News Kannada
Monday, September 26 2022

ಕರಾವಳಿ

ಬೆಳ್ತಂಗಡಿಯ ಲಾಯಿಲ ಗ್ರಾ.ಪಂ ನಲ್ಲಿ ಅತ್ಯುತ್ತಮ ತ್ಯಾಜ್ಯ ಘಟಕ: ಇತರ ಎಲ್ಲಾ ಪಂ.ಗಳಿಗೆ ಮಾದರಿ - 1 min read

Photo Credit :

 ಬೆಳ್ತಂಗಡಿಯ ಲಾಯಿಲ ಗ್ರಾ.ಪಂ ನಲ್ಲಿ ಅತ್ಯುತ್ತಮ ತ್ಯಾಜ್ಯ ಘಟಕ: ಇತರ ಎಲ್ಲಾ ಪಂ.ಗಳಿಗೆ ಮಾದರಿ

ಬೆಳ್ತಂಗಡಿ: ಟನ್ ಗಟ್ಟಲೆ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸುವುದೇ ಒಂದು ಸಮಸ್ಯೆ. ಆದರೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾ.ಪಂ. ಮಾತ್ರ ಈ ವಿಚಾರದಲ್ಲಿ ವಿಶಿಷ್ಟತೆಯೊಂದಿಗೆ ಕಸ ನಿರ್ವಹಣೆಯನ್ನು ಮಾಡುತ್ತಾ ರಾಜ್ಯದ ಎಲ್ಲಾ ಪಂ.ಗಳೂ ಅನುಸರಿಸಲು ಯೋಗ್ಯವಾದ ವಿಧಾನವನ್ನು ಕಂಡುಕೊಂಡಿದೆ.

ಲಾಯಿಲ ಗ್ರಾಮ ಪಂ. 1859 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು 7084 ಜನ ಸಂಖ್ಯೆಯನ್ನು ಹೊಂದಿದೆ. ಪಂಚಾಯತ್ ಅಡಳಿತ ಮಂಡಳಿ ಮತ್ತು ಅಧಿಕಾರಿಗಳ ಕಾಳಜಿಯಿಂದಾಗಿ ಇಲ್ಲಿನ ತ್ಯಾಜ್ಯ ಘಟಕ ಅತ್ಯುತ್ತಮವಾಗಿ ನಡೆಯುತ್ತಿದೆ. ಜಿ.ಪಂ. 20 ಲಕ್ಷ ರೂ.ಅನುದಾನ ನೀಡಿ ಪ್ರೋತ್ಸಾಹಿಸಿದೆ. ಈ ಅನುದಾನದಿಂದಾಗಿ ತ್ಯಾಜ್ಯ ಗುಂಡಿಗಳಿರುವ ಕಟ್ಟಡವನ್ನು ವಿಸ್ತರಿಸಲಾಗಿದೆ. ಪ್ಲಾಸ್ಟಿಕ್ ಸಂಗ್ರಹಕ್ಕಾಗಿ ಸನಿಹದಲ್ಲೇ ಇನ್ನೊಂದು ಶೆಡ್ ನಿರ್ಮಿಸಲಾಗಿದೆ. ಆವರಣ ಗೋಡೆ, ಕಾಂಕ್ರೀಟ್ ರಸ್ತೆ, ಗೇಟು ರಚನೆಯನ್ನು ಮಾಡಲಾಗಿದೆ. ಹಸಿರು ಹುಲ್ಲಿನ ಗಾರ್ಡನ್ ಕೂಡ ರಚಿಸಲಾಗಿದೆ.

ಹೆಚ್ಚಾಗಿ ನಗರಗಳಲ್ಲಿ ಕಸದ ವಾಹನವೊಂದು ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಕಸ ಸಂಗ್ರಹಿಸುವುದನ್ನು ನೋಡಿದ್ದಾರೆ, ಕೇಳಿದ್ದಾರೆ. ಅದರೆ ಗ್ರಾಮ ಮಟ್ಟದಲ್ಲಿ ಇಂತಹ ವ್ಯವಸ್ಥೆ ಇಲ್ಲವೆಂದೇ ಹೇಳಬಹುದು. ಆದ್ರೆ ಲಾಯಿಲ ಪಂ. ತ್ಯಾಜ್ಯ ಸಂಗ್ರಹಣೆಗಾಗಿ ಗೂಡ್ಸ್ ರಿಕ್ಷಾವೊಂದನ್ನು ಹೊಂದಿದ್ದು ಇದು ಮನೆ ಮನೆಗೆ ಹೋಗುತ್ತದೆ. ನಾಗರೀಕರು ಮನೆಯಲ್ಲಿ ಸಂಗ್ರಹವಾಗಿರುವ ಹಸಿ, ಒಣ ಕಸವನ್ನು ಸಂಗ್ರಹಿಸಿ ಅದನ್ನು ಬೇರೆಲ್ಲಿಯೂ ಬಿಸಾಡದೆ ವಾಹನ ಮನೆ ಬಾಗಿಲಿಗೆ ಬಂದಾಗ ಅದಕ್ಕೇ ಹಾಕುತ್ತಾರೆ. ಇದನ್ನು ಪಂ. ನಿರ್ವಹಿಸುತ್ತಿರುವ ತ್ಯಾಜ್ಯ ಘಟಕದಲ್ಲಿ ಸುರಿಯಲಾಗುತ್ತದೆ. ಅಲ್ಲಿ ಅದನ್ನು ವಿಂಗಡಿಸಿ ಗೊಬ್ಬರ ಮಾಡಲಾಗುತ್ತದೆ. ಸುಮಾರು 8 ದಿನಗಳ ತ್ಯಾಜ್ಯವನ್ನು ಹಾಕುವಷ್ಟು ಮಾಡಲಾದ ದೊಡ್ಡದಾದ ಗುಂಡಿಯೊಂದರಲ್ಲಿ ಹಾಕಿದ ಪ್ಲಾಸ್ಟಿಕ್ ರಹಿತ ತ್ಯಾಜ್ಯಕ್ಕೆ ಮೈಸೂರಿನ ಭಗೀರಥ ಸಂಸ್ಥೆಯವರು ನೀಡುವ ಬೇಕನ್ ಪ್ರೋ ಎಂಬ ಬ್ಯಾಕ್ಟೀರಿಯಾ ಉತ್ಪಾದಕ ಪುಡಿಯನ್ನು ಸುರಿಯಲಾಗುತ್ತದೆ. 8 ದಿನಗಳಲ್ಲಿ ರಾಸಾಯನಿಕ ಪ್ರಕ್ರಿಯೆ ಹೊಂದಿ ಉತ್ತಮವಾದ ವಾಸನಾ ರಹಿತ ಪುಡಿ ಗೊಬ್ಬರ ಸಿದ್ದವಾಗುತ್ತದೆ. ಇಲ್ಲಿ ತಯಾರಾಗುವ ಗೊಬ್ಬರವನ್ನು ಗಣೇಶ್ ಕನ್ಸಲ್ಟೆನ್ಸಿ ಮತ್ತು ಅನಾಲೈಟಿಕ್ ಸರ್ವೀಸ್ ಕಂಪೆನಿಯು ಅತ್ಯುತ್ತಮ ಎಂಬ ಪ್ರಮಾಣ ಪತ್ರ ನೀಡಿದೆ. ಹೀಗಾಗಿ ಲಾಯಿಲ ಗೋಲ್ಡ್ ನಾಮಾಂಕಿತ ಗೊಬ್ಬರವನ್ನು ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಖರೀದಿಸಲು ಅನುಮತಿ ಕೂಡ ನೀಡಲಾಗಿದೆ. ಗ್ರಾಮದ ಕೃಷಿಕರು ಇಲ್ಲಿಂದಲೇ ಗೊಬ್ಬರ ಖರೀದಿಸುತ್ತಿದ್ದು ಕೆ.ಜಿ.ಗೆ 8 ರೂ. ಗಳಂತೆ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪಂ.ಗೆ ಆರ್ಥಿಕವಾಗಿ ಬಲ ಬಂದಿದೆ.

ಇಲ್ಲಿನ ಅಪೂರ್ವ ಕಾರ್ಯವೈಖರಿಯನ್ನು ಗಮನಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಶಸ್ತಿ ವಿಶೇಷ ಅನುದಾನಗಳನ್ನು ನೀಡಿವೆ. ಗ್ರಾಮದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಸೌಧಗಳನ್ನು ರಚಿಸಿ ಜನರಲ್ಲಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿ ಸ್ವಚ್ಛತೆಯೆಡೆಗೆ ಗಮನ ಸೆಳೆದದ್ದಕ್ಕಾಗಿ ನಿರ್ಮಲ ಗ್ರಾಮ ಪುರಸ್ಕಾರ ಮತ್ತು ರೂ. 5 ಲಕ್ಷ ವಿಶೇಷ ಅನುದಾನ ದೊರಕಿದೆ. ಜನರನ್ನು ಸಂಘಟಿಸಿ ಗ್ರಾಮ ಸಭೆಗಳನ್ನು ಆಯೋಜಿಸಿ ಅಭಿವೃದ್ಧಿಗೆ ಪೂರಕ ವಾತಾವರಣ ಮೂಡಿಸಿದ್ದಕ್ಕಾಗಿ ಕೇಂದ್ರ ಸರಕಾರದಿಂದ ಗೌರವ ಗ್ರಾಮ ಸಭಾ ಪುರಸ್ಕಾರ ಮತ್ತು ರೂ. 5 ಲಕ್ಷ ಅನುದಾನ ಬಂದಿದೆ. ತ್ಯಾಜ್ಯ ಘಟಕ, ಗೊಬ್ಬರ ಉತ್ಪಾದನೆ, ಕುಂಬಾರಿಕೆಗೆ ಪ್ರೋತ್ಸಾಹ, ನ್ಯಾಪ್ಕಿನ್ ಘಟಕ ಸ್ಥಾಪನೆ ಇತ್ಯಾದಿ ಸಾಧನೆಗೆ ರಾಜ್ಯ ಸರಕಾರದಿಂದ ನೈರ್ಮಲ್ಯ ರತ್ನ ಪ್ರಶಸ್ತಿಯೊಂದಿಗೆ ರೂ. 16 ಲಕ್ಷ ಅನುದಾನ, ಗಾಂಧಿ ಗ್ರಾಮ ಪುರಸ್ಕಾರ ಮತ್ತು ರೂ. 5 ಲಕ್ಷ ಅನುದಾನ, ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಸ್ವಸಹಾಯ ಸಂಘ ಪ್ರಾರಂಭಿಸಿ ಆ ಮೂಲಕ ಮಹಿಳೆಯರಿಂದಲೇ ನ್ಯಾಪ್ಕಿನ್ ಘಟಕ ಸ್ಥಾಪಿಸಿದ್ದಕ್ಕಾಗಿ ಮುಂಬಯಿಯ ಖಾಸಗಿ ಸಹಭಾಗಿತ್ವದಲ್ಲಿ ಸರಕಾರದಿಂದ ರೂ. 1ಲಕ್ಷ ನಗದಿನೊಂದಿಗೆ ಬ್ರೇವರಿ ಎವಾರ್ಡ್ ಲಭಿಸಿದೆ.

See also  ಜನರ ಪ್ರೀತಿ ವಿಶ್ವಾಸಗಳಿಂದ ಯಾವುದೇ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿಸಬಹುದು: ನವಿತಾ ಜೈನ್

ಜನರ ಸಹಭಾಗಿತ್ವವಿದ್ದರೆ ಇನ್ನಷ್ಟೂ ಅನುಕೂಲತೆಗಳನ್ನು ಪಂ. ಮಟ್ಟದಲ್ಲಿ ನೀಡಲು ಸಾಧ್ಯ ಎಂಬುದು ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರ ಅಭಿಪ್ರಾಯ. ಜನರು ಕಸದ ಜೊತೆಗೆ ಪ್ಲಾಸ್ಟಿಕ್ ಕೂಡ ತುಂಬಿ ಕಳುಹಿಸುತ್ತಾರೆ. ಇದೊಂದು ದೊಡ್ಡ ಸಮಸ್ಯೆಯಾಗಿಯೇ ಇದೆ. ಉತ್ತಮ ಪ್ಲಾಸ್ಟಿಕನ್ನು ಬೇರ್ಪಡಿಸಿ ಶುದ್ಧೀಕರಿಸಿದರೆ ಉದ್ಯಮಿಯೊಬ್ಬರು ಅದನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಈ ಬಗ್ಗೆ ಜನರಲ್ಲಿ ಅರಿವು ಬರಬೇಕಾಗಿದೆ ಎಂದು ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಸವರು ಈ ಸಂಧರ್ಭ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು