ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ತಾಕೋಡೆ ಮನೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಲು ಬಂದ ಮೆಸ್ಕಾಂ ಸಿಬ್ಬಂದಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀದರ್ ಮೂಲದ ಮೂಡುಬಿದಿರೆ ಮೆಸ್ಕಾಂ ಸಿಬ್ಬಂದಿ ಪಪ್ಪು ಕುಮಾರ್ ಹಲ್ಲೆಗೊಳಗಾದವರು. ತಾಕೋಡೆ ನಿವಾಸಿ ಕೀರ್ತಿ ರೆನಾಲ್ಡ್ ಎಂಬವರ ಮನೆಯ ವಿದ್ಯುತ್ ಕಡಿತಗೊಳಿಸುವ ಸಂದರ್ಭ ಹಲ್ಲೆ ನಡೆದಿದೆ ಎನ್ನಲಾಗಿದೆ. ಆದರೆ ಮೂಲವೊಂದರ ಪ್ರಕರಣ ಮೆಸ್ಕಾಂ ಸಿಬ್ಬಂದಿಯು ಹಳೇ ದ್ವೇಷವನ್ನು ಮುಂದಿಟ್ಟುಗೊಂಡು ಸುಳ್ಳು ದೂರು ನೀಡಿದ್ದಾರೆ ಎನ್ನವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.