News Kannada
Thursday, September 29 2022

ಕರಾವಳಿ

ಸೇವಾಶ್ರಮದಿಂದ ಶಾಲೆಗೆ ಹೋದ ಈರ್ವರು ಮಕ್ಕಳು ನಾಪತ್ತೆ : ಸಾರ್ವಜನಿಕರಿಂದ ಸೇಫ್ - 1 min read

Photo Credit :

ಸೇವಾಶ್ರಮದಿಂದ ಶಾಲೆಗೆ ಹೋದ ಈರ್ವರು ಮಕ್ಕಳು ನಾಪತ್ತೆ : ಸಾರ್ವಜನಿಕರಿಂದ ಸೇಫ್

ಪುತ್ತೂರು: ಸೇವಾಶ್ರಮದಿಂದ ಶಾಲೆಗೆ ಹೋಗುವುದೆಂದು ಹೇಳಿ ಶಾಲೆಗೂ ಹೋಗದೆ ಇತ್ತ ಆಶ್ರಮಕ್ಕೂ ಬಾರದೆ ಮನೆಗೆ ಹೋಗುವುದಾಗಿ ಡಿಸೈಡ್ ಮಾಡಿ ಹೋದ ಈರ್ವರು ಬಾಲಕರು ಕೋಡಿಂಬಾಡಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಸೇಫ್ ಆದ ಮತ್ತು ಪೊಲೀಸರು ಅವರೀರ್ವರನ್ನು ಮಕ್ಕಳ ಕಲ್ಯಾಣ ಕೇಂದ್ರ ಬಾಲಮಂದಿರಕ್ಕೆ ಕಳುಹಿಸಿದ ಘಟನೆ ಬುಧವಾರ ನಡೆದಿದೆ.

ಇಲ್ಲಿನ ನೆಲ್ಲಿಕಟ್ಟೆ ರಾಮಕೃಷ್ಣ ಸೇವಾ ಸಮಾಜದಲ್ಲಿನ ನೆಲ್ಲಿಕಟ್ಟೆ ಕಿ.ಪ್ರಾ.ಶಾಲೆಯ 5ನೇ ತರಗತಿಯ ಈರ್ವರು ವಿದ್ಯಾರ್ಥಿಗಳಾದ ಹಾಸನದ ಶ್ರೇಯಸ್ ಮತ್ತು ಚಿಕ್ಕಮಗಳೂರಿನ ಪವನ್ ಎಂಬವರು ನಾಪತ್ತೆಯಾಗಿ ಸಾರ್ವಜನಿಕರ ಮೂಲಕ ಸೇಫ್ ಆಗಿ ಸಿಕ್ಕಿದವರಾಗಿದ್ದಾರೆ. ಶ್ರೇಯಸ್ ಮತ್ತು ಪವನ್ ಎಂಬ ಈರ್ವರು ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಹೊರಟು ಹೋದವರು ಶಾಲೆಗೆ ಹೋಗದೆ ಮನೆಗೆ ಹೋಗುವುದೆಂದು ನಡೆದು ಕೊಂಡು ಉಪ್ಪಿನಂಗಡಿ ರಸ್ತೆಯಾಗಿ ಹೋಗಿದ್ದರು. ಕೋಡಿಂಬಾಡಿ ಸಮೀಪ ಶಶಿಧರ್ ಎಂಬವರ ಮಾಲಕತ್ವದ ಚಿಕನ್ ಸೆಂಟರ್ ನಲ್ಲಿನ ಪುರುಷೋತ್ತಮ ಎಂಬವರು ಅವರೀರ್ವರನ್ನು ನೋಡಿ ಈ ವಿದ್ಯಾರ್ಥಿಗಳು ನಮ್ಮ ಊರಿನವರಲ್ಲ ಎಂದುಕೊಂಡಿದ್ದರು. ಇದೇ ಸಮಯಕ್ಕೆ ರಿಕ್ಷಾ ಚಾಲಕ ಹರೀಶ್ ರವರು ರಸ್ತೆಯಲ್ಲಿ ಬರುವ ಬಾಲಕರು ಈ ಊರಿನವರಲ್ಲ ವಿಚಾರಣೆ ಮಾಡುವುದು ಒಳ್ಳೆಯದು ಎಂದು ಪುರುಷೋತ್ತಮರವರಲ್ಲಿ ತಿಳಿಸಿದ್ದರು. ಅದೇ ರೀತಿ ಪುರುಷೋತ್ತಮರವರು ಬಾಲಕರೀರ್ವರನ್ನು ಕರೆದು ಅಂಗಡಿಯಲ್ಲಿ ಕೂತುಕೊಳ್ಳಿಸಿ ಬಿಸ್ಕೆಟ್ ನೀಡಿ ವಿಚಾರಿಸಿದರು. ಆಗ ಬಾಲಕರು ಬಂದ ವಿಚಾರ ತಿಳಿಸಿದರು. ಪುರುಷೋತ್ತಮರವರು ಈ ಕುರಿತು ನ್ಯಾಯವಾದಿ ಕುಮಾರ್ ನಾಥ್ ಗೆ ಮಾಹಿತಿ ನೀಡಿದರು. ಕುಮಾರ್ ನಾಥ್ ರವರು ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಲಕರೀರ್ವರನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಆಶ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಮಕ್ಕಳ ಕಲ್ಯಾಣ ಇಲಾಖೆಗೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮಕ್ಕಳ ಕಲ್ಯಾಣ ಸಮಿತಿಯಿಂದ ವರದಿ ಬಂದ ಮೇಲೆ ಮುಂದಿನ ಕ್ರಮ:
ಬಾಲಕರೀರ್ವರು ನಾಪತ್ತೆಯಾಗಿರುವ ಕುರಿತು ನೆಲ್ಲಿಕಟ್ಟೆ ಶಾಲೆಯ ಮುಖ್ಯಗುರುಗಳು ದೂರು ನೀಡಿದ್ದರು. ಈ ಕುರಿತು ಆಶ್ರಮದವರು ಪೊಲೀಸ್ ಠಾಣೆಗೆ ಬಂದಿದ್ದು ಮಕ್ಕಳನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಆದರೆ ಮಕ್ಕಳು ಆಶ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿರುವ ಹಿನ್ನೆಲೆ ಮತ್ತು ಈ ಹಿಂದೆಯೂ ಆಶ್ರಮದಿಂದ ಮಕ್ಕಳು ಹೇಳದೆ ಹೋಗಿರುವ ಪ್ರಕರಣ ನಡೆದಿರುವುದರಿಂದ ಮುಂಜಾಗರುಕತೆಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಇಲಾಖೆಗೆಯಾದ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಾಹಿತಿ ಲಭ್ಯವಾಗಿದೆ.
 

See also  ನೀರು ಪಾಲಾಗಿದ್ದ ಬಾಲಕರ ಗ್ರಾಮಗಳಲ್ಲಿ ನೀರವ ಮೌನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು