News Kannada
Friday, October 07 2022

ಕರಾವಳಿ

ಕಾಸರಗೋಡಿನಲ್ಲಿ ಪತಿಯಿಂದ ಪತ್ನಿಯ ಕೊಲೆ - 1 min read

Photo Credit :

ಕಾಸರಗೋಡಿನಲ್ಲಿ ಪತಿಯಿಂದ ಪತ್ನಿಯ ಕೊಲೆ

ಕಾಸರಗೋಡು: ಪತ್ನಿಯನ್ನು ಪತಿಯು ತಲೆಗೆ ಬಡಿದು ಕೊಲೆಗೈದ ಘಟನೆ ಅಂಬಲತ್ತರದ ಕಾಲಿಚ್ಚಿನಡ್ಕ ದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಕಾಲಿಚ್ಚಿನಡ್ಕದ ನಾರಾಯಣಿ(೪೫) ಕೊಲೆಗೀಡಾದವರು. ಕೃತ್ಯಕ್ಕೆ ಸಂಬಂಧಪಟ್ಟಂತೆ ಪತಿ ಅಂಬಾಡಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಬಕಾರಿ ಪ್ರಕರಣದಲ್ಲಿ ಸೆರೆಗೀಡಾದ ಅಂಬಾಡಿ ರಿಮಾಂಡ್ ನಲ್ಲಿದ್ದನು. ಒಂದು ತಿಂಗಳ ಹಿಂದೆಯಷ್ಟೇ ಈತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಅಂಬಾಡಿ ಮದ್ಯಪಾನಿಯಾಗಿದ್ದು ಮನೆಯಲ್ಲಿ ದಂಪತಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತೆನ್ನಲಾಗಿದೆ.

ಇಂದು ಮುಂಜಾನೆ ಮತ್ತೆ ಜಗಳ ಶುರುವಾಗಿದ್ದು ಈ ವೇಳೆ ಅಂಬಾಡಿ ಪತ್ನಿ ನಾರಾಯಣಿಯ ತಲೆಗೆ ಮರದ ತುಂಡಿನಿಂದ ಹೊಡೆದಿದ್ದನೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ನಾರಾಯಣಿ ತಕ್ಷಣ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ಆರೋಪಿ ಅಂಬಾಡಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ದಂಪತಿಗೆ ಅಜಿತ್, ಅರ್ಜುನ್, ಅಜಯನ್, ಶ್ರೀಜಾ, ಅನಿತ ಎಂಬ ಐವರು ಮಕ್ಕಳಿದ್ದಾರೆ.

ಈ ಪೈಕಿ ಅಜಿತ್ ಸಂಬಂಧಿಕರ ಮನೆಯಲ್ಲಿ ನಿಂತು ಶಾಲೆಗೆ ತೆರಳುತ್ತಿದ್ದಾನೆ. ಅರ್ಜುನ್ ಹಾಗೂ ಅಜಯ್ ಹಾಸ್ಟೆಲ್‌ನಲ್ಲಿ ಉಳಿದು ಶಿಕ್ಷಣ ಪಡೆಯುತ್ತಿದ್ದಾರೆ. ಘಟನೆ ವೇಳೆ ಪುತ್ರಿಯರಾದ ಶ್ರೀಜ ಹಾಗೂ ಅನಿತಾ ಮನೆಯಲ್ಲಿದ್ದರೆನ್ನಲಾಗಿದೆ. ತಲೆಗೆ ಉಂಟಾದ ಏಟಿನಿಂದ ತಾಯಿಯ ಬೊಬ್ಬೆ ಕೇಳಿ ಎಚ್ಚೆತ್ತು ಇವರು ಬೊಬ್ಬೆ ಹಾಕಿ ಸ್ಥಳೀಯ ನಿವಾಸಿಗಳಿಗೆ ವಿಷಯ ತಿಳಿಸಿದ್ದು ಬಳಿಕ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಅಂಬಲತ್ತರ ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

See also  ಮೂರು ರಾಜ್ಯಗಳಲ್ಲಿ ‘ಕೈ’ ಮುನ್ನಡೆ: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ವಿಜಯೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು