News Kannada
Friday, September 30 2022

ಕರಾವಳಿ

ತಾಲೂಕಿನ ಪುರಭವನದಲ್ಲಿ ಮೂಲ ಸೌಕರ್ಯ ಕೊರತೆ: ಅಭಿವೃದ್ಧಿಗೆ ನಗರಸಭೆಯಿಂದ 50 ಲಕ್ಷ ರೂ.ಮೀಸಲು - 1 min read

Photo Credit :

ತಾಲೂಕಿನ ಪುರಭವನದಲ್ಲಿ ಮೂಲ ಸೌಕರ್ಯ ಕೊರತೆ: ಅಭಿವೃದ್ಧಿಗೆ ನಗರಸಭೆಯಿಂದ 50 ಲಕ್ಷ ರೂ.ಮೀಸಲು

ಪುತ್ತೂರು: ಮೂರು ದಶಕಗಳ ಹಿಂದೆ ನಗರದ ಕಿಲ್ಲೆ ಮೈದಾನದ ಬಳಿ ಅಂದಿನ ಪುರಸಭೆ ನಿರ್ಮಿಸಿದ್ದ ಪುರಭವನಕ್ಕೆ ಮೂಲ ಸೌಕರ್ಯ ಆವಶ್ಯಕತೆ ಇರುವ ಹಿನ್ನಲೆಯಲ್ಲಿ ಪುರಭವನವನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲು ನಗರಸಭೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಕ್ರಿಯಾಯೋಜನೆಯಲ್ಲಿ 50 ಲಕ್ಷ ರೂ. ಹಣ ಕಾದಿರಿಸಿದೆ..!

ಪುರಭವನದ ನೋಟ
ಕಡಿಮೆ ವೆಚ್ಚದಲ್ಲಿ ಜನರಿಗೆ ಅನುಕೂಲವಾಗುವ ದಿಶೆಯಲ್ಲಿ ಅಂದಿನ ಪುರಸಭಾಡಳಿತ ಪುರಭವನ ನಿರ್ಮಿಸಿತ್ತು. ಇದರಲ್ಲಿ ಪ್ರತಿಯೊಬ್ಬರಿಗೂ ಕಾರ್ಯಕ್ರಮ ಆಯೋಜಿಸಲು ಅವಕಾಶ ಇದೆ. ವಿಶಾಲವಾದ ಒಳಾಂಗಣ, ಸಭಾ ವೇದಿಕೆ, ಹೊರಭಾಗದಲ್ಲಿ ವಿಸ್ತಾರ ಸ್ಥಳಾವಕಾಶ ಇಲ್ಲಿದ್ದರೂ, ಸಾಮಥ್ರ್ಯಕ್ಕೆ ತಕ್ಕ ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸುಧಾರಿತ ಕ್ರಮಕ್ಕೆ ನಗರಸಭೆ ಮುಂದಾಗಿದೆ.

ಸಮಸ್ಯೆಗಳ ಪಟ್ಟಿ
ಎಂಟು ನೂರು ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣದಲ್ಲಿ 145 ಆಸನಗಳನ್ನು ಮಾತ್ರ ಇದೆ. ಉಳಿದವುಗಳಿಗೆ ಬಾಡಿಗೆ ರೂಪದಲ್ಲಿ ಆಸನದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಬೇಕಿದೆ. ವಿದ್ಯುತ್ ಕೈ ಕೊಟ್ಟರೆ ಜನರೇಟರ್ ವ್ಯವಸ್ಥೆ ಇಲ್ಲ. ಶೌಚಾಲಯ, ಡ್ರೆಸ್ಸಿಂಗ್ ಕೊಠಡಿಯಲ್ಲಿ ನಿರ್ವಹಣೆಯ ಕೊರತೆ ಇದೆ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛವಾಗಿಲ್ಲ, ಸಮರ್ಪಕವಾದ ಲೈಂಟಿಗ್ಸ್ ವ್ಯವಸ್ಥೆ ಆಗಬೇಕು. ಕಾರ್ಯಕ್ರಮ ಅನಂತರ ಸ್ವಚ್ಛತೆಯ ಕೊರತೆ, ಸಭಾಂಗಣದೊಳಗೆ ಬೆಳಕು ಕಡಿಮೆ ಎಂಬಿತ್ಯಾದಿ ದೂರುಗಳು ಪುರಭವನದೊಳಗೆ ಕಾರ್ಯಕ್ರಮವನ್ನು ಆಯೋಜಿಸಿದ ಕೆಲ ಸಂಘಟಕರದ್ದು.

ಬಾಡಿಗೆ ಹೆಚ್ಚಳ
ಪುರಭವನದ ಬಾಡಿಗೆಯನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಅರ್ಧದಿನಕ್ಕೆ 2 ಸಾವಿರ ರೂ. ಇದ್ದ ಬಾಡಿಗೆ 3.500 ರೂ.ಗೆ ಏರಿಕೆ ಕಂಡಿದೆ. ಅದರಲ್ಲಿ 500 ರೂ. ಸೇವಾ ತೆರಿಗೆಯಾಗಿದ್ದು, ಪೂರ್ತಿ ದಿನಕ್ಕೆ 4 ಸಾವಿರ ರೂ. ಇದ್ದ ಬಾಡಿಗೆ ಮೊತ್ತ ಸೇವಾ ತೆರಿಗೆ ಸೇರಿ 7 ಸಾವಿರಕ್ಕೆ ಹೆಚ್ಚಳಗೊಂಡಿದೆ. ಆದರೆ ಬಾಡಿಗೆ ಹೆಚ್ಚಳಗೊಂಡದ್ದಕ್ಕೆ ಯಾರದೂ ತಕರಾರು ಇಲ್ಲ. ಬದಲಿಗೆ ಅದಕ್ಕೆ ತಕ್ಕ ವ್ಯವಸ್ಥೆ ಬೇಕು ಎನ್ನುವುದು ಕಾರ್ಯಕ್ರಮ ಆಯೋಜಕರ ಮಾತು. ಅಂದಾಜು ಲೆಕ್ಕಚಾರದಲ್ಲಿ ಪುರಭವನದಿಂದ ನಗರಸಭೆಗೆ ತಿಂಗಳಿಗೆ 7 ಸಾವಿರ ರೂ. ಬಾಡಿಗೆ ಬರುತ್ತದೆ. ಬಹುತೇಕ ಕಾರ್ಯಕ್ರಮ ಅರ್ಧ ದಿನ ಆಯೋಜನೆಯಾಗುತ್ತದೆ. ವಾರ್ಷಿಕ ಲೆಕ್ಕಚಾರದಲ್ಲಿ 80 ಸಾವಿರ ರೂ. ಆದಾಯ ದೊರೆಯುತ್ತದೆ. ಮೂಲಭೂತ ಸೌಕರ್ಯ ಒದಗಿಸಿದರೆ, ಅದರ ಪ್ರಮಾಣ ಇಮ್ಮಡಿ ಆಗಬಹುದು ಎನ್ನುವುದು ಅನೇಕರ ವಾದ.

50 ಲಕ್ಷ ಕಾದಿರಿಸಿಕೆ
ಜೀವಂಧರ್ ಜೈನ್ ಆಡಳಿತ ಅವಧಿಯಲ್ಲಿ ಅಂದಾಜು 3 ಲಕ್ಷ ರೂ. ವೆಚ್ಚದಲ್ಲಿ ಪುರಭವನದ ಹೊರ ಭಾಗದಲ್ಲಿ ಶೀಟ್ ಅಳವಡಿಕೆ ಮಾಡಲಾಗಿತ್ತು. ಇದೀಗ ಹಾಲಿ ಆಡಳಿತ ಮತ್ತೆ 50 ಲಕ್ಷ ರೂ. ಕಾದಿರಿಸಿದೆ. ಕ್ರಿಯಾಯೋಜನೆ ಪಟ್ಟಿ ತಯಾರಿಸಲು ಸಾಮಾನ್ಯ ಸಭೆಯ ಮುಂದಿಟ್ಟು ಚರ್ಚಿಸುವ ತೀರ್ಮಾನಕ್ಕೆ ಬಂದಿದೆ. ಅಲ್ಲಿ ನಿರ್ಧರಿಸಿದ ರೀತಿಯಲ್ಲಿ ಪುರಭವನ ಅಭಿವೃದ್ಧಿಗೆ ಚಿಂತಿಸಲಾಗಿದೆ.

ಹಣ ಕಾದಿರಿಸಿದ್ದೇವೆ
ಈಗಾಗಲೇ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಸೇವಾ ತೆರಿಗೆ ವಿಸಿ, ನ್ಯಾಯಯುತ ಬಾಡಿಗೆ ಹಣ ನಿಗದಿಪಡಿಸಲಾಗಿದೆ. ಕೆಲ ಮೂಲಭೂತ ಸಮಸ್ಯೆಗಳು ಇರುವುದು ನಿಜ. ಅದಕ್ಕೆ ಈಗಾಗಲೇ 50 ಲಕ್ಷ ರೂ. ಕಾದಿರಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪುರಭವನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪೌರಯುಕ್ತೆ, ನಗರಸಭೆ ರೂಪಾ ಶೆಟ್ಟಿ ತಿಳಿಸಿದರು.

See also  ಶಾಲಾ ಅಂಗಳದಲ್ಲಿ ನೇಗಿಲ ಯೋಗಿಯ ಪಾಠ ಬಾಳಿಲ ಶಾಲಾ ಮಕ್ಕಳು

ಸೌಲಭ್ಯ ಕಲ್ಪಿಸಬೇಕು
ಅಲ್ಲಿ ಮೂಲಭೂತ ಸಮಸ್ಯೆಗಳು ಇವೆ. ನಗರದ ಮಧ್ಯ ಭಾಗದಲ್ಲಿರುವ ಭವನವನ ಪ್ರಾಥಮಿಕ ಬೇಡಿಕೆ ಈಡೇರಿಕೆಯ ನಿಟ್ಟಿನಲ್ಲಿ ಆದ್ಯತೆ ನೀಡಬೇಕಿದೆ. ಇಲ್ಲಿ ಬಾಡಿಗೆ ಹೆಚ್ಚಳ ಮಾಡಿರುವುದಕ್ಕೆ ಆಕ್ಷೇಪ ಇಲ್ಲ. ಬದಲಿಗೆ ಅಷ್ಟು ಬಾಡಿಗೆ ಕೊಡುವಷ್ಟು ಮೂಲ ವ್ಯವಸ್ಥೆ ಅಲ್ಲಿ ಇರಬೇಕು. ಆಸನ, ಲೈಂಟಿಂಗ್ಸ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಸಾಮಾಜಿಕ ಕಾರ್ಯಕರ್ತ
ಲೋಕೇಶ್ ಅಲುಂಬುಡ ಈ ಸಂಧರ್ಭ ಹೇಳಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು