ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಪಯಸ್ವಿನಿ ಹೊಳೆಯ ಬಾವಿಕ್ಕರೆಯಲ್ಲಿ ನಡೆದಿದೆ.
ಬಾವಿಕ್ಕರೆಯ ಹಾಶಿ೦(೧೨) ಮತ್ತು ಅಬ್ದುಲ್ ಅಜೀಜ್ (೧೭) ಮೃತಪಟ್ಟವರು. ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದು, ಹೊಳೆಪಾಲಾಗಿದ್ದ್ದ ಹಾಶೀ೦ ಮತ್ತು ಅಬ್ದುಲ್ ಅಜೀಜ್ ನನ್ನು ಸ್ಥಳೀಯರು ಮೇಲಕ್ಕೆತ್ತಿ ಚೆಂಗಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ .
ಐವರು ಮಕ್ಕಳು ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಬೊಬ್ಬೆ ಕೇಳಿ ಸ್ಥಳೀಯರು ಇಬ್ಬರನ್ನು ಪಾರು ಮಾಡಿದರು. ಉಳಿದ ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸದರೂ ಜೇವ ಉಳಿಸಲಾಗಲಿಲ್ಲ. ಅಡೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.