News Kannada
Friday, September 30 2022

ಕರಾವಳಿ

ಪುತ್ತೂರು ತಾಲೂಕು ಆಸ್ಪತ್ರೆಯ 1.15 ಲಕ್ಷ ರೂ. ಹಣಕ್ಕೆ ಲೆಕ್ಕವೇ ಇಲ್ಲ..? - 1 min read

Photo Credit :

ಪುತ್ತೂರು ತಾಲೂಕು ಆಸ್ಪತ್ರೆಯ 1.15 ಲಕ್ಷ ರೂ. ಹಣಕ್ಕೆ ಲೆಕ್ಕವೇ ಇಲ್ಲ..?

ಪುತ್ತೂರು: ಎರಡು ವರ್ಷದ ವಾರ್ಷಿಕ ವರದಿ ಇನ್ನೂ ಅಡಿಟ್ ಆಗದಿರುವುದು, 1.15 ಲಕ್ಷ ರೂ. ಹಣದ ಬ್ಯಾಲೆನ್ಸ್ ಶೀಟ್ ಇಲ್ಲದಿರುವುದು, ಆರೋಗ್ಯ ರಕ್ಷಾ ಸಮಿತಿಯ ಗಮನಕ್ಕೆ ತಾರದೆ ಹಣ ಖರ್ಚು ಮಾಡಿರುವುದು. ಕೆಲ ಕಾಮಗಾರಿಗಳ ಲೆಕ್ಕಾ ಪಕ್ಕ ಇಲ್ಲದಿರುವುದು ಸೇರಿದಂತೆ ತಾಲೂಕು ಸರಕಾರಿ ಆಸ್ಪತ್ರೆಯ ಸಾಲು-ಸಾಲು ಅವ್ಯವಸ್ಥೆ ಶುಕ್ರವಾರ  ಬೆಳಕಿಗೆ ಬಂತು.

ಸರಕಾರಿ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ತಾಲೂಕು ಆಸ್ಪತ್ರೆಯ ಅವ್ಯವಸ್ಥೆಯ ಪಟ್ಟಿ ಕಂಡು ಶಾಸಕಿ ಶಕುಂತಳಾ.ಟಿ ಶೆಟ್ಟಿ ಮತ್ತು ಸಹಾಯಕ ಕಮೀಷನರ್ ಡಾ.ರಾಜೇಂದ್ರ ಕೆ.ವಿ. ಗರಂ ಆದ ಘಟನೆಯು ನಡೆಯಿತು. ಕಳೆದ ಎರಡು ವರ್ಷದ ವಾರ್ಷಿಕ ವರದಿ ಇನ್ನೂ ಸಿದ್ದವಾಗಿರಲಿಲ್ಲ. ಈ ಬಗ್ಗೆ ಆಸ್ಪತ್ರೆಯ ಅಕೌಂಟೆಂಟ್ ಬಳಿಯು ಸಮರ್ಪಕ ಉತ್ತರ ಇರಲಿಲ್ಲ. ಸರಕಾರಿ ಇಲಾಖೆ ಈ ಬಗೆಯ ಬೇಜವಾಬ್ದಾರಿ ಪ್ರದರ್ಶಿಸಿದರೆ ಹೇಗೆ ಎಂದು ಸಹಾಯಕ ಕಮಿಷನರ್ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಒಂದುವರೆ ಲಕ್ಷ ರೂ. ಬ್ಯಾಲೆನ್ಸ್ ಶೀಟೇ ಇಲ್ಲ..!
ಎರಡು ವರ್ಷದ ಹಿಂದಿನ ವಾರ್ಷಿಕ ವರದಿಯಲ್ಲಿನ 1.5 ಲಕ್ಷ ರೂ. ಹಣ ಏನಾಗಿದೆ ಎನ್ನುವುದೇ ಗೊತ್ತಿಲ್ಲ. ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಕಿರಣ್ ಅವರು ಇದನ್ನು ಬಳಕೆ ಮಾಡಿರುವ ಮಾಹಿತಿ ಇದ್ದು, ಈ ಬಗ್ಗೆ ಸಹಾಯಕ ಕಮೀಷನರ್ ಪ್ರಶ್ನಿಸಿದರು. ಅನಾರೋಗ್ಯ ಅಥವಾ ಏನೇ ಕಾರಣ ಇದ್ದರೂ, ಸರಕಾರಿ ಹಣವನ್ನು ಅಕಾರಿ ಬಳಕೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ. ಇದು ಕ್ರಿಮಿನಲ್ ಪ್ರಕರಣ ದಾಖಲಿಸುವ ಅಪರಾಧ. ಇದರ ಜಿಲ್ಲಾ ಆರೋಗ್ಯಕಾರಿ ನೆಲೆಯಲ್ಲಿ ಏನು ಶಿಸ್ತು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ತತ್ ಕ್ಷಣ ವರದಿ ಸಲ್ಲಿಸುವಂತೆ ಡಿಎಚ್ಓಗೆ ಡಾ.ರಾಜೇಂದ್ರ ಕೆ.ವಿ. ಸೂಚಿಸಿದರು.
ಇದು ಗಂಭೀರವಾದ ಪ್ರಕರಣ. ಎರಡು ವರ್ಷವಾದರೂ ಕ್ರಮ ಕೈಗೊಳ್ಳದಿರುವುದು ಯಾಕೆ.? ಈ ಕುರಿತು ಹಣ ಬಳಕೆ ಮಾಡಿದ ಅಧಿಕಾರಿಯನ್ನು ಯಾಕೆ ಸಸ್ಪಂಡೆ ಮಾಡಿಲ್ಲ ಎಂದು ಡಿಎಚ್ಓ ಅವರನ್ನು ಪ್ರಶ್ನಿಸಿದ ಘಟನೆ ಕೂಡ ನಡೆಯಿತು. ಅನಂತರ ಹಣ ಬಳಕೆ ಮಾಡಿದ ಎಸ್ಡಿಎ ಅಧಿಕಾರಿ ವಾರದೊಳಗೆ ಹಣ ಪಾವತಿಸುವ ಭರವಸೆ ನೀಡಿದ ಘಟನೆ ಕೂಡ ನಡೆಯಿತು.

ನಾನು ಕಳುಹಿಸಿದ್ದೇನೆ ನನಗೆ ಸಿಗಲಿಲ್ಲ..!
ಸಹಾಯಕ ಕಮೀಷನರ್ ಡಾ.ರಾಜೇಂದ್ರ ಕೆ.ವಿ ಅವರು ಹಣ ಪಾವತಿ ಆಗದ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಆಸ್ಪತ್ರೆಯ ಜನರಲ್ ಅಕೌಂಟೆಂಟ್ ಯೋಗಾನಂದ ಬಳಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ನಾನು ಈ ಬಗ್ಗೆ ಡಿಎಚ್ಓ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಓ ಡಾ.ರಾಮಕೃಷ್ಣ ರಾವ್, ಇಲ್ಲ ನನಗೆ ಯಾವುದೇ ಪತ್ರ ಬಂದಿಲ್ಲ ಎಂದಾಗ, ಇಬ್ಬರ ಮಧ್ಯೆ ಕೆಲ ಕಾಲ ನಾನು ಕಳುಹಿಸಿದ್ದೇನೆ.. ನನಗೆ ಸಿಗಲಿಲ್ಲ ವಿಚಾರವಾಗಿ ಚರ್ಚೆ ನಡೆಯಿತು.

See also  20 ಅಡಿ ಆಳಕ್ಕೆ ಬಿದ್ದ ಕಾರು: ಮಹಿಳೆ ಗಾಯ

ಯಾರನ್ನು ಕೇಳಿ ಖರ್ಚು ಮಾಡಿದ್ದೀರಿ..!
ಆಸ್ಪತ್ರೆಯ ಖರ್ಚು ಪಟ್ಟಿ ವಾಚಿಸಿಸುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಾ. ರಾಜೇಂದ್ರ ಕೆ.ವಿ. 5 ಸಾವಿರ ರೂ.ಗಿಂತ ಅಧಿಕ ಹಣ ಖರ್ಚು ಮಾಡುವ ಸಂದರ್ಭದಲ್ಲಿ ಆರೋಗ್ಯ ಸಮಿತಿಯ ಗಮನಕ್ಕೆ ತರಲಾಗಿದೆಯೇ.? ಸಹಾಯಕ ಕಮೀಷನರ್ ಕಚೇರಿಗೆ ಕಡತ ಸಹಿಗೆ ಬಂದಿಲ್ಲ. ಯಾರನ್ನು ಕೇಳಿ ಹಣ ಖರ್ಚು ಮಾಡಿದ್ದೀರಿ, ಹಣ ಪಾವತಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಅಧಿಕಾರಿಗಳು ನಿರುತ್ತರಾದರು.  ಆಸ್ಪತ್ರೆಯಲ್ಲಿ 5 ಸಾವಿರಕ್ಕಿಂತ ಅಕ ಹಣ ಬಳಕೆ ಮಾಡುವಾಗ ಸಹಾಯಕ ಕಮಿಷನರ್ಗೆ ಗಮನಕ್ಕೆ,  25 ಸಾವಿರಕ್ಕಿಂತ ಅಕ ಹಣ ವ್ಯಯಿಸುವ ಸಂದರ್ಭದಲ್ಲಿ ಅದನ್ನು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದುಕೊಳ್ಳಬೇಕು. 2 ಲಕ್ಷ ರೂ. ಅಕ ಖರ್ಚಿನ ಕಾಮಗಾರಿಗೆ ಶಾಸಕಿ ಅವರ ಗಮನಕ್ಕೆ ತರಬೇಕು. ಆದರೆ ಇಲ್ಲಿ ನಿಯಮ ಉಲ್ಲಂಘಿಸಿ ಹಣ ಖರ್ಚು ಮಾಡಲಾಗಿದೆ. ಇಲ್ಲಿಯ ತನಕ ಖರ್ಚು ಮಾಡಿದ ಸಂಪೂರ್ಣ ವಿವರವನ್ನು ಮುಂದಿನ ಸಭೆಯೊಳಗೆ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಒಪ್ಪಿಗೆ ಪಡೆಯದೆ ಹಣ ಬಳಕೆ ಮಾಡಿದ್ದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ನಿರ್ಣಯ ಬರೆದದ್ದು ಸರಿಯಿಲ್ಲ
ಆರೋಗ್ಯ ಇಲಾಖೆ ನಿರ್ಣಯವನ್ನು ಸಮರ್ಪಕವಾಗಿ ನಮೂದಿಸಿಲ್ಲ. ಇದರಲ್ಲಿ ಸರಿಯಾದ ಅಂಕಿ-ಅಂಶ ಇಲ್ಲ. ಕೆಲವು ನಿಯಮ ಪ್ರಕಾರ ಅನುಷ್ಠಾನಗೊಂಡಿಲ್ಲ. ಹಾಗಾಗಿ ಆರೋಗ್ಯ ಸಮಿತಿ ಸಭೆಯಲ್ಲಿ ಮಂಡಿಸಿದ 36 ನಿರ್ಣಯಕ್ಕೆ ಅನುಮೋದನೆ ಸಿಕ್ಕಿಲ್ಲ. ಇದನ್ನು ದಾಖಲಿಸುವಂತೆ ಸಹಾಯಕ ಕಮಿಷನರ್ ಸೂಚನೆ ನೀಡಿದರು.

ಔಷಧಕ್ಕೆ ಹಣ ಇಟ್ಟರೆ ಸಾಕೆ..?

2016-17 ನೇ ಸಾಲಿನ ಆಯವ್ಯಯ ಪಟ್ಟಿಯಲ್ಲಿ 20 ಲಕ್ಷ ರೂ. ನಲ್ಲಿ 5 ಲಕ್ಷ ಹಣವನ್ನು ಔಷಧ ಖರೀದಿಗೆ ಇಡಲಾಗಿದೆ. ಈ ಕುರಿತು ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಹಣವನ್ನು ಔಷಧ, ಇನ್ನಿತ್ತರ ಕೆಲಸಕ್ಕೆ ವಿನಿಯೋಗಿಸಿದರೆ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಸಿಬಂದಿ ಯಾಕೆ?
ಆಸ್ಪತ್ರೆಗೆ ಸಿಬಂದಿಗಳ ನೇಮಕ ಕುರಿತು ವರದಿಯಲ್ಲಿ ಉಲ್ಲೇಖಿಸಿರುವುದನ್ನು ಪ್ರಶ್ನಿಸಿದ ಸಹಾಯಕ ಆಯುಕ್ತರು,  ಈಗಿರುವ ಸಿಬಂದಿಗಳು ಸಂಖ್ಯೆಯೇ ಸಾಕಷ್ಟಿದೆ. ಇನ್ನು ಹೊಸ ಸಿಬಂದಿಗಳ ಅನಿವಾರ್ಯತೆ ಏನು ಎಂದು ಪ್ರಶ್ನಿಸಿದ ಘಟನೆ ನಡೆಯಿತು. ಆಸ್ಪತ್ರೆಯ ಸಣ್ಣ-ಪುಟ್ಟ ಕಾಮಗಾರಿಯನ್ನು ನಗರಸಭೆ ವತಿಯಿಂದ ಮಾಡುವಂತೆ  ಮತ್ತು ಆಸ್ಪತ್ರೆಯ ಕಸ, ತ್ಯಾಜ್ಯ ವಿಲೇವಾರಿಗೆ ರಿಯಾಯಿತಿ ದರದ ಶುಲ್ಕ ವಿಸುವಂತೆ ಶಾಸಕಿ ಪೌರಯುಕ್ತೆ ರೂಪಾ ಶೆಟ್ಟಿ ಅವರಿಗೆ ಸೂಚನೆ ನೀಡಿದರು.  ಈ ಸಂದರ್ಭದಲ್ಲಿ ವಿವಿಧ ಫಂಡ್ ಹಣ ಬಳಕೆ, ಆಸ್ಪತ್ರೆಗೆ ಅಗತ್ಯ ಇರುವ ಸೌಲಭ್ಯ, ವೈದ್ಯಾಕಾರಿ ನೇಮಕ, ಇನ್ನೆರಡು ಡಯಾಲಿಸಿಸ್ ಯಂತ್ರ ಸೇರ್ಪಡೆ ಮೊದಲಾದವುಗಳ ಬಗ್ಗೆ ಚರ್ಚೆ ನಡೆಯಿತು.

ಸಮಿತಿ ಸಭೆಯಲ್ಲಿ ಆರೋಗ್ಯ ಸಮಿತಿ ಸದಸ್ಯರಾದ ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಆಸ್ಪತ್ರೆಯ ವೈದ್ಯಾಕಾರಿ ಡಾ.ಪ್ರದೀಪ್. ನಯನಾ ರೈ, ದಿವಾಕರ ರೈ ಮೊದಲಾದವರು ಉಪಸ್ಥಿತರಿದ್ದರು.

See also  ಧರ್ಮಸ್ಥಳಕ್ಕೆ ನೀರಿನ ದೇಣಿಗೆ ನೀಡಿದ ಬೆಂಗಳೂರಿನ ಭಕ್ತರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು