News Kannada
Monday, September 26 2022

ಕರಾವಳಿ

ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಕರ್ಮಯೋಗ ಪೀಠಾರೋಹಣ ಕಾರ್ಯಕ್ರಮ: ಸಂಸ್ಕೃತಿ ಭವನದ ಉದ್ಘಾಟನೆ - 1 min read

Photo Credit :

ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಕರ್ಮಯೋಗ ಪೀಠಾರೋಹಣ ಕಾರ್ಯಕ್ರಮ: ಸಂಸ್ಕೃತಿ ಭವನದ ಉದ್ಘಾಟನೆ

ಬೆಳ್ತಂಗಡಿ: ಬೆಂಗಳೂರು ಎಸ್-ವ್ಯಾಸ ವಿಶ್ವವಿದ್ಯಾಲಯದ ಪ್ರಶಾಂತಿ ಕುಟೀರದಲ್ಲಿ ಸಂಸ್ಕೃತಿ ಭವನ ಉದ್ಘಾಟನೆ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಕರ್ಮಯೋಗ ಪೀಠಾರೋಹಣ ಕಾರ್ಯಕ್ರಮ ನಡೆಯಿತು.

ಯೋಗ ಶಿಕ್ಷಣ, ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ಮುಖವಾಣಿಯಾಗಿ ಸ್ವೀಕರಿಸಿ ಯೋಗಕ್ಕಾಗಿಯೇ ಮುಡಿಪಾಗಿರುವ ಎಸ್-ವ್ಯಾಸ ವಿಶ್ವವಿದ್ಯಾಲಯವು ನಿರಂತರವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ಪ್ರಮುಖ ಯೋಗ ಸಂಸ್ಥೆಗಳಲ್ಲೊಂದು. 2002 ರಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನೆಗಳ ಮೂಲಕ ಯೋಗದ ಮಹತ್ವವನ್ನು ತಿಳಿಸಿದೆ.

ಇಲ್ಲಿನ ಪ್ರಶಾಂತಿ ಕುಟೀರದ ಸಂಸ್ಕೃತಿ ಭವನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗದ ಅಧ್ಯಕ್ಷ ಡಾ. ಬಿನ್ನಿ ಸರೀನ್, ಉದ್ಯಮಿ ಸುರೇಶ್ ಬಗಾರಿಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶುಕ್ರವಾರದಂದು ಬೆಳಗ್ಗೆ 5 ಗಂಟೆಗೆ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಯುಷ್ಯಾಭಿವೃದ್ಧಿಗಾಗಿ ಆಯುಷ್ಯ ಹೋಮವನ್ನು ಆಚರಿಸಲಾಯಿತು, ಕರ್ಮಯೋಗದ ಪೀಠಾರೋಹಣವು ಬೆಳಗ್ಗೆ 8 ರಿಂದ ಯೋಗವಿನಾಯಕ ಮಂದಿರದ ಆವರಣದಿಂದ ಶುರುವಾಯಿತು. ವಿಶ್ವವಿದ್ಯಾಲಯದ ಎಲ್ಲ ಸದಸ್ಯರೂ ಡಾ. ಹೆಗ್ಗಡೆಯವರನ್ನು ಪೂರ್ಣಕುಂಭದೊಂದಿಗೆ ವೇದ ಘೋಷಪೂರ್ವಕವಾಗಿ ಸಂಸ್ಕೃತಿ ಭವನದವರೆಗೆ ಸ್ವಾಗತಿಸಲಾಯಿತು.

ಎಸ್ ವ್ಯಾಸ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಾತ್ಮ ವಿಭಾಗ, ಯೋಗ ಮತ್ತು ಜೀವವಿಜ್ಞಾನ ವಿಭಾಗ, ಯೋಗ ಮತ್ತು ಭೌತವಿಜ್ಞಾನ ವಿಭಾಗ, ಯೋಗ ಮತ್ತು ನಿರ್ವಹಣಾ ವಿಜ್ಞಾನ ವಿಭಾಗ ಹಾಗೂ ಯೋಗ ಮತ್ತು ಮಾನವಿಕ ವಿಜ್ಞಾನ ವಿಭಾಗಗಳಿವೆ. ಪ್ರತಿಯೊಂದರಲ್ಲಿ ಪೀಠಗಳನ್ನು ಪ್ರತಿಷ್ಠಾಪಿಸಿ ಅದರಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿಶ್ವವಿದ್ಯಾಲಯದ ಪರಂಪರೆ. ಯೋಗಾಧ್ಯಾತ್ಮ ವಿಭಾಗದಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ರಾಜಯೋಗಗಳೆಂಬ 4 ಪೀಠಗಳಲ್ಲಿ ಒಂದಾದ ಕರ್ಮಯೋಗಪೀಠವನ್ನು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಸುವ ವಿಶ್ವವಿದ್ಯಾಲಯದ ಪದಾಧಿಕಾರಿಗಳ ಸಂಕಲ್ಪವನ್ನು ಅಂಗೀಕರಿಸಲಾಯಿತು.

ಕುಲಾಧಿಪತಿ ಡಾ. ಎಚ್ ಆರ್ ನಾಗೇಂದ್ರ ಕರ್ಮಯೋಗಪೀಠದ ಪರಿಚಯ ಮತ್ತು ಹಿನ್ನೆಲೆಯನ್ನು ವಿವರಿಸಿದರು. ಕರ್ಮಯೋಗ ಪೀಠಾಧಿಷ್ಠಾನವನ್ನು ಭಾರತೀಯ ಸಂಸ್ಕೃತಿಯ ಅನುಸಾರವಾಗಿ ಪುಷ್ಪವೃಷ್ಟಿಯೊಂದಿಗೆ, ಸುಮಂಗಲಿಯರ ಸುಮಧುರ ಸಂಗೀತದೊಂದಿಗೆ ಆರತಿಯ ಮೂಲಕ ನೆರೆವೇರಿಸಲಾಯಿತು.

ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಕುಲಪತಿ ಪ್ರೊ. ರಾಮಚಂದ್ರ ಜಿ ಭಟ್, ಉಪಕುಲಾಧಿಪತಿ ಪ್ರೊ. ಕೆ ಸುಬ್ರಹ್ಮಣ್ಯಮ್, ಕುಲಸಚಿವ ಡಾ. ಸಂಜೀಬ್ ಪಾತ್ರ ಉಪಸ್ಥಿತರಿದ್ದರು.

 

See also  ಚಾರ್ಮಾಡಿ: ವಾಹನ ದಟ್ಟನೆಯಿಂದ ಮತ್ತೇ ಗುಡ್ಡ ಕುಸಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು