News Kannada
Friday, December 09 2022

ಕರಾವಳಿ

ಧರ್ಮಸ್ಥಳ ಲಕ್ಷದೀಪೋತ್ಸವ: ರಾಜ್ಯ ಮಟ್ಟದ ವಸ್ತುಪ್ರದರ್ಶನ

Photo Credit :

ಧರ್ಮಸ್ಥಳ ಲಕ್ಷದೀಪೋತ್ಸವ: ರಾಜ್ಯ ಮಟ್ಟದ ವಸ್ತುಪ್ರದರ್ಶನ

ಬೆಳ್ತಂಗಡಿ: ಸಾಮಾನ್ಯವಾಗಿ ದೇವಾಲಯಗಳ ವಾರ್ಷಿಕೋತ್ಸವ, ದೀಪೋತ್ಸವಗಳೆಂದರೆ ಕೇವಲ ಜನಸಂದಣಿ ಸೇರುವ, ತಿನ್ನುವ ತಿರುಗಾಡುವ ಒಂದು ಜಾತ್ರೆಯಾಗಿ ಪರಿಣಮಿಸುತ್ತದೆ. ಅದರಿಂದ ಯಾವುದೇ ಸಾಂಸ್ಕೃತಿಕ ಸಾಧನೆಯಾಗುವುದಿಲ್ಲ. ಶೈಕ್ಷಣಿಕ ಲಾಭವೂ ಉಂಟಾಗುವುದಿಲ್ಲ. ಆದರೆ ಧರ್ಮಸ್ಥಳದದಲ್ಲಿ ನಡೆಯುವ ಲಕ್ಷದೀಪೋತ್ಸವ ಆಚರಣೆ ಮಾತ್ರ ಹಾಗಲ್ಲ. ಇಲ್ಲಿ ವೈವಿಧ್ಯತೆ, ವಿಶಿಷ್ಟತೆ ಇದೆ.

ಸರ್ವ ಧರ್ಮದ ಅರಿವು, ಸಾಹಿತ್ಯದ ಅಭಿರುಚಿಗಾಗಿ ಆರು ದಿನಗಳ ಕಾಲ ರಾಜ್ಯ ಮಟ್ಟದ ವಸ್ತುಪ್ರದರ್ಶನವೊಂದನ್ನು ಏರ್ಪಡಿಸಲಾಗುತ್ತದೆ. ದೀಪೋತ್ಸವದ ಕಾರ್ಯಕ್ರಮಗಳು ಆರಂಭವಾಗುವುದೇ ವಸ್ತುಪ್ರದರ್ಶನ ಉದ್ಘಾಟನೆಯಿಂದ ಎಂದೇ ಹೇಳಬಹುದು. ಇದೀಗ ಈ ವ್ಯವಸ್ಥೆಗೆ 39 ನೇ ವರ್ಷ. ಕಳೆದ ಗುರುವಾರ ಸಂಜೆ ಉದ್ಘಾಟನೆಗೊಂಡ ಪ್ರದರ್ಶನದ ಒಳಗೇನಿದೆ ಎಂಬ ಕುತೂಹಲ ಎಲ್ಲರಿಗೂ ಇರುವಂತಹದು. ಧರ್ಮಸ್ಥಳದ ಮಹಾದ್ವಾರದ ಸನಿಹದಲ್ಲೇ ಇರುವ ಎಸ್ಡಿಎಂ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಹಾಕಿರುವ ಬೃಹತ್ ಚಪ್ಪರದಡಿಯಲ್ಲಿ ಆಕರ್ಷಕ ದ್ವಾರವನ್ನು ಹೊಂದಿರುವ ವಸ್ತುಪ್ರದರ್ಶನದ ಕಾಣಸಿಗುತ್ತದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರು ಬಂದರೂ ಯಾರು ನಿರಾಶರಾಗುವುದಿಲ್ಲ. ಪ್ರದರ್ಶನ ಮತ್ತು ವ್ಯಾಪಾರ ಎರಡೂ ಇರುವ ವ್ಯವಸ್ಥೆ ಇದು. ಈ ಬಾರಿ 198 ಮಳಿಗೆಗಳು ಇಲ್ಲಿ ಮೇಳೈಸಿವೆ.

ವಿವಿಧ ಪ್ರಕಾಶನ ಸಂಸ್ಥೆಯವರು ಪುಸ್ತಕಗಳನ್ನು ಪ್ರದರ್ಶನಕ್ಕಿಟ್ಟು ಮರಾಟ ಮಾಡುತ್ತಾರೆ. ಇದರಿಂದ ಪುಸ್ತಕ ಪ್ರಿಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಅಂತರ್ಜಾಲದ ಕಾಲದಲ್ಲೂ ಪುಸ್ತಕ ವ್ಯಾಪಾರ ಮಾತ್ರ ಇಲ್ಲಿ ಕಡಿಮೆಯಾಗದು. ವಿವಿಧ ವಿನ್ಯಾಸಗಳ ಫ್ಯಾನ್ಸಿ, ಸೀರೆಗಳ ಅಂಗಡಿಗಳನ್ನು ಕಣ್ಮನ ಸೆಳೆಯುವಂತೆ ಸಜ್ಜುಗೊಳಿಸಲಾಗಿದೆ. ಹೊಸ ಹೊಸ ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯ. ಹಸಿರು ಇಂಧನ ಒಲೆ, ಹಾಲು ಕರೆಯುವ ಯಂತ್ರ, ರಬ್ಬರ್ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ಇಲೆಕ್ಟ್ರಾನಿಕ್ ವಸ್ತುಗಳು, ಗೋಬರ್ ಗ್ಯಾಸ್, ಬ್ಯಾಕ್ ರೆಸ್ಟ್, ಸೆಲ್ಕೋ ಸೋಲಾರ್, ಆಯುರ್ವೇದಿಕ್ ಔಷಧಿಗಳು, ಅಗರಬತ್ತಿ, ಅಲ್ಯುಮಿನಿಯಂ ಲ್ಯಾಡರ್, ಗೊಂಬೆಗಳು, ಸ್ಟೇಷನರಿ ವಸ್ತುಗಳು, ಫೈಬರ್ ಪಿಂಗಾಣಿ, ಕೆಂಪು ಕಲ್ಲಿನ ಬ್ಲಾಕ್, ಸಾವಯವ ಉತ್ಪನ್ನಗಳು, ಅಡುಗೆ ವಸ್ತುಗಳು, ರೋಟಿ ಮೇಕರ್, ವಾಚ್, ಆಹಾರ ಸಂರಕ್ಷಣೆ, ಒಂದು ಗ್ರಾಂ ಗೋಲ್ಡ್,  ತರಕಾರಿ ಬೀಜಗಳು, ಮಣ್ಣಿನ ಆಭರಣಗಳು, ಮರದ ಕರಕುಶಲ ವಸ್ತುಗಳು, ಅಕ್ವೇರಿಯಂ, ಸೊಳ್ಳೆ ನಿಯಂತ್ರಕ, ಹನಿ ನೀರಾವರಿ ಸಲಕರಣೆಗಳು ಈ ರೀತಿ 41 ವಿಧದ ಮಳಿಗೆಗಳು ಆಕರ್ಷಿಸುತ್ತಿವೆ. ಇಲ್ಲಿಗೆ ಬಂದವರು ವ್ಯಾಪರವೀ ಮಾಡಬಹುದಲ್ಲದೆ ಅಪೂರ್ವ ವಸ್ತುಗಳ ಬಗ್ಗೆ ಗೊತ್ತಿರದಿದ್ದರೆ ಅದರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರಣ್ಯ, ಆರೋಗ್ಯ , ಶಿಕ್ಷಣ, ಅಂಚೆ ಇಲಾಖೆಯವರು ಮಳಿಗೆಯನ್ನಿಟ್ಟು ಮಾಹಿತಿ ನೀಡುತ್ತಿದ್ದಾರೆ. ಕೆಎಂಎಫ್ ಮಂಗಳೂರು, ಸ್ಕ್ಯಾಡ್ಸ್ನವರನ್ನೂ ಇಲ್ಲಿ ಭೇಟಿ ಮಾಡಬಹುದು. ಎಲ್ಐಸಿ, ಕರ್ನಾಟಕ, ಸಿಂಡಿಕೇಟ್, ಕೆನರಾ, ಕಾರ್ಪೋರೇಶನ್ ಬ್ಯಾಂಕ್ನ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಅರಣ್ಯ ಇಲಾಖೆಯವರು ಗುಹೆಯೊಂದನ್ನು ರಚಿಸಿ ಅಲ್ಲಿ ಕಾಡಿನ ಅನುಭವವನ್ನು ಪಡೆಯುವಂತೆ ಮಾಡಿರುವ ರಚನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

See also  ಕೃಷ್ಣ ಮೃಗದ ಚರ್ಮ ಪತ್ತೆ: ಇಬ್ಬರು ಆರೋಪಿಗಳ ಬಂಧನ

ಎಸ್ಡಿಎಂ ಶಿಕ್ಷಣ ಸಂಸ್ಥೆ, ನಾಡಿನ ಯುವಜನರ ಆಶಾಕಿರಣವಾದ ರುಡ್ಸೆಟ್ ಸಂಸ್ಥೆ, ರಾಜ್ಯದ ಬಡವರ ಆರ್ಥಿಕ ಚೈತನ್ಯಕ್ಕೆ ಹೊಸಭಾಷ್ಯವನ್ನು ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳಿಗೆಗೆಗಳು ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಬಗ್ಗೆ ಗಮನ ಸೆಳೆವ ಮಣ್ಣಿನಂದ ತಯಾರಿಸಿದ ಆಕೃತಿಗಳು ಗಮನ ಸೆಳೆಯುತ್ತಿದೆ. ಇಲ್ಲಿ ಸ್ವಸಹಾಯ ಸಂಘಗಳ ಸದಸ್ಯರುಗಳು ನಡೆಸುವ ಸಭೆಯನ್ನು ಮಣ್ಣಿನ ಆಕೃತಿಗಳನ್ನು ರಚಿಸಿರುವುದು ಗಮನಸೆಳೆಯುತ್ತಿವೆ. ಈ ಮಳಿಗೆಯಲ್ಲಿ ಕರಕುಶಲ ಕಮರ್ಿಗಳಿಂದ  ತಯಾರಿಸಲಾದ ಕೈಚಳಕವನ್ನು ನೋಡಬಹುದು. ಆರೋಗ್ಯದ ದೃಷ್ಟಿಯಿಂದ ಪ್ರಕೃತಿ ಚಿಕಿತ್ಸಾ ವಿಧಾನ ಪ್ರಾಮುಖ್ಯತೆಯನ್ನು ವಿವರಿಸುವ, ಇದಕ್ಕೆ ಪೂರಕವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಮಳಿಗೆ ಇದೆ. ಉಜಿರೆ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜು ಹಾಗೂ ವೇಣೂರು ಎಸ್ಡಿಎಂ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಚುರುಕುತನ, ಸಾಮರ್ಥ್ಯವನ್ನು ಬಿಂಬಿಸುವ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ತಾವೇನು ಕಡಿಮೆ ಇಲ್ಲ ಎಂಬುದಕ್ಕೆ ತಾವೇ ತಯಾರಿಸಿದ ಹೊಸ ಆವಿಷ್ಕಾರಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ರುಡ್ ಸೆಟ್ ಬಜಾರ್ ಹಾಗೂಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಮಳಿಗೆಯಲ್ಲಿ ಉತ್ಕೃಷ್ಟ ಮಟ್ಟದ ಮಕ್ಕಳ ಹಾಗೂ ದೊಡ್ಡವರ ಸಿದ್ಧ ಉಡುಪುಗಳು, ವಿವಿಧ ಸಾಮಾಗ್ರಿಗಳು ಮಾರಾಟಕ್ಕೆ ಲಭ್ಯವಿದೆ.

ಇಷ್ಟೇ ಅಲ್ಲದೆ ಅಟೋ ಮ್ಯಾಟ್ರಿಕ್ಸ್, ಭಾರತ್ ಅಟೋ ಕಾರ್ಸ್ , ಹುಂಡೈ, ಹೀರೋ, ಮಾಂಡೋವಿ ಮೋಟಾರ್ಸ್ ನಂತ ಡೀಲರುಗಳು ಕಾರುಗಳನ್ನು, ದ್ವಿಚಕ್ರವಾಹನಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಆಸಕ್ತರು ಸ್ಥಳದಲ್ಲೇ ಖರೀದಿಸಬಹುದಾಗಿದೆ. ಇಷ್ಟೆಲ್ಲಾ ನೋಡಿ, ಖರೀದಿಸಿದಾಗ ಹೊಟ್ಟೆ ತಾಳ ಹಾಕುವುದು ಸಹಜ. ಇದಕ್ಕೆ ತಂಪು ಪಾನೀಯ, ವಿವಿಧ ಬಗೆಯ ತಿಂಡಿ ತಿನಸುಗಳ ಕ್ಯಾಂಟೀನ್, ಐಸ್ ಕ್ರೀಂಗಳು, ಕ್ಯಾಂಪ್ಕೋ ಚಾಕಲೇಟು, ಒಣ ಹಣ್ಣುಗಳು ಇಲ್ಲಿ ಲಭ್ಯವಿದೆ. ಒಟ್ಟಾರೆ ಒಂದೇ ಸೂರಿನಡಿ ಏನುಂಟು, ಏನಿಲ್ಲಾ ಎಂಬಂತೆ ಜೀವನಾವಶ್ಯಕ ಎಲ್ಲಾ ವಿಚಾರಗಳ, ವಸ್ತುಗಳ ಅಚ್ಚುಕಟ್ಟಾದ ಪ್ರದರ್ಶನ ಇದಾಗಿರುವುದರಿಂದ ಬಂದವರು ಬೇಜಾರಾಗಲು ಸಾಧ್ಯವೇ ಇಲ್ಲ.  ರತ್ನ ಮಾನಸದ ಪಾಲಕ ಎಂ. ಕೃಷ್ಣ ಶೆಟ್ಟಿ ಮತ್ತು ರುಡ್ ಸೆಟ್ ಅಧಿಕಾರಿಗಳು ಮಳಿಗೆಗಳ ವ್ಯವಸ್ಥಾಪಕರಾಗಿದ್ದಾರೆ.

ಒಳ್ಳೆಯ ಗುಣಮಟ್ಟದ ವಸ್ತುಗಳು ಇಲ್ಲಿಲ ಮಾರಾಟವಾಗುವುದರಿಂದ ಅಗಮಿಸುವ ಭಕ್ತಾಧಿಗಳಿಗೆ ಕೊಂಡುಕೊಳ್ಳಲು ಸದಾವಕಾಶ ದೊರಕುತ್ತದೆ. ಅಲ್ಲದೆ ಈ ಭಾಗದ ಜನರು ಈ ವಸ್ತುಪ್ರದರ್ಶನಕ್ಖಾಗಿ ಕಾದು ಇದೇ. ಸಂದರ್ಭದಲ್ಲಿ ಅವರಿಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಾರೆ. ಬೌದ್ಧಿಕ ವಿಕಾಸಕ್ಕೂ ಇಲ್ಲಿ ಅವಕಾಶವಿದ್ದು. ಒಟ್ಟಿನಲ್ಲಿ ಜನರಿಗೆ ತುಂಬಾ ಪ್ರಯೋಜನವಾಗುತ್ತದೆ. ಜ್ಞಾನ ದಾನ ಇದರ ಉದ್ದೇಶವಾಗಿದೆ.- ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು