News Kannada
Friday, September 30 2022

ಕರಾವಳಿ

ಕಾಸರಗೋಡು ಟ್ರಾವೆಲ್ ಏಜೆನ್ಸಿ ಕೇಂದ್ರಕ್ಕೆ ದಾಳಿ ಪೊಲೀಸರ ದಾಳಿ - 1 min read

Photo Credit :

ಕಾಸರಗೋಡು ಟ್ರಾವೆಲ್ ಏಜೆನ್ಸಿ ಕೇಂದ್ರಕ್ಕೆ ದಾಳಿ ಪೊಲೀಸರ ದಾಳಿ

ಕಾಸರಗೋಡು: ಟ್ರಾವೆಲ್ ಏಜೆನ್ಸಿ ಕೇಂದ್ರಕ್ಕೆ ದಾಳಿ ನಡೆಸಿದ ಕುಂಬಳೆ ಮತ್ತು ಮಂಜೇಶ್ವರ ಠಾಣಾ ಪೊಲೀಸರು ಬೃಹತ್ ಅಕ್ರಮವನ್ನು  ಬಯಲಿಗೆ ತಂದಿದ್ದು ನಕಲಿ  ದಾಖಲೆ, ಪಾಸ್ ಪೋರ್ಟ್ ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ  ಸಹಲ್  ಕನ್ಸಲ್ಟೆನ್ಸಿ  ಎಂಬ  ಖಾಸಗಿ ಸಂಸ್ಥೆಗೆ  ದಾಳಿ ನಡೆಸಿದ್ದು  ಪಾಸ್ ಪೋರ್ಟ್ , 30 ನಕಲಿ ಸೀಲ್ ಗಳು , ಪೆನ್ ಡ್ರೈವ್ ಗಳು, ಮೂರು ಕಂಪ್ಯೂಟರ್ ಗಳು, ಹಾರ್ಡ್ಡಿಸ್ಕ್ ಗಳು, ಬ್ಯಾಂಕ್ ಪಾಸ್ ಪುಸ್ತಕಗಳು, ಲೆಟರ್ಹೆಡ್ ಗಳು, ಮೊಹರುಗಳು, ವಿವಿಧ ಶಾಲಾ ಕಾಲೇಜು ಗಳ ಲೆಟರ್ ಹೆಡ್ ಗಳು, ಎಕ್ಸ್ಪೀರಿ ಯನ್ಸ್ ಸರ್ಟಿಫಿಕೇಟ್ ಗಳು, ವಿವಿಧ ಸಂಸ್ಥೆಗಳ ಹೆಸರಲ್ಲಿರುವ ಸ್ಲಿಪ್ ಗಳು, ಹಡಗಿನಲ್ಲಿ ಉದ್ಯೋಗಕ್ಕೆ ಅಗತ್ಯವುಳ್ಳ ದಾಖಲೆಪತ್ರಗಳು, ಹಲವು ಸರಕಾರಿ ಸಂಸ್ಥೆಗಳ ಲೆಟರ್ ಹೆಡ್ ಗಳನ್ನು ಪೊಲೀಸರು ವಶಕ್ಕೆ  ತೆಗೆದುಕೊಳ್ಳಲಾಗಿದೆ. ಕೇಂದ್ರ ಮತ್ತು ಕೇರಳ ಸರಕಾರದ  ನಕಲಿ ಸೀಲ್ ( ಮೊಹರು) ಗಳು  ಇದರಲ್ಲಿ  ಒಳಗೊಂಡಿದೆ.  ನಕಲಿ ದಾಖಲೆ ಪತ್ರ ಮೂಲಕ  ಪಾಸ್ ಪೋರ್ಟ್ , ಡ್ರೈವಿಂಗ್ ಲೈಸನ್ಸ್  , ಮರಳು ಪಾಸ್ ಹೀಗೆ ಹಲವು ರೀತಿಯ ನಕಲಿ ದಾಖಲೆ ಪತ್ರದ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ  ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಥೋಮ್ಸನ್  ಜೋಸ್ ರವರ ಆದೇಶದಂತೆ  ಕಾರ್ಯಾಚರಣೆ ನಡೆಸಲಾಗಿದ್ದು , ಅಕ್ರಮ ದಂಧೆ ಬಯಲಿಗೆ ಬಂದಿದೆ.

ವಶಪಡಿಸಿಕೊಂಡ ದಾಖಲೆ ಪತ್ರ ಗಳನ್ನು  ಪೊಲೀಸರು ಪರಿಶೀಲನೆ ನಡೆಸುತ್ತಿದ್ದು , ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಸಂಸ್ಥೆ ಮಾಲಕ ಪರಾರಿಯಾಗಿದ್ದು, ಸಿಬಂದಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ದಾಖಲೆಗಳ ಪರಿಶೀಲನೆಗೆ ಸೈಬರ್ ಸೆಲ್ ನ ನೆರವು ಪಡೆಯಲಾಗಿದೆ. ಉಪ್ಪಳ ಕೇಂದ್ರೀಕರಿಸಿ ನಕಲಿ ದಾಖಲೆ ಪತ್ರಗಳ ತಯಾರಿ  ಬಗ್ಗೆ ಈ ಹಿಂದೆಯೇ  ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಒಂದು ತಿಂಗಳ ಹಿಂದೆ ಅಕ್ಷಯ ಕೇಂದ್ರವೊಂದರಲ್ಲಿ  ನಕಲಿ ದಾಖಲೆ ಪತ್ರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಈಗಾಗಲೇ ನಾಲ್ವರನ್ನು  ಬಂಧಿಸಿದ್ದು , ಇದರ ಬೆನ್ನಿಗೆ ಇನ್ನೊಂದು ಪ್ರಕರಣ ಇದ್ದೆಗ ಬೆಳಕಿಗೆ  ಬಂದಿದೆ.

See also  ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಕರಣ: ಪತಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು