News Kannada
Saturday, September 24 2022

ಕರಾವಳಿ

ಸಿಸಿಬಿ ಪೊಲೀಸರ ವಶದಲ್ಲಿದ್ದ ಬಜರಂಗದಳ ಕಾರ್ಯಕರ್ತ ನಿಗೂಢ ನಾಪತ್ತೆ ! - 1 min read

Photo Credit :

ಸಿಸಿಬಿ ಪೊಲೀಸರ ವಶದಲ್ಲಿದ್ದ ಬಜರಂಗದಳ ಕಾರ್ಯಕರ್ತ ನಿಗೂಢ ನಾಪತ್ತೆ !

ಮಂಗಳೂರು: ಮಂಜನಾಡಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಒಂದೊಮ್ಮೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮತ್ತೆ ಬಿಡುಗಡೆಗೊಳಿಸಿ ಮತ್ತೊಮ್ಮೆ ವಶಕ್ಕೆ ಪಡೆದುಕೊಂಡ ಬಜರಂಗದಳದ ಸಕ್ರಿಯ ಕಾರ್ಯಕರ್ತ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದು, ಹೆತ್ತವರು ಬಂಟ್ವಾಳ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಬಾಳೆಪುಣಿಯ ಕೊಳಂಬೆ ಗ್ರಾಮದ ತುಳಸೀದಾಸ್ (30) ನಿಗೂಢವಾಗಿ ನಾಪತ್ತೆಯಾದವರು. ಉಳ್ಳಾಲ ಪ್ರಖಂಡ ಬಜರಂಗದಳದಲ್ಲಿ ಜವಾಬ್ದಾರಿಯನ್ನು ಹೊತ್ತಿರುವ ತುಳಸೀದಾಸ್ ಮೇಲೆ ಮುಡಿಪು ಕಾಲೇಜು ಪ್ರವಾಸ ರದ್ದು ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರ ಸಹಿತ ದನ ಕಳವು ತಡೆದ ಪ್ರಕರಣ ಸಹಿತ ಹಲವು ಪ್ರಕರಣಗಳಿವೆ. ಇದರಿಂದಾಗಿ ಬಹುತೇಕ ಗಲಭೆ ಪ್ರಕರಣಗಳಾದಲ್ಲಿ ಪೊಲೀಸರು ತುಳಸೀದಾಸ್ ಅವರನ್ನೇ ಟಾರ್ಗೆಟ್ ನಡೆಸಿ ವಶಕ್ಕೆ ಪಡೆಯುತ್ತಿದ್ದರು.

ಇದೇ ರೀತಿಯಾಗಿ ಮುನ್ನೂರಿನಲ್ಲಿ ರಾಮಮೋಹನ್ ಹತ್ಯಾ ಯತ್ನ ಪ್ರಕರಣಕ್ಕೆ ಪ್ರತೀಕಾರವಾಗಿ ನಡೆದ ದಾಳಿಯಂತೆ ಮಂಜನಾಡಿ ಸಮೀಪ ಶಮೀರ್ ಮತ್ತು ನವಾಝ್ ಚೂರಿ ಇರಿತ ಪ್ರಕರಣ ನಡೆದ ಎರಡನೇ ದಿನದಂದು ತುಳಸೀ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಒಂದು ದಿನ ವಿಚಾರಣೆ ನಡೆಸಿದ ಬಳಿಕ ಕೃತ್ಯದಲ್ಲಿ ಭಾಗಿಯಾಗದೇ ಇರುವುದು ಗೊತ್ತಾದ ನಂತರ ಬಿಡುಗಡೆಗೊಳಿಸಿದ್ದಾರೆ.

ಮರುದಿನ ಮತ್ತೆ  ತಡರಾತ್ರಿ ಮನೆಗೆ ನುಗ್ಗಿದ ಸಿಸಿಬಿ ಪೊಲೀಸರು ತುಳಸೀದಾಸ್ ಅವರನ್ನು ಮತ್ತೊಮ್ಮೆ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ತುಳಸಿ ಸುಳಿವೇ ಮನೆಮಂದಿಗೆ ದೊರೆತಿಲ್ಲ. ಸಿಸಿಬಿಯವರ ಬಳಿ ಮನೆಮಂದಿ ತೆರಳಿ ಪ್ರಶ್ನಿಸಿದಾಗ, ತಮ್ಮ ಬಳಿ ಇಲ್ಲ ಅನ್ನುವ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಬಹುತೇಕ ಪೊಲೀಸ್ ಮೂಲಗಳಿಂದಲೂ ವಿಚಾರಣೆ ನಡೆಸಿದರೂ ತುಳಸಿ ಪತ್ತೆಯೇ ಇಲ್ಲ. ಸಿಸಿಬಿ ಪೊಲೀಸರಿಂದ ತುಳಸಿ ತಪ್ಪಿಸಿಕೊಂಡಿರುವ ಅನುಮಾನವಿದೆ. ಆದರೆ ತಪ್ಪಿಸಿಕೊಂಡ ಬಳಿಕ ಎಲ್ಲಿದ್ದಾನೆ ಅನ್ನುವ ಮಾಹಿತಿಯೇ ಇಲ್ಲ. ಈ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿರುವ ಹೆತ್ತವರು ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
 

See also  ಹಳ್ಳಿಯಲ್ಲಿ ಚಿಣ್ಣರು ಕಾರ್ಯಕ್ರಮದಲ್ಲಿ ನಲಿದಾಡಿದ ಮಕ್ಕಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು