ಕಾಸರಗೋಡು: ಕ್ಲಬ್ ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಕೊಲೆಗೀಡಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೋವಿಕ್ಕಾನದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಪೊವ್ವಲ್ ನ ಅಬ್ದುಲ್ ಖಾದರ್ (19) ಮೃತಪಟ್ಟವರು. ಪೊವ್ವಲ್ ನ ಆಫಿಯಾದ್ (22) ಮತ್ತು ಸತ್ತಾದ್ (22) ಗಂಭೀರ ಗಾಯಗೊಂಡಿದ್ದಾರೆ.
ಸಂಜೆ 4. 30 ರ ಸುಮಾರಿಗೆ ಬೋವಿಕ್ಕಾನ ಪೇಟೆಯಲ್ಲಿ ಎರಡು ತಂಡಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಸೇರಿದಂತೆ ಮೂವರಿಗೆ ಚೂರಿ ಇರಿತ ಉಂಟಾಗಿದ್ದು, ಗಂಭೀರ ಗಾಯಗೊಂಡ ಅಬ್ದುಲ್ ಖಾದರ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಥೋಮ್ಸನ್ ಜೋಸ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.