆಸ್ಪತ್ರೆ.

ಆಸ್ಪತ್ರೆಯಲ್ಲಿ ವ್ಹೀಲ್ ಚೆಯರ್ ಇಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ.  ಆಸ್ಪತ್ರೆಗೆ ಬರುವ ರೋಗಿಗಳು ವ್ಹೀಲ್ ಚೆಯರ್ ಅನ್ನು ಅವಲಂಬಿಸಬೇಕಾಗುತ್ತದೆ, ಆರೋಗ್ಯ ಇಲಾಖೆ ರೋಗಿಗಳ ಹಿತದೃಷ್ಟಿಯಲ್ಲಿ  ಕನಿಷ್ಠ ನಾಲ್ಕೈದು ವ್ಹೀಲ್ ಚೆಯರ್ ಅನ್ನು ಬಂಟ್ವಾಳ ಆಸ್ಪತ್ರೆಗೆ ನೀಡಬೇಕು.

ಇಮ್ತಿಯಾಝ್ ತುಂಬೆ ನಿವಾಸಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು