News Kannada
Saturday, October 01 2022

ಕರಾವಳಿ

ಆಳ್ವಾಸ್ ನುಡಿಸಿರಿ 2016: ಹದಿಮೂರು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ - 1 min read

Photo Credit :

ಆಳ್ವಾಸ್ ನುಡಿಸಿರಿ 2016: ಹದಿಮೂರು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ನವೆಂಬರ್ ತಿಂಗಳ 18, 19 ಮತ್ತು 20ರಂದು ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರುಗಲಿದೆ.

ಮೂರು ದಿನಗಳ ಕಾಲ ಜರಗುವ ಈ ಸಮ್ಮೇಳನದಲ್ಲಿ ಕನ್ನಡನಾಡಿನ ಖ್ಯಾತ ಕವಿಗಳು, ಸಂಶೋಧಕರು, ವಿಮರ್ಶಕರರು, ಕಲಾವಿದರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ದಿನಾಂಕ 18ರಂದು ಬೆಳಗ್ಗೆ 9.30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು,  20ರಂದು ಸಂಜೆ ಸಮಾರೋಪ ಸಮಾರಂಭವು ಜರುಗಲಿದೆ. ಈ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ 13 ಮಂದಿ ಸಾಧಕರನ್ನು ‘ಆಳ್ವಾಸ್ ನುಡಿಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರರಣಿಕೆಗಳನ್ನು ಒಳಗೊಂಡಿರುತ್ತದೆ.  

ಪ್ರಶಸ್ತಿ ಪುರಸ್ಕೃತರು : ಡಾ. ಗಿರಡ್ಡಿ ಗೋವಿಂದರಾಜ,  ಶ್ರೀ ಸುಬ್ರಾಯ ಚೊಕ್ಕಾಡಿ,  ಡಾ. ಚೆನ್ನಣ್ಣ ವಾಲೀಕಾರ ,  ಡಾ.ಕೆ.ಆರ್.ಸಂಧ್ಯಾ ರೆಡ್ಡಿ,   ಜಿ.ಎನ್.ರಂಗನಾಥ ರಾವ್ , ಅಕ್ಷರ ಕೆ.ವಿ.,  ಹರಿಣಿ,  ಶ್ರೀನಿವಾಸ ಕಪ್ಪಣ್ಣ, ಸಂಪಾಜೆ ಶೀನಪ್ಪ ರೈ, ಜಬ್ಬಾರ್ ಸಮೊ, ಎಚ್.ಆರ್.ಲೀಲಾವತಿ , ಡಾ. ದರ್ಬೆ ಚಂದ್ರಶೇಕರ ಚೌಟ (ಡಾ.ಡಿ.ಸಿ.ಚೌಟ), ಡಾ.ಜಿ.ಜ್ಞಾನಾನಂದ.

ನವೆಂಬರ್ 20, ಭಾನುವಾರ ಅಪರಾಹ್ನ 4.00 ರಿಂದ ಆಳ್ವಾಸ್ ನುಡಿಸಿರಿ 2016ರ ಸಮಾರೋಪ ಸಮಾರಂಭವು ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಮ್ಮೇಳನದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದೇವೆ. ಆಳ್ವಾಸ್ ಕೃಷಿಸಿರಿ, ಚಿತ್ರಸಿರಿ, ಛಾಯಾಚಿತ್ರಸಿರಿ, ವಿದ್ಯಾರ್ಥಿಸಿರಿ, ಸಿನಿಸಿರಿ ಕಾರ್ಯಕ್ರಮಗಳೊಂದಿಗೆ ಫಲಪುಪ್ಪ ಪ್ರದರ್ಶನ, ಮತ್ಸ್ಯ ಪ್ರದರ್ಶನಗಳು ನಡೆಯಲಿದ್ದು ಸಮ್ಮೇಳನದ ಭಾಗಿಗಳಿಗೆ ಭರಪೂರ ಮನರಂಜನೆಯನ್ನು ಒದಿಗಿಸಲಿವೆ. ವಿದ್ಯಾರ್ಥಿಪ್ರತಿನಿಧಿಗಳಿಗೆ ಸಂಪೂರ್ಣ ಉಚಿತ ಹಾಗೂ ಇತರ ಪ್ರತಿನಿಧಿಗಳಿಗೆ ರೂ.100/- ಪ್ರತಿನಿಧಿ ಶುಲ್ಕದೊಂದಿಗೆ ವಸತಿ-ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಕಾಲೇಜಿನ ಅಧ್ಯಕ್ಷರು ಡಾ.ಮೋಹನ್ ಆಳ್ವಾ ತಿಳಿಸಿದ್ದಾರೆ.

 

See also  ಕಾಂಗ್ರೆಸ್ ನಿಂದ ಚುನಾವಣೆಗೆ ಮೊದಲು ಗಲಭೆಗೆ ಹುನ್ನಾರ: ಜಿತೇಂದ್ರ ಕೊಠಾರಿ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು