ಕಾಸರಗೋಡು: ಬೈಕ್ ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬದಿಯಡ್ಕ ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಕುಂಡಗುಯಿಯ ಯೋಗೀಶ್ (೩೫) ಮತ್ತು ಜ್ಞಾನೇಂದ್ರ ಕುಮಾರ್ (೨೭) ಎಂದು ಗುರುತಿಸಲಾಗಿದೆ. ಇವರಿಂದ ಐದೂವರೆ ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಸುಳ್ಯ ಕಡೆಯಿಂದ ಬರುತ್ತಿದ್ದ ಬೈಕನ್ನು ಕೊಟ್ಯಾಡಿ ಬಳಿ ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ.