News Kannada
Monday, September 26 2022

ಕರಾವಳಿ

ಕೊನೆಗೂ ಗುರುವಾಯನಕೆರೆ ವಾಹನ ಸಂಚಾರ ಅಡಚಣೆಗೆ ಮುಕ್ತಿ! - 1 min read

Photo Credit :

ಕೊನೆಗೂ ಗುರುವಾಯನಕೆರೆ ವಾಹನ ಸಂಚಾರ ಅಡಚಣೆಗೆ ಮುಕ್ತಿ!

ಬೆಳ್ತಂಗಡಿ: ಸರಕಾರದ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರೆ ಕೊನೆಗೂ ಗುರುವಾಯನಕೆರೆ ಪೇಟೆಯ ದಿನನಿತ್ಯದ ವಾಹನ ಸಂಚಾರ ಅಡಚಣೆಗೆ ಮುಕ್ತಿ ಸಿಗುವ ದಿನಗಳು ಸನಿಹದಲ್ಲಿವೆ ಎಂದೆನಿಸತೊಡಗಿದೆ.

ತಾಲೂಕಿನ ಅತ್ಯಂತ ಇಕ್ಕಟ್ಟಾದ ಪೇಟೆಗಳಲ್ಲಿ ಗುರುವಾಯನಕರೆ ಪೇಟೆಯೂ ಒಂದು. ಇದು ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234 ನಲ್ಲಿರುವ ಜಂಕ್ಷನ್. ಇಲ್ಲಿಂದ ಬೆಳ್ತಂಗಡಿ, ಧರ್ಮಸ್ಥಳ, ಉಪ್ಪಿನಂಗಡಿ, ಮಂಗಳೂರು, ವೇಣೂರು, ಕಾರ್ಕಳಕ್ಕೆ ಹೋಗುವ ರಸ್ತೆಗಳು ಪ್ರಾರಂಭವಾಗುತ್ತವೆ. ಹೀಗಾಗಿ ಇಲ್ಲಿ ಬೆಳಗಿನಿಂದ ಸಂಜೆಯವರೆಗೆ ವಾಹನಗಳ ಓಡಾಟ ಅಧಿಕ. ಕಳೆದ ಹತ್ತು ವರ್ಷಗಳಿಂದೀಚೆಗೆ ರಸ್ತೆಗಳು ಅಗಲೀಕರಣಗೊಳ್ಳದೆ ಇದ್ದ ಹಾಗೆ ಇದ್ದಾವೆ. ಆದರೆ ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ಇದರಿಂದ ಸಂಚರಿಸುವುದೇ ಕಷ್ಟಕರವಾಗಿದೆ. ವಾಹನದಲ್ಲಿ ಗುರುವಾಯನಕರೆಯಿಂದ ಉಜಿರೆಯ ತನಕ ಹೋಗುವುದೇ ಒಂದು ಸಾಹಸ ಕಾರ್ಯವಾಗಿದೆ.

ಕುವೆಟ್ಟು ಗ್ರಾಮದಲ್ಲಿರುವ ಗುರುವಾಯನಕರೆ ಪೇಟೆಯಲ್ಲಿನ ಸಂಚಾರದಟ್ಟಣೆಗೆ ಕಾರಣ ಮುಖ್ಯರಸ್ತೆಯಲ್ಲೇ ರಿಕ್ಷಾ ನಿಲ್ದಾಣ, ಬಸ್ ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳಿರುವುದು.  ಇದನ್ನು ಗಮನಿಸದ ಆಡಳಿತ ಪ್ರಯಾಣಿಕರಿಗಾಗುವ ಅನನೂಕಲವನ್ನು ಗಮನಿಸಿ ಏಳೆಂಟು ಕಡೆ ಬಸ್ ನಿಲ್ದಾಣಗಳನ್ನು ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಆದರೆ ಅದು ಸಂಪೂರ್ಣ ವೈಫಲ್ಯ ಕಂಡಿದೆ. ಈ ಬಸ್ನಿಲ್ದಾಣಗಳಿಂದ ಪ್ರಯಾಣಿಕರಿಗೆ ತೊಂದರೆಯೇ ಹೆಚ್ಚಾಗಿದೆಯೇ ಹೊರತು ಅನುಕೂಲಕರವಾಗದೆ ಹೋಯಿತು. ಒಟ್ಟಾರೆ ಇಲ್ಲಿಯ ಸಮಸ್ಯೆಗೆ ಪರಿಹಾರ ಪೇಟೆಯ ರಸ್ತೆಯ ಅಗಲೀಕರಣವೇ ಹೊರತು ಇನ್ನೇನೂ ಅಲ್ಲ ಎಂಬುದು ಸರ್ವವಿದಿತವಾಗಿದೆ. ಇದೀಗ  ಕಂದಾಯ, ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಕಳೆದ ಆ. 8 ರಂದು ಜಂಟಿಯಾಗಿ ಮೋಜಣಿ ನಡೆಸಿದ್ದಾರೆ. ಈಗಿರುವ ರಸ್ತೆ ಬದಿಯಿಂದ 6 ಮೀಟರ್ ಅಂತರದಲ್ಲಿ ಅಗಲಕೊಳ್ಳಬೇಕಾದ ಕಡೆ ಹಳದಿ ಬಣ್ಣದಲ್ಲಿ ಗುರುತು ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಮಂಗಳೂರು ಇದರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ರಸ್ತೆಯಲ್ಲೇ ಅಂಗಡಿಯನ್ನಿಟ್ಟುಕೊಂಡವರಿಗೆ, ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದವರಿಗೆ  ನೋಟಿಸ್ ಕಳುಹಿಸಿದ್ದಾರೆ. ಅಂಗಡಿಯ ಬಾಗಿಲಲ್ಲಿ ನೋಟಿಸ್ಗಳನ್ನು ಅಂಟಿಸಿದ್ದಾರೆ. ಅಂಗಡಿ ಮುಂಗಟ್ಟು ಕಟ್ಟಿದವರಿಗೆ ಅದನ್ನು ನಿಗದಿತ ಅವಧಿಯೊಳಗೆ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಇಲ್ಲೊಂದು ವಿಶೇಷ ನಡೆದಿದೆ. ಅಧಿಕಾರಿಗಳು ಅಂಟಿಸಿದ ಕೆಲ ನೋಟಿಸಿನಲ್ಲಿ ಕುವೆಟ್ಟು ಗ್ರಾಮದ ಗುರುವಾಯನಕರೆ ಸದಾಶಿವ ರಾವ್ ಮತ್ತು ಇತರರು ಎಂದು ನಮೂದಿಸಲಾಗಿದೆ. ಆದರೆ ಸದಾಶಿವ ರಾವ್ ಎಂಬುವರು ಯಾರು ? ಎಲ್ಲಿದ್ದಾರೆ ? ಎಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲವಾಗಿದೆ.

ಒಂದೆಡೆ ದಿನನಿತ್ಯ ಸಂಚಾರ ಮಾಡುವವರಿಗೆ ಇಲ್ಲಿನ ಅಗಲೀಕರಣದ, ರಸ್ತೆ ಅಭಿವೃದ್ಧಿಯ ಸುದ್ದಿ ಸಂತಸ ತಂದಿದೆಯಾದರೂ ಇನ್ನೊಂದೆಡೆ ಗುರುವಾಯನಕರೆ ಪೇಟೆಯಲ್ಲಿನ ಕಟ್ಟಡ ಮಾಲಿಕರಿಗೆ ವರ್ತಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಗುರುವಾಯನಕರೆ ಪೇಟೆಯಲ್ಲಿ ವಾಹನ ನಿಲುಗಡೆ ಮತ್ತು ಸಂಚಾರಕ್ಕೆ, ಘನ ವಾಹನಗಳ ಸಂಚಾರಕ್ಕೆ , ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕಟ್ಟಡ ಮಾಲೀಕರು, ವರ್ತಕರು ರಸ್ತೆ ಅಭಿವೃದ್ಧಿಗೆ ಸಹಕರಿಸುವ ಅಗತ್ಯವಿದೆ. ಸರಕಾರ ಇಲ್ಲಿನ ಅಗಲೀಕರಣದಿಂದ ಸಂತ್ರಸ್ತರಾಗುವವರಿಗೆ ರೂ. 50 ಕೋಟಿ ನಿಗದಿಗೊಳಿಸಿದೆ. – ಅಶೋಕ್ ಕೋಟ್ಯಾನ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ. 

See also  ಸುಲ್ಕೇರಿಯಲ್ಲಿ ಎರಡೂವರೆ ಮಗು ನಾಪತ್ತೆ– ನದಿಯಲ್ಲಿ ಶೋಧ

ರಸ್ತೆ ಅಗಲೀಕರಣದ ವಿಚಾರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು, ಗ್ರಾ.ಪಂ.,  ಗುರುವಾಯನಕೆರೆ ಪೇಟೆಯ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಬೇಕು. ಶಾಸಕರೂ ಈ ಬಗ್ಗೆ ಗಮನ ಹರಿಸಬೇಕು. ಸರ್ವಾಧಿಕಾರಿ ಧೋರಣೆ ಸರಿಯಲ್ಲ – ಜಿ. ಪರಶುರಾಮ ಕಾಮತ್, ಗುರುವಾಯನಕರೆ.
    
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು