News Kannada
Monday, September 26 2022

ಕರಾವಳಿ

ನ.27 ರಂದು ಸುರತ್ಕಲ್ ನಲ್ಲಿ ಶುಭಾರಂಭಗೊಳ್ಳಲಿದೆ “ಹರ್ಷ”ದ ಹೊಸ ಶಾಖೆ - 1 min read

Photo Credit :

ನ.27 ರಂದು ಸುರತ್ಕಲ್ ನಲ್ಲಿ ಶುಭಾರಂಭಗೊಳ್ಳಲಿದೆ

ಮಂಗಳೂರು: ಗೃಹಪಯೋಗಿ ವಸ್ತುಗಳು, ಟೆಲಿವಿಷನ್, ಕಂಪ್ಯೂಟರ್ಸ್, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಹಾಗೂ ಇದಕ್ಕೆ ಸಂಭಂಧಿಸಿದ ಇನ್ನಿತರ ಬಿಡಿ ಭಾಗಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಕರಾವಳಿ ಕರ್ನಾಟಕದ ಜನತೆಯ ಅವಶ್ಯಕತೆಗಳನ್ನು ಪೂರೈಸುತ್ತಿರುವ “ಹರ್ಷ” ತನ್ನ ಹೊಚ್ಚ ಹೊಸ ಶಾಖೆಯನ್ನು ಸುರತ್ಕಲ್ ನಲ್ಲಿ ಪ್ರಾರಂಭಿಸಿದೆ.

ಇದೀಗ 25000 ಚದರದಡಿ ವಿಸ್ತೀರ್ಣದಲ್ಲಿ ರೂಪುಗೊಂಡಿರುವ ಸುಂದರ ಹಾಗೂ ಸಂಪೂರ್ಣ ಹವಾನಿಯಂತ್ರಿತ ಶೋ ರೂಮ್ ಹೊಂದಿದ್ದು, ಪ್ರಕಾಶ್ ಪ್ರೈವೇಟ್ ರಿಟೈಲ್ ಲಿಮಿಟೆಡ್ ಅಡಿಯಲ್ಲಿ ‘ಹರ್ಷ’ ಕರಾವಳಿ ಸೇರಿದಂತೆ ಮಲೆನಾಡುಗಳಲ್ಲಿ ಮನೆ ಮಾತಾಗಿದೆ.

ಅತ್ಯುತ್ತಮ ಜಗತ್ಪ್ರಸಿದ್ಧ ಬ್ರ್ಯಾಂಡ್ ಗಳ ಅತ್ಯಾಧುನಿಕ ಶ್ರೇಣಿಯ ಗೃಹೋಪಕರಣಗಳೊಂದಿಗೆ ಸುಂದರ ಪರಿಸರದಲ್ಲಿ ಒಂದೇ ಸೂರಿನಡಿಯಲ್ಲಿ ಒದಗಿಸುತ್ತಿರುವ ‘ಹರ್ಷ’ ತನ್ನ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಸೌಲಭ್ಯವನ್ನು ನೀಡುತ್ತಿದೆ.

ಹೊಸ ಶಾಖೆಯು ಸುರತ್ಕಲ್ ನಲ್ಲಿರುವ ಆರ್ ಇ ಬಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದ್ದು, ನ. 27 ರಂದು ಸದಸ್ಯರಾಗಿರುವ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ ಮತ್ತು  ದ.ಕ ಜಿಲ್ಲೆಯ ಲೋಕ ಸಭಾ ಸದಸ್ಯರಾಗಿರುವ ನಳೀನ್ ಕುಮಾರ್ ಕಟೀಲ್ ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮಂಗಳೂರು ಉತ್ತರ ಶಾಸಕರಾಗಿರುವ ಮೊಯ್ದೀನ್ ಭಾವ, ಮಂಗಳೂರು ಸಿಟಿ ಕಾರ್ಪೊರೇಶನ್ ನ ಕಾರ್ಪೊರೇಟರ್ ಅಶೋಕ್ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ನ ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಮತ್ತು ಆರ್ ಇ ಬಿ ಗ್ರೂಪ್ ನ ಮ್ಯನೇಜಿಂಗ್ ಡೈರೆಕ್ಟರ್ ಅಶೋಕ್ ರೈ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ಪ್ರಕಾಶ್ ಮಾತನಾಡಿ ಸುರತ್ಕಲ್ ಹಾಗೂ ಹೊರಗಿನ ಜನತೆ ಮುಂದಿನ ದಿನಗಳಲ್ಲಿ ಈ ಹೊಸ ಶಾಖೆಗೆ ಭೇಟಿ ನೀಡಿ ನಮ್ಮ ಹೊಸ ಸೌಲಭ್ಯಗಳ ಜೊತೆಗೆ ನಮ್ಮ ‘ಹರ್ಷ’ದಲ್ಲಿ ಶಾಪಿಂಗ್ ಮಾಡಿ ಸಂತೋಷದ ಹೊಸ ಅನುಭವವನ್ನು ಪಡೆಯಬಹುದು ಎಂದು ಹೇಳಿದರು.

See also  ಭ್ರಷ್ಟಚಾರ ಹಿನ್ನೆಲೆ ತಾಲ್ಲೂಕು ಕಚೇರಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ ಬಂಗೇರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು