ಕಾರ್ಕಳ: 71ಲಕ್ಷ ರೂ. ಸಾಗಾಟ ಮಾಡುತ್ತಿದ್ದ ಫೋಡೋ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು 3 ಆರೋಪಿಗಳನ್ನು ಬಂಧಿಸಿರುವ ಘಟನೆ ಬೈಲೂರು ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಗಳು ಮಂಗಳೂರು ಕುದ್ರೋಳಿಯ ಆಸೀಫ್, ಇಮ್ರಾನ್,ದೀಪಕ್ ಎಂದು ಗುರುತಿಸಲಾಗಿದೆ. ಇವರು ಕೆಎ 19 ಎಂಎ 7629 ನಂಬ್ರದ ವಾಹನದಲ್ಲಿ ಮಂಗಳೂರಿನಿಂದ ಉಡುಪಿಯಾಗಿ ಕಾರ್ಕಳದ ನಿರ್ದಿಷ್ಟ ಜಾಗವೊಂದಕ್ಕೆ ಶುಕ್ರವಾರ ರಾತ್ರಿ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದಾರೆ. ಪೊಲೀಸ್ ವೃತ್ತನಿರೀಕ್ಷಕ ಜಾನ್ ಅಂತೋನಿ, ಗ್ರಾಮಾಂತರ ಠಾಣಾಧಿಕಾರಿ ಕಾರ್ಯಚರಣೆಯ ನೇತೃತ್ವ ವಹಿಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಆದಾಯ ತೆರಿಗೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.