ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ (ವಲಯ-1, ಜಿಲ್ಲೆ 3181) ಹಾಗೂ ಮೂಡುಬಿದಿರೆ ಜೈನ ಪಿಯು ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ನಡೆಯುವ ಯುವಸಿರಿ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಶನಿವಾರ ಸಂಜೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಎಂ.ಎಂ ಸುರೇಶ್ ಚೆಂಗಪ್ಪ ಸ್ಪರ್ಧೆಯನ್ನು ಉದ್ಘಾಟಿಸಿ, ನಗುಮುಖದ ಸಂವಹನದಿಂದ ಸಂಬಂಧಗಳು ಬೆಳೆಯುತ್ತದೆ. ಕೇವಲ ಎರಡು ವರ್ಷದ ಕ್ಲಬ್ ಕಡಿಮೆ ಅವಧಿಯಲ್ಲೇ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಕ್ಲಬ್ ಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ನ ಅಧ್ಯಕ್ಷ ಧೀರಜ್ ಕುಮಾರ್ ಕೆ. ಸನಾರಂಭದ ಅಧ್ಯಕ್ಷತೆವಹಿಸಿದರು. ಜಿಲ್ಲಾ ಇಂಟರ್ಯಾಕ್ಟ್ ಸಮಿತಿಯ ಅಧ್ಯಕ್ಷ ರಾಜ ಪತ್ರಾವೋ, ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಿ ಸಾಲ್ಯಾನ್, ವಲಯ 1ರ ವಲಯ ಲೆಫ್ಟಿನಂಟ್ ಮಾದವ ಅಮೀನ್, ಜೈನ ಪಿಯು ಕಾಲೇಜು ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಅಧ್ವಿತ್ ಎಂ.ಜೈನ್ ಮುಖ್ಯ ಅತಿಥಿಯಾಗಿದ್ದರು.
ವಿದ್ವಾನ್ ಮಂಜುನಾಥ್, ಅವನಿ, ಅಭಿಜಿತ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಯುವಸಿರಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಪಿ.ಪ್ರತಾಪ್ ಕುಮಾರ್, ಮಿಡ್ ಟೌನ್ ನ ಕಾರ್ಯದರ್ಶಿ ಜಯಸೂರ್ಯ ಪಿ. ಉಪಸ್ಥಿತರಿದ್ದರು. ಪ್ರವೀಣ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
–
ಇಂದು ಯುವಸಿರಿ ಸಮ್ಮೇಳನ
ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ ಆತಿಥ್ಯದಲ್ಲಿ ನ.27ರಂದು ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಯುವಸಿರಿ ಅಂತರ್ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ.
—
ಎಂಬಿಡಿ_ನವೆಂಬರ್26_3
ಯುವಸಿರಿ ಸಾಂಸ್ಕೃತಿಕ ಸ್ಪಧರ್ೆಗಳಿಗೆ ಚಾಲನೆ ನೀಡಲಾಯಿತು.
—