ಪುತ್ತೂರು: ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಗ್ರಾ.ಪಂ.ಮಟ್ಟದಲ್ಲಿ ತ್ಯಾಜ ವಿಲೇವಾರಿಗೆ ಘನತ್ಯಾಜ್ಯ ಘಟಕ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಪ್ರಸ್ತಾವನೆ ಪ್ರಾರಂಭಿಕ ಹಂತದಿಂದ ಇನ್ನೂ ಜಿಗಿತುಕೊಂಡಿಲ್ಲ.
ತಾಲೂಕಿನ 41 ಗ್ರಾ.ಪಂ. ಪೈಕಿ ತಾಲೂಕಿನ ಎರಡು ಪಂಚಾಯತ್ ಗಳಲ್ಲಿ ಮಾತ್ರ ಈ ಘಟಕ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ, ಉಳಿದೆಡೆ ಜಾಗದ ಸಮಸ್ಯೆ, ಕ್ರಿಯಾಯೋಜನೆ ಸಲ್ಲಿಕೆ ಹಂತದಿಂದ ಮೇಲೇಳು ಪ್ರಯಾಸ ಪಡುತ್ತಿದೆ. ಆರಂಭದಲ್ಲಿ ನಿರ್ಮಲ ಭಾರತ ಹೆಸರಿನಡಿ ಘಟಕ ನಿರ್ಮಾಣ ಚಾಲನೆಗೊಂಡು, ಅನಂತರ ಜಿ.ಪಂ. ವ್ಯಾಪ್ತಿಯಲ್ಲಿನ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಛ ಭಾರತ್ ಅಭಿಯಾನದಡಿ ಕಾರ್ಯರಂಭಿಸಿತ್ತು. ಪ್ರತಿ ಗ್ರಾ.ಪಂ.ಗಳಲ್ಲಿ ಘಟಕ ನಿರ್ಮಿಸಿ ದ.ಕ.ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ರೂಪಿಸುವ ಉದ್ದೇಶ ಇರಿಸಲಾಗಿತ್ತು. ಅದಕ್ಕಾಗಿ 2012 ರಿಂದ ಪ್ರತಿ ಗ್ರಾ.ಪಂ.ಗೆ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಸ್ಥಳ ನಿಗದಿ, ಯೋಜನಾ ವರದಿ ತಯಾರಿ, ಗ್ರಾಮ ನಕ್ಷೆ ಮೊದಲಾದ ದಾಖಲೆಗಳನ್ನು ಸಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆ ಪಡೆದು, ಅನಂತರ ಜಿಲ್ಲಾ ಪಂಚಾಯತ್ನಿಂದ ಅನುದಾನ ಪಡೆದುಕೊಳ್ಳಬೇಕು.
ಗುರಿ ಮುಟ್ಟಿಲ್ಲ
ಗ್ರಾ.ಪಂಗಳಲ್ಲಿ ಘಟಕ ನಿರ್ಮಾಣಕ್ಕೆ ಕನಿಷ್ಠ ಅರ್ಧ ಎಕರೆ ಜಾಗ ಇರಬೇಕು ಎಂಬ ನಿಯಮ. ಆದರೆ ಜಾಗ ಇಲ್ಲದ ಪಂಚಾಯತ್ ಗಳಲ್ಲಿ 10 ಸೆಂಟ್ಸ್ ನಲ್ಲೂ ಘಟಕ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದೆ. ಇಲ್ಲಿ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಜಾಗ ಗುರುತಿಸಬೇಕು. ಅದು ಅರಣ್ಯ ಇಲಾಖೆ ಅಥವಾ ಬೇರೆ ಇಲಾಖೆಗಳ ವ್ಯಾಪ್ತಿಯ ಸ್ಥಳವಾಗಿದ್ದರೆ, ಅದನ್ನು ಪಂಚಾಯತ್ ತನ್ನ ಹೆಸರಿಗೆ ಬರೆಸಿ, ಅನಂತರ ತಾಲೂಕು ಪಂಚಾಯತ್ ಮೂಲಕ ಜಿಲ್ಲಾ ಪಂಚಾಯತ್ ಗೆ ಘಟಕ ನಿರ್ಮಾಣದ ಕುರಿತು ಕ್ರಿಯಾಯೋಜನೆ ಸಲ್ಲಿಸಬೇಕು.
ಎರಡು ಪಂಚಾಯತ್ ಗಳಲ್ಲಿ ಪೂರ್ಣ
ತಾ.ಪಂ. ನೀಡುವ ಮಾಹಿತಿ ಆಧಾರದಲ್ಲಿ 41 ಪಂಚಾಯತ್ಗಳಲ್ಲಿ 2 ಪಂಚಾಯತ್ಗಳು ಮಾತ್ರ ಘಟಕ ನಿರ್ಮಾಣ ಪೂರ್ಣಗೊಳಿಸಿವೆ. ಉಳಿದ 11 ಪಂಚಾಯತ್ ಸ್ಥಳ ಕಾದಿರಿಸಿ, ಪಹಣಿ ಪತ್ರ ಆಗಿ, 20 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಿ, ಅದನ್ನು ಜಿಲ್ಲಾ ಪಂಚಾಯತ್ಗೆ ಕಳುಹಿಸಿದೆ. ಉಳಿದ ಪಂಚಾಯತ್ ಗಳಲ್ಲಿ ಕೆಲವೆಡೆ ಜಾಗದ ಸಮಸ್ಯೆ ಇದೆ. ಇನ್ನು ಕೆಲ ಪಂಚಾಯತ್ ಗಳಲ್ಲಿ ಜಾಗ ಗುರುತಿಸಿ, ಅದಕ್ಕೆ ಸಂಬಂಸಿ ಕಡತಗಳು ಕಂದಾಯ ಇಲಾಖೆಯಲ್ಲಿವೆ ಎನ್ನುವುದು ತಾಲೂಕು ಪಂಚಾಯತ್ ನೀಡುವ ಮಾಹಿತಿ.
ವಿಳಂಬ ಯಾಕೆ
ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯವನ್ನು ಒಂದೆಡೆ ಕಲೆ ಹಾಕಿ, ಅದರಿಂದ ಪರಿಸರ ಸ್ನೇಹಿ ಗೊಬ್ಬರ ಉತ್ಪಾದಿಸುವುದು ಮೊದಲಾದ ಸಾಧಕಗಳನ್ನು ಇಟ್ಟುಕೊಂಡು, ಘಟಕ ನಿಮರ್ಾಣಕ್ಕೆ ಒತ್ತು ನೀಡಲಾಗಿತ್ತು. ಆದರೆ ಅದು ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಕಳೆದ ನಾಲ್ಕು ವರ್ಷದಿಂದಲೂ ಇದ್ದ ಸ್ಥಳ ಸಂಬಂ ಸಮಸ್ಯೆಗಳು ಇನ್ನೂ ಮುಗಿದಿಲ್ಲ. ಹಾಗಾಗಿ ಸ್ವಚ್ಛ ಗ್ರಾಮಕ್ಕೆ ಪೂರಕವಾಗಬೇಕಿದ್ದ ಘಟಕಗಳು ಆರಂಭಿಕ ಹಂತದಿಂದ ಮೇಲೆಳಲು ಹೆಣಗಾಡುತ್ತಿದೆ.
ಪ್ರಗತಿಯಲ್ಲಿ ಇದೆ
ಕಡಬ ಮತ್ತು ಉಪ್ಪಿನಂಗಡಿಗಳಲ್ಲಿ ಘಟಕ ನಿರ್ಮಾಣ ಆಗಿದೆ. ಕೆಲ ಪಂಚಾಯತ್ಗಳಲ್ಲಿ ಜಾಗದ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಹತ್ತಿರ ಪಂಚಾಯತ್ ಗಳು ಸೇರಿ ಒಂದೆಡೆ ಘಟಕ ನಿರ್ಮಿಸುವ ಬಗ್ಗೆ ಚಿಂತನೆಯಲ್ಲಿದೆ. ಏಳೆಂಟು ಪಂಚಾಯತ್ ಗಳ ಕ್ರಿಯಾಯೋಜನೆ ಕಳುಹಿಸಲಾಗಿದ್ದು, ಇನ್ನೂ ಕೆಲ ಪಂಚಾಯತ್ಗಳ ಸ್ಥಳ ಪಹಣಿ ಸಂಬಂ ಕಡತಗಳು ಕಂದಾಯ ಇಲಾಖೆಗಳಲ್ಲಿ ಇವೆ.
ಜಗದೀಶ್ ಎಸ್ , ಕಾರ್ಯನಿರ್ವಹಣಾಕಾರಿ ತಾ.ಪಂ. ಪುತ್ತೂರು
90 ಶೇ. ಪೂರ್ಣ
ಘನ ತ್ಯಾಜ್ಯ ಘಟಕ ಸಂಬಂಸಿ ಜಾಗ ಗುರುತಿಗೆ ಗ್ರಾ.ಪಂ. ಮೂಲಕ ಸಲ್ಲಿಸಲಾದ ಕಡತಗಳಲ್ಲಿ ಶೇ.90 ರಷ್ಟು ವಿಲೇವಾರಿ ಆಗಿದೆ. ಪರಿಶೀಲನೆ ನಡೆಸಿ, ಅರ್ಹವಾಗಿದ್ದರೆ, ಪಹಣಿ ಪತ್ರದ ವ್ಯವಸ್ಥೆ ಮಾಡಲಾಗುತ್ತದೆ.
ಅನಂತಶಂಕರ ತಹಶೀಲ್ದಾರ್, ಪುತ್ತೂರು