ಪುತ್ತೂರು: ಕೊಳವೆಬಾವಿ ತೋಡಿದರೆ ಅಂತರ್ಜಲಕ್ಕೆ ಆಪತ್ತು ಎನ್ನುವ ಸರಕಾರ ಇನ್ನೂಂದೆಡೆ ಅಂತರ್ಜಲದ ಸಂರಕ್ಷಣೆಗೆ ಪೂರಕವೆನಿಸುವ ಕಿಂಡಿ ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದೆ. ಸುಳ್ಯ-ಪುತ್ತೂರು ಗಡಿ ಗ್ರಾಮದ ಪೆರುವಾಜೆ ಅಡ್ಯತಕಂಡ ಕಿಂಡಿ ಅಣೆಕಟ್ಟು ಧರೆಶಾಹಿಯಾಗಿ ಏಳು ವರ್ಷ ಕಳೆದಿದೆ. ಆದರೆ ಕುಸಿದ ಸ್ಥಿತಿಯಲ್ಲಿರುವ ಕಟ್ಟಕ್ಕೆ ಕಾಲಕಲ್ಪದ ಭಾಗ್ಯ ಸಿಕ್ಕಿಲ್ಲ. ಅಂದರೆ ದುರಸ್ತಿಗೆ ನಯಾಪೈಸೆ ಅನುದಾನ ಬಿಡುಗಡೆಗೊಂಡಿಲ್ಲ..!
ಪೆರುವಾಜೆ ಗ್ರಾಮದಲ್ಲಿ ಹಾದು ಹೋಗಿರುವ ಗೌರಿ ಹೊಳೆಯ ಅಡ್ಯತಕಂಡದಲ್ಲಿ 1999 ರಲ್ಲಿ ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಇದರಿಂದ ಎರಡು ಕಿ.ಮೀ.ವ್ಯಾಪ್ತಿಯ 100 ಕ್ಕೂ ಅಕ ಕೃಷಿ ಕುಟುಂಬಕ್ಕೆ ಸಹಕಾರಿ ಆಗಿತ್ತು. ಕೆಲ ಕುಟುಂಬಗಳು ದಿನಬಳಕೆಗೂ ಈ ನೀರನ್ನು ಬಳಕೆ ಮಾಡುತಿತ್ತು. 2009 ರಲ್ಲಿ ಸಣ್ಣ ಮಳೆಗೆ ನೀರು ತುಂಬಿ ಕಟ್ಟದ ಒಂದು ಭಾಗ ಸಂಪೂರ್ಣ ಕುಸಿದು ಹೋಯಿತು. ಎರಡು ಫಿಲ್ಲರ್ನ ಹಲಗೆ ಕೂಡ ನೀರು ಪಾಲಾಗಿತ್ತು. ಅನಂತರ ದುರಸ್ತಿಗೆ ಸಂಬಂಧಿಸಿ ಜನಪ್ರತಿನಿಗಳಿಗೆ, ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರೂ, ಪ್ರಯೋಜನ ಶೂನ್ಯ. ನೂರಾರು ಕುಟುಂಬಕ್ಕೆ ಆಧಾರವಾಗಿದ್ದ ಕಿಂಡಿ ಅಣೆಕಟ್ಟು ಧರೆಶಾಹಿ ಆದ ಅನಂತರ ನೂರಾರು ಎಕರೆ ಅಡಿಕೆ ತೋಟಕ್ಕೆ ನೀರಿನ ಅಭಾವ ಎದುರಾಗಿದೆ. ಈ ಹಿಂದೆ ಡಿಸೆಂಬರ್ ಕೊನೆಯಿಂದ ಎಪ್ರಿಲ್ ಕೊನೆ ತನಕ ಕಿಂಡಿ ಕಟ್ಟದಲ್ಲಿನ ನೀರೇ ಕೃಷಿ ತೋಟಕ್ಕೆ ಆಧಾರವಾಗಿತ್ತು. ಈಗಾಗಲೇ ಕಿಂಡಿ ಅಣೆಕಟ್ಟು ಧರೆಶಾಹಿಯಾಗಿ ಏಳು ವರ್ಷ ತುಂಬಿದ್ದು, ಬೇಸಗೆ ಕಾಲದ ಐದು ತಿಂಗಳು ನೀರಿಲ್ಲದೆ ಇಲ್ಲಿನ ತೋಟ ನಾಶದಂಚಿಗೆ ತಲುಪಿದೆ.
ಕಿಂಡಿ ಅಣೆಕಟ್ಟು ಕಾಮಗಾರಿ ಕಳೆಪೆಯೇ ದುಸ್ಥಿತಿಗೆ ಕಾರಣವಾಗಿದ್ದು, ದುರಸ್ತಿಯ ನೆಪದಲ್ಲಿ ವ್ಯಯಿಸಿದ ಲಕ್ಷಾಂತರ ರೂ. ಹಣದ್ದು ಬಂಡೆ ಮೇಲೆ ನೀರು ಹೊಯ್ದ ಕಥೆಯಂತಿದೆ. ದುರಸ್ತಿ ಅನಂತರ ಉಂಟಾದ ಭೂ ಸವೆತದಿಂದ ನೂರಾರು ಅಡಿಕೆ ಗಿಡ ನಾಶವಾಗಿದೆ. ಸ್ಥಳೀಯರು ಹೇಳುವ ಪ್ರಕಾರ ದುರಸ್ತಿ ಹಣದಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಬಹುದಿತ್ತು. ಆರಂಭದ ವರ್ಷದಿಂದಲೇ ಹಲಗೆಯ ಸೆರೆಯಿಂದ ನೀರು ಸೋರಿಕೆ ಆಗುತಿತ್ತು. ಅಲ್ಲಿಂದ ಆರಂಭಗೊಂಡ ಅಣೆಕಟ್ಟಿನ ಸ್ಥಿತಿ ಮತ್ತೆ ಸುಧಾರಣೆ ಕಂಡಿಲ್ಲ. ಈ ಬಾರಿಯಂತೂ, ತೋಟ ಉಳಿಯುವುದು ಅನುಮಾನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ವರ್ಷಂಪ್ರತಿ ಮಳೆಗಾಲದ ಪೂರ್ವ ಮತ್ತು ಅನಂತರ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡಬೇಕು. ಹಲಗೆ ನಿರ್ವಹಣೆ, ಕಸ ಕಡ್ಡಿ ವಿಲೇವಾರಿ ಇವೆಲ್ಲವೂ ಕಡ್ಡಾಯ. ಹಲಗೆಯಲ್ಲಿ ಸಣ್ಣ ಸಮಸ್ಯೆ ಬಂದರೂ, ಹೊಸ ಹಲಗೆ ಜೋಡಿಸಬೇಕು. ಇಲಾಖೆಯ ಲೆಕ್ಕಚಾರದ ಪ್ರಕಾರ ಅಣೆಕಟ್ಟಿನ 1 ಚದರ ಮೀ.ಗೆ ವಾರ್ಷಿಕ 1,300 ರೂ. ಖರ್ಚು ಬೀಳುತ್ತದೆ. ಆದರೆ ಸರಕಾರದಿಂದ ದೊರೆಯುವುದು 800 ರೂ. ಮಾತ್ರ. ಹಾಗಾಗಿ ಕಿಂಡಿ ಅಣೆಕಟ್ಟು ಇದ್ದರೂ ಹಲಗೆ ಹಾಕಲು, ತೆಗೆಯಲು, ಹಾಳಾದಾಗ ದುರಸ್ತಿ ಮಾಡಲು ಇಲಾಖೆಯದ್ದೂ ಹೆಣಗಾಡುವ ಸ್ಥಿತಿಯಿದು. ಈ ವರ್ಷದ ಜಿಲ್ಲೆಯಲ್ಲಿ ಸರಕಾರ 22 ಹೊಸ ಅಣೆಕಟ್ಟು ನಿಮರ್ಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಹಳೆ ಅಣೆಕಟ್ಟು ಸ್ಥಿತಿ ಹೇಗಿದೆ ಎಂಬ ಮಾಹಿತಿ ಅಕಾರಿಗಳ ಬಳಿ ಇಲ್ಲ..!
ನೀರಿಗೇನೂ ಮಾಡುವುದು..?
ಕೃಷಿ ತೋಟ, ದಿನಬಳಕೆಗೆ ಈ ಕಿಂಡಿ ಅಣೆಕಟ್ಟು ನಮಗೆ ಆಧಾರವಾಗಿತ್ತು. ಆದರೆ ಇದು ಕುಸಿದ ಅನಂತರ ಬೇಸಗೆ ಕಾಲದಲ್ಲಿ ಸಮಸ್ಯೆ ತಲೆದೋರಿದೆ. ಏಳು ವರ್ಷ ಕಳೆದರೂ, ಪುನರ್ ನಿರ್ಮಾಣ ಆಗದಿರುವುದು ದುರದೃಷ್ಟಕರ ಸಂಗತಿ.
ರಾಮಚಂದ್ರ.ಸಿ, ವೆಂಕಟರಮಣ.ಕೆ
ಸ್ಥಳೀಯ ನಿವಾಸಿಗಳು