News Kannada
Tuesday, February 07 2023

ಕರಾವಳಿ

ಅತ್ತೂರು ಮೈನರ್ ಬೆಸಿಲಿಕಾ ಧರ್ಮಗುರುವಿನ ಮನವಿಗೆ ಸ್ವಂದಿಸಿದ ಪ್ರಧಾನಿ ನರೇಂದ್ರ ಮೋದಿ!

Photo Credit :

ಅತ್ತೂರು ಮೈನರ್ ಬೆಸಿಲಿಕಾ ಧರ್ಮಗುರುವಿನ ಮನವಿಗೆ ಸ್ವಂದಿಸಿದ ಪ್ರಧಾನಿ ನರೇಂದ್ರ ಮೋದಿ!

ಕಾರ್ಕಳ: ಅತ್ತೂರು ಪುಣ್ಯಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಎದುರಾಗಿದ್ದ ದೂರ ಸಂಪರ್ಕ ಸಂವಹನ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಕಲ್ಪಿಸಿದ್ದಾರೆ. ಅದಕ್ಕಾಗಿ ಪುಣ್ಯಕ್ಷೇತ್ರದಲ್ಲಿ  ತಾತ್ಕಾಲಿಕ ಮೊಬೈಲ್ ಟವರ್ ಸಿದ್ಧಪಡಿಸಿದ್ದು, ಶಾಶ್ವತ ಮೊಬೈಲ್ ಟವರ್ ನಿರ್ಮಾಣಕ್ಕೆ ಎಲ್ಲಾ ರೀತಿಯ ರೂಪುರೇಷೆ ಸಿದ್ಧಪಡಿಸಲಾಗಿದೆ.

ಮೇಲ್ದಾರ್ಜೆಗೇರಿದ ಪುಣ್ಯಕ್ಷೇತ್ರ
ಕಾರ್ಕಳದ ಅತ್ತೂರು ಸಂತಲಾರೆನ್ಸ್ ಪವಾಡ ಪುಣ್ಯಕ್ಷೇತ್ರಕ್ಕೆ ವಿಶ್ವ ಕ್ರೈಸ್ತಧರ್ಮದ ರೋಮನ್ ಕೆಥೋಲಿಕ್ ಮಹಾಗುರು ಪೋಪ್ ಫ್ರಾನ್ಸಿಸ್ ಅವರು ಮೈನರ್ ಬೆಸಿಲಿಕಾ(ಕಿರು ದೇವಾಲಯ) ಎಂದು ಅಂತಾರಾಷ್ಟ್ರೀಯ ಮನ್ನಣೆ ನೀಡಿ ಮೇಲ್ದಾರ್ಜೆಗೇರಿಸಿದ್ದಾರೆ.
ಐತಿಹಾಸಿಕ  ಹಿನ್ನಲೆಗಳು…
ಲಭ್ಯ ಲಿಖಿತ ದಾಖಲೆಗಳ ಪ್ರಕಾರ 1759ರಿಂದ ಈ ಪುಣ್ಯಕ್ಷೇತ್ರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪವಾಡಗಳು ನಡೆಯುತ್ತಾ ಬಂದಿರುವುದು ಗಮನಾರ್ಹವಾಗಿದೆ.  ಆದರೆ ಪುಣ್ಯಕ್ಷೇತ್ರದ ಸ್ಥಾಪನೆಗೆ ಕಾರಣವಾಗಿದ್ದು ಈಗಲು ಭಕ್ತ ಜನರಿಂದ ಪವಾಡ ಮೂರ್ತಿ ಎಂದು ಕರೆಯಲಾಗುವ ಒಂದು ಅಡಿ ಎತ್ತರದ ಕಾಷ್ಠ ಶಿಲ್ಪದ ಸಂತಲಾರೆನ್ಸ್ ರ  ಮೂರ್ತಿಯೂ ಸುಮಾರು 15ನೇ ಶತಮಾನದಾಗಿರಬಹುದೆಂದು ಪ್ರಸಿದ್ಧ ಇತಿಹಾಸ ಸಂಶೋಧಕರಾಗಿದ್ದ ದಿ.ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದರು. ಇದರ ಆಧಾರದ ಮೇರೆಗೆ ಸುಮಾರು 5 ಶತಮಾನಗಳ ಹಿಂದೆ ಸಂತಲಾರೆನ್ಸ್ ರ ಭಕ್ತಿತಾಣವು ಈ ಪರಿಸರದಲ್ಲಿ ಇದ್ದಿರಬಹುದು ಎಂದು ಭಾವಿಸಲಾಗಿದೆ.

ಕ್ರಿ.ಶ 1784ರಿಂದ ಕ್ರಿ.ಶ.1800ರ ವರೆಗೆ ಈ ಪುಣ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳ ವಿವರ ಲಭ್ಯವಿಲ್ಲ. ಇದಕ್ಕೆ ಕಾರಣವಾಗಿರುವುದು ಕರಾವಳಿ ಕ್ರೈಸ್ತರನ್ನು ರಾಜಕೀಯ ಕಾರಣಗಳಿಗಾಗಿ 1784ರಲ್ಲಿ ಟಿಪ್ಪುಸುಲ್ತಾನ ಶ್ರೀ ರಂಗಪಟ್ಟಣದ ಕಾರಗೃಹದಲ್ಲಿ ಇರಿಸಿದವರಲ್ಲಿ ಕಾರ್ಕಳದ ಕೆಥೋಲಿಕ್ ಕೈಸ್ತರು ಇದ್ದರು.
ಕ್ರಿ.ಶ.1799ರಲ್ಲಿ ಟಿಪ್ಪುವಿನ ಮರಣ ಬಳಿಕ ಬಂಧಮುಕ್ತಗೊಂಡ ಕೈಸ್ತರು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹಿಂತಿರುಗಿದ್ದರು. 1801ರಲ್ಲಿ ಮುಳ್ಳಿಹುಲ್ಲಿನ ಛಾವಣೆಯ ದೇವಾಲಯವನ್ನು ನಕ್ರೆಗೆ ಹೋಗುವ ದಾರಿಮಧ್ಯೆಯಲ್ಲಿ ಮರುಸ್ಥಾಪಿಸಿದರು. ಆ ದೇವಾಲಯ ಜೀಣೋಧ್ಧಾರಕ್ಕೆ ಬಂದಾಗ 1839ರಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಅರಸಿ ಈಗಿರುವ ದೇವಾಲಯದ ಹಿಂಬದಿಯಲ್ಲಿ ಪ್ರಸ್ತುತ ಹೂದೋಟ ಇರುವಂತಹ ಸ್ಥಳದಲ್ಲಿ ಪೂರ್ವಪಶ್ಚಿಮಾಭಿಮುಖ ದೇವಾಲಯ ಕಟ್ಟಲಾಗಿತ್ತು.

ಅದರ ಮರುಸ್ಥಾಪನೆಯ ಶತಮನೋತ್ಸವದ ನೆನಪಿಗಾಗಿ ಕ್ರಿ.ಶ. 1901ರಲ್ಲಿ ವಂ. ಫ್ರೆಂಕ್ ಪಿರೇರಾರವರು ಉತ್ತರಾಭಿಮುಖವಾಗಿ ವಿಸ್ತಾರವಾಗಿ ದೇವಾಲಯ ಕಟ್ಟಿದ್ದರು. ಭಕ್ತಾದಿಗಳ ಆಗಮನ ಅಧಿಕವಾಗುತ್ತಾ ಅವರಿಗೆ ಪೂಜಾ ವಿಧಿ ವಿಧಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಹೊಸ ದೇವಾಲು ಅವಶ್ಯಕತೆಗೆ ಸನುಗುಣವಾಗಿ ಕ್ರಿ.ಶ 2001ರಲ್ಲಿ ದ್ವಶತಮಾನೋತ್ಸವ ಪೂರ್ಣ ಗೊಳಿಸಿದ ಸವಿನೆನಪಿಗಾಗಿ ವಂ. ಜೊಸ್ವಿ ಫೆರ್ನಾಂಡಿಸ್ ಅವರು ಈಗಿರುವ ನೂತನ ದೇವಾಲಯ ನಿರ್ಮಿಸಿದರು.

ಪವಿತ್ರ ಸ್ಮಾರಕ
ಕ್ರಿ.ಶ 3ನೇ ಶತಮಾನದಲ್ಲಿ ಬಾಳಿಬದುಕಿದ ಕೈಸ್ತಧರ್ಮಕ್ಕಾಗಿ ಹುತಾತ್ಮರಾದ ಸಂತಲಾರೆನ್ಸ್ ರವರು ಅತ್ತೂರು ಪುಣ್ಯಕ್ಷೇತ್ರದ ಪಾಲಕರು. ಅವರು ಜೀವಿತಾವಧಿಯಲ್ಲಿ ಧರಿಸಿದ ಉಡುಪಿನ ತುಂಡೊಂದನ್ನು ಆಕರ್ಷಕ ಸಂಪುಟದಲ್ಲಿ ಇರಿಸಿ ಅದನ್ನು ಪ್ರಧಾನ ದೇವಾಲಯದ ಬಲಿಪೀಠದ ಪಕ್ಕದಲ್ಲಿ ಇರಿಸಲಾಗಿದೆ. ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಭಕ್ತಾದಿಗಳು ಅದರ ದರ್ಶನ ಪಡೆಯುತ್ತಾರೆ.

See also  ಯಕ್ಷಗಾನ ಪಠ್ಯ ಮುದ್ರಣ ಮತ್ತು ಜಾರಿಗೆ ಒತ್ತಾಯ

ಸಾಮರಸ್ಯದ ತಾಣ
ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕೋತ್ಸವವು ಜನವರಿ ಕೊನೆಯ ವಾರದಲ್ಲಿ ಜರುಗುತ್ತಾ ಬಂದಿದೆ. ಈ ಸಂದರ್ಭ ಹಾಗೂ ವರ್ಷಪೂರ್ತಿ ಸರ್ವಧರ್ಮೀಯರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಂದಾಯ ಮಾಡುತ್ತಿದ್ದಾರೆ. ಪುಣ್ಯಕ್ಷೇತ್ರದಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಮೊಂಬತ್ತಿ ಸೇವೆಯ ಕಾರ್ಯಕರ್ತರು ಹಿಂದು ಬಾಂಧವರಾಗಿದ್ದಾರೆ. ಈ ಪುಣ್ಯಕ್ಷಷೇತ್ರದಲ್ಲಿ ಜಲ,ಪುಷ್ಪ ಪ್ರಸಾದವನ್ನು ಭಕ್ತಾದಿಗಳಿಗೆ ನೀಡುತ್ತಿರುವುದು ವಿಶೇಷವಾಗಿದೆ. ಈ ಪುಣ್ಯಕ್ಷೇತವ್ರು ಮೈನರ್ ಬೆಸಿಲಿಕಾ ಎಂದು ಘೋಷಣೆಯಾದ ಬಳಿಕ ದೇಶ ವಿದೇಶಗಳಿಂದ ಅಸಂಖ್ಯಾತ ಭಕ್ತಸಮೂಹ, ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಮೊಬೈಲ್ ಸಂಪರ್ಕದ ಕೊರತೆ
ನಿಟ್ಟೆ ಗ್ರಾಮ ಪಂಚಾಯತ್ ಸರಹದ್ದಿನಲ್ಲಿ ಇರುವಂತಹ ಅತ್ತೂರು ಪುಣ್ಯ ಕ್ಷೇತ್ರ ಕಾರ್ಕಳದಿಂದ ಐದು ಕಿ.ಮೀ ದೂರವಿದೆ. ಜನವಸತಿ ಪ್ರದೇಶವು ಆಗಿದೆ. ವಿಶ್ವ ಕ್ರೈಸ್ತಧರ್ಮದ ರೋಮನ್ ಕೆಥೋಲಿಕ್ ಮಹಾಗುರು ಪೋಪ್ ಫ್ರಾನ್ಸಿಸ್ ಅವರು ಮೈನರ್ ಬೆಸಿಲಿಕಾ(ಕಿರು ದೇವಾಲಯ) ಎಂದು ಅಂತಾರಾಷ್ಟ್ರೀಯ ಮನ್ನಣೆ ನೀಡಿ ಮೇಲ್ದಾರರ್ಜೆಗೇರಿಸಿದ್ದಾರೆ. ಇಷ್ಟೆಲ್ಲ ಹೆಸರಾಂತ ಪಡೆದಿರುವ ಈ ಪುಣ್ಯಕ್ಷೇತ್ರದ ಪರಿಸರದಲ್ಲಿ ಮೊಬೈಲ್ ಸಂಪರ್ಕ ದೊರಕದೇ ಇರುವುದು ಹಲವು ಸಮಸ್ಸೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಪುಣ್ಯಕ್ಷೇತ್ರದ ಧರ್ಮಗುರು ಜಾರ್ಜ್ ಡಿಸೋಜಾ ಅವರು ಹಲವು ಭಾರೀ ಜನಪ್ರತಿನಿಧಿಗಳಿಗೆ ಹಾಗೂ ಇಲಾಖಾಧಿಕಾರಿಗಳಿಗೆ ಲಿಖಿತ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ರೀತಿಯಲ್ಲಿ ಸ್ವಂದನೆಗಳು ಸಿಕ್ಕಿರಲಿಲ್ಲ.

ಕೇಂದ್ರ ಸಚಿವರಿಂದ ಸ್ವಂದನೆ ಸಿಗಲಿಲ್ಲ!
ಕೇಂದ್ರ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರಿಗೆ  2016 ಆಗಸ್ಟ್ 21ರಂದು ಅತ್ತೂರು ಧರ್ಮಗುರು ಜಾರ್ಜ್ ಡಿಸೋಜಾ ಪತ್ರಬರೆಸಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಇಷ್ಟಾದರೂ ಅವರಿಂದ ಯಾವುದೇ ರೀತಿಯಲ್ಲಿ ಸ್ವಂದನೆ ಸಿಕ್ಕಿರಲಿಲ್ಲ.

ಕೊನೆಯ ಪ್ರಯತ್ನಕ್ಕೆ ಪ್ರಧಾನಿಯಿಂದ ಸ್ವಂದನೆ
2016 ಸೆಪ್ಪೆಂಬರ್ 2ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಸಮಗ್ರ ರೀತಿಯಲ್ಲಿ ಪತ್ರ ಬರೆದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಟವರ್ ಅತ್ಯಗತ್ಯವಾಗಿದ್ದು ಅದನ್ನು ಮಂಜೂರುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ವಂದಿಸಿದ ಪ್ರಧಾನಿಯವರು ಕೂಡಲೇ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಸಚಿವಾಲಯ ಅಧಿಕಾರಿಗಳಿಗೆ ಆದೇಶ ನೀಡಿದರಲ್ಲದೇ ಕ್ರಮ ಕೈಗೊಂಡಿರುವ ಪತ್ರವನ್ನು ಕೇವಲ ಏಳು ದಿನಗಳೊಳಗಾಗಿ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರು ಜಾರ್ಜ್  ಡಿಸೋಜಾ ಅವರಿಗೆ ಪತ್ರ ತಲುಪಿರುವುದು ಗಮನವಾಗಿದೆ. ಈ ಎಲ್ಲಾ ಬೆಳವಣಿಗೆಯ ಬಳಿಕ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುವಿಗೆ ಬಿಎಸ್ಎನ್ಎಲ್ ಮಂಗಳೂರು ವಿಭಾಗದ ಮುಖ್ಯಸ್ಥ ರವಿ ಪತ್ರ ಬರೆದು ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಿಸಲಾಗಿದೆ. ಶಾಶ್ವತ ಮೊಬೈಲ್ ಟವರ್ ನಿರ್ಮಾಣಕ್ಕೆ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ಹಲವು ತಿಂಗಳುಗಳಿಂದ ನಾದುರಸ್ಥಿಯಲ್ಲಿದ್ದ 2 ಸ್ಥಿರ ದೂರವಾಣಿಗಳ ದುರಸ್ಥಿ ಕಾರ್ಯ ನಡೆದಿದೆ. ಓಎಫ್ಸಿ ಕೇಬಲ್ ಸಂಪರ್ಕದ ಸ್ಥಿರ ದೂರವಾಣಿಯನ್ನು ಪುಣ್ಯಕ್ಷೇತ್ರಕ್ಕೆ ಅಳವಡಿಸಲಾಗಿದೆ.
ದೇಶ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನಿದಿಗಳು ತಮ್ಮ ವ್ಯಾಪ್ತಿಯೊಳಪಟ್ಟ  ಸಮಸ್ಯೆಗಳನ್ನು ನಾಗರಿಕರ ಬೇಡಿಕೆಗನುಗುಣವಾಗಿ ಇತ್ಯರ್ಥ ಪಡಿಸಿದಾಗ ದೇಶ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ. -ಜಾರ್ಜ್ ಡಿಸೋಜಾ ಧರ್ಮಗುರು ಅತ್ತೂರು ಪುಣ್ಯಕ್ಷೇತ್ರ

See also  ಮಿತ್ತಕೋಡಿಯಲ್ಲಿ ಭೂ ಕುಸಿತ: ಸಂಚಾರ ಬಂದ್

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು