ಸುಳ್ಯ: ಕಾಮಗಾರಿ ಪೂರ್ತಿಯಾಗಿ ಕೇವಲ ಒಂದೇ ವರ್ಷದಲ್ಲಿ ಕಿಂಡಿ ಅಣೆಕಟ್ಟೊಂದು ನೀರಿನಲ್ಲಿ ಮೊಚ್ಚಿ ಹೋಗಿರುವ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರಿನಲ್ಲಿ ನಡೆದಿದೆ.
ಉಬರಡ್ಕ ಗ್ರಾಮದ ದೊಡ್ಡಡ್ಕ ಎಂಬಲ್ಲಿ ಕಂದಡ್ಕ ಹೊಳೆಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ನೀರು ಶೇಖರಿಸಲು ಪ್ರಾರಂಭಿಸಿದ ಒಂದೇ ದಿನದಲ್ಲಿ ಢಮಾರಾಗಿದ್ದು 47 ಲಕ್ಷ ರೂ ನೀರಿನಲ್ಲಿಟ್ಟ ಹೋಮದಂತೆ ಕೊಚ್ಚಿ ಹೋಗಿದೆ. ಸಣ್ಣ ನೀರಾವರಿ ಇಲಾಖೆಯ ವತಿಯಿಂದ 2012-13 ನೇ ಆರ್ಥಿಕ ವರ್ಷದಲ್ಲಿ 47 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ನಡೆಸಲಾಗಿತ್ತು. ಅಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 25 ಲಕ್ಷ ರೂ ಮಂಜೂರು ಮಾಡಲಾಗಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಪೂರ್ತಿಯಾಗಿದ್ದು ಕಳೆದ ಫೆಬ್ರವರಿಯಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆಯನ್ನು ಜೋಡಿಸಿ ಸುಮಾರು ಒಂದೂವರೆ ತಿಂಗಳ ಕಾಲ ನೀರನ್ನು ಸಂಗ್ರಹಿಸಲಾಗಿತ್ತು. ಈ ಬಾರಿ ಮಳೆ ಕಡಿಮೆಯಾಗಿದ್ದ ಕಾರಣ ಹೊಳೆಯಲ್ಲಿ ನೀರಿನ ಹರಿವು ಕುಂಠಿತವಾಗಿದೆ. ಇದರಿಂದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ ಬುಧವಾರ ಸಂಜೆಯಷ್ಟೇ ಹಲಗೆಯನ್ನು ಜೋಡಿಸಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆ ಮಾಡಲು ಆರಂಭಿಸಲಾಗಿತ್ತು. ನೀರಿನ ಒತ್ತಡ ತಾಳಲಾರದೆ ಗುರುವಾರ ಸಂಜೆಯ ವೇಳೆಗೆ ಅಣೆಕಟ್ಟು ಕುಸಿದು ಹೋಗಿದೆ. ಅಣೆಕಟ್ಟಿನ 10 ಕಿಂಡಿಗಳ ಪೈಕಿ ಆರು ಕಿಂಡಿಗಳು ಕುಸಿದು ಬಿದ್ದಿದೆ. ಕಿಂಡಿಯ ಮೇಲೆ ನಿಮರ್ಿಸಲಾದ ಕಾಂಕ್ರೀಟ್ ಪೂಟ್ಪಾತ್ ಮುರಿದು ನೇತಾಡುತಿದೆ.
ಜಲಸಮೃದ್ಧವಾಗಿಸಲು ಯೋಜನೆ:
ಕುಡಿಯುವ ನೀರು, ಕೃಷಿ ಮತ್ತಿತರ ಯೋಜನೆಗೆ ನೀರನ್ನು ಬಳಸಲು ಮತ್ತು ಸುತ್ತಲ ಪ್ರದೇಶವನ್ನು ಜಲಸಮೃದ್ಧವಾಗಿಸಿ ಅಂತರ್ಜಲ ಮಟ್ವನ್ನು ಏರಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮತ್ತು ಇತರ ಜನಪ್ರತಿನಿಧಿಗಳ ಬೇಡಿಕೆಯ ಮೇರೆಗೆ ಶಾಸಕ ಎಸ್.ಅಂಗಾರ ಅವರ ಸೂಚನೆಯಂತೆ 2012-13 ಆಥರ್ಿಕ ವರ್ಷದಲ್ಲಿ 47 ಲಕ್ಷ ರೂವನ್ನು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಈ ಕಾಮಗಾರಿಯ ಬಿಲ್ ಪೂತರ್ಿಯಾಗಿ ಪಾವತಿ ಮಾಡಲಾಗಿದೆ. ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದಾಗಿ ಅಣೆಕಟ್ಟು ಕುಸಿದು ಹೋಗಿದೆ ಎಂಬ ಅರೋಪ ಕೇಳಿ ಬಂದಿದ್ದು ಜನರ ನಿರೀಕ್ಷೆಗೆ ತಣ್ಣೀರೆರೆಚಿದಂತಾಗಿದೆ. ಅಲ್ಲದೆ ಅಣೆಕಟ್ಟಿನ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ 25 ಲಕ್ಷ ರೂಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದ್ದು ಒಂದು ಪಾಶ್ರ್ವದಲ್ಲಿ ತಡೆಗೋಡೆ ಕಾಮಗಾರಿ ನಡೆಸಲಾಗಿದೆ.
ತಳಪಾಯ ಕಳಪೆ ಕುಸಿತಕ್ಕೆ ಕಾರಣ -ಇಂಜಿನಿಯರ್ಗಳಿಂದ ಪರಿಶೀಲನೆ
ಕಿಂಡಿ ಅಣೆಕಟ್ಟು ಕುಸಿದ ವಿಷಯ ತಿಳಿದು ಸಣ್ಣ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಷಣ್ಮುಗಂ, ಕಿರಿಯ ಇಂಜಿನಿಯರ್ ಪರಮೇಶ್ವರ್ ಅವರನ್ನೊಳಗೊಂಡ ತಂಡ ಕಿಂಡಿ ಅಣೆಕಟ್ಟಿನ ಸ್ಥಳವನ್ನು ಶುಕ್ರವಾರ ಪರಿಶೀಲನೆ ನಡೆಸಿದರು. ಕಿಂಡಿ ಅಣೆಕಟ್ಟಿನ ತಳಪಾಯದಲ್ಲಿ ನಿರ್ಮಾಣ ಕಾರ್ಯ ಗಟ್ಟಿಯಾಗದೇ ಇರುವ ಕಾರಣ ಅಣೆಕಟ್ಟು ಕುಸಿದಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತಿದೆ. ಮರಳು ಮಿಶ್ರಿತ ಮಣ್ಣಿನಲ್ಲಿ ಆಣೆಕಟ್ಟಿನ ಕಿಂಡಿಗಳು ಸಾಕಷ್ಟು ಆಳಕ್ಕೆ ಇಳಿಯದ ಮತ್ತು ಸಮರ್ಪಕವಾಗಿ ಕಾಮಗಾರಿ ನಡೆಸದ ಕಾರಣ ನೀರಿನ ಒತ್ತಡಕ್ಕೆ ಕಿಂಡಿಗಳು ಕೊಚ್ಚಿ ಹೋಗಿ ಜಲ ಸಮಾಧಿಯಾಗಿರುವ ಸಾಧ್ಯತೆ ಇದೆ ಎಂದು ಇಂಜಿನಿಯರ್ಗಳು ಹೇಳಿದ್ದಾರೆ.
ಸರ್ವೇ ನಡೆಸದೆ ಅಣೆಕಟ್ಟು ನಿರ್ಮಾಣ: ಸಾರ್ವಜನಿಕರ ಆರೋಪ
ಸರಿಯಾಗಿ ಸಮೀಕ್ಷೆ ನಡೆಸದೆ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಅವೈಜ್ಞಾನಿಕವಾಗಿ ಮತ್ತು ಕಳಪೆಯಾಗಿ ಕಿಂಡಿ ಅಣೆಕಟ್ಟಟನ್ನು ನಿರ್ಮಿಸಿದ ಕಾರಣ ಕಿಂಡಿ ಅಣೆಕಟ್ಟು ಕುಸಿಯಲು ಕಾರಣ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಈಗ ನಿರ್ಮಾಣವಾಗಿರುವ ಅಣೆಕಟ್ಟಿನ ಕೆಳಗೆ ಕೆಲವೇ ಮೀಟರ್ ಅಂತರದಲ್ಲಿ 1960ರ ದಶಕದಲ್ಲಿ ಕಂದಡ್ಕ ಹೊಳೆಗೆ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಈ ಕಿಂಡಿ ಅಣೆಕಟ್ಟಿನಿಂದ ಕಾಲುವೆಗಳ ಮೂಲಕ ಹರಿಸಿ ಕೃಷಿಕರು ಹೊಲ ಮತ್ತಿತರ ಕೃಷಿಗೆ ನೀರನ್ನು ಬಳಸುತ್ತಿದ್ದರು. 1980ರ ದಶಕದ ಅರ್ಧದವರೆಗೂ ಆ ಅಣೆಕಟ್ಟು ಬಳಕೆಯಲ್ಲಿತ್ತು. ಹಳೆಯ ಅಣೆಕಟ್ಟಿನ ಕುರುಹುಗಳು ಈಗಲೂ ಇದೆ. ಕಿಂಡಿ ಅಣೆಕಟ್ಟಲು ಕಟ್ಟಲು ಅದೇ ಸೂಕ್ತವಾದ ಸ್ಥಳವಾಗಿದ್ದು ಅಲ್ಲೇ ಅಣೆಕಟ್ಟು ನಿರ್ಮಾಣವಾಗಬೇಕಾಗಿತ್ತು. ಆದರೆ ಆ ಸ್ಥಳವನ್ನು ತೀರಾ ಕಡೆಗಣಿಸಿ ಅದಕ್ಕಿಂತ ಸ್ವಲ್ಪ ಮೇಲಿನ ಭಾಗದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ನೀರಿನ ಹರಿವು, ರಭಸ, ಮಣ್ಣಿನ ಗುಣಮಟ್ಟ, ಮಳೆಯ ಪ್ರಮಾಣ ಜನರ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸದೆ ಕಾಟಾಚಾರಕ್ಕೆ ಅಣೆಕಟ್ಟು ನಿರ್ಮಿಸಿದ ಕಾರಣ ಈ ರೀತಿ ಆಗಿದೆ ಎನ್ನುತ್ತಾರೆ ಈ ಭಾಗದ ಕೃಷಿಕರು. 15 ನಿಮಿಷ ಮಳೆ ಬಂದರೆ ಹೊಳೆಯಲ್ಲಿ ನೀರು ತುಂಬಿ ತೋಟಗಳಿಗೆ ನೀರು ನುಗ್ಗಿ ಹಲವು ಕೃಷಿಕರ ಕೃಷಿ ಹಾಳಾಗುತ್ತದೆ ಎನ್ನುತ್ತಾರೆ ಕೃಷಿಕರಾದ ಅಜೇಯಕೃಷ್ಣ ಕಂದಡ್ಕ. ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿಯೇ ಈ ವಿಷಯವನ್ನು ತಿಳಿಸಿ ಇಲಾಖೆಗೆ ಮತ್ತು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿತ್ತು. ಆದರೆ ಕಿಂಡಿ ಅಣೆಕಟ್ಟಿನಲ್ಲಿ ನೀವೇ ಕಸ ಹಾಕುವ ಕಾರಣ ನೀರು ತುಂಬಿ ತೋಟಕ್ಕೆ ನೀರು ನುಗ್ಗುತ್ತದೆ ಎಂಬ ಬೇಜವಬ್ದಾರಿಯುತ ಉತ್ತರ ಇಲಾಖೆಯಿಂದ ಬಂದಿತ್ತು ಎಂದು ಅಜೇಯಕೃಷ್ಣ ಹೇಳುತ್ತಾರೆ.
60 ವರ್ಷ ಬಾಳ್ವಿಕೆಯ ಅಣೆಕಟ್ಟು ಒಂದೇ ವರ್ಷದಲ್ಲಿ ಕುಸಿತ- ಸಾರ್ವಜಿಕರ ಆಕ್ರೋಶ
ಕಿಂಡಿ ಅಣೆಕಟ್ಟು ಕುಸಿದ ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾರಿ ಯೋಜನೆಯ ಇಂಜಿನಿಯರ್ ಗಳನ್ನು ಸಾರ್ವಜನಿಕರು ತೀವ್ರ ತರಾಟೆಗೆತ್ತಿಕೊಂಡ ಘಟನೆ ನಡೆಯಿತು. ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಇಂಜಿನಿಯರ್ಗಳು ಸಮರ್ಪಕವಾದ ಉತ್ತರ ನಿಡದೇ ಇದ್ದಾಗ ಸೇರಿದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಣೆಕಟ್ಟನ ಬಾಳ್ವಿಕೆ ಎಷ್ಟು ವರ್ಷ ಎಂಬ ಸಾರ್ವಜನಿಕರ ಪ್ರಶ್ನೆಗೆ 50 ರಿಂದ 60 ವರ್ಷ ಬಾಳ್ವಿಕೆ ಬರಬೇಕು ಎಂದು ಇಂಜನಿಯರ್ಗಳು ಉತ್ತರಿಸಿದರು. ಆದರೆ ಸರಿಯಾದ ವಿನ್ಯಾಸ ಮತ್ತು ಸರ್ವೇ ನಡೆಸದೆ ಕಾಟಾಚಾರಕ್ಕೆ ಕಾಮಗಾರಿ ನಡೆಸಿದ ಕಾರಣ 60 ವರ್ಷ ಬಾಳ್ವಿಕೆ ಬರಬೇಕಾದ ಅಣೆಕಟ್ಟು ಒಂದೇ ವರ್ಷದಲ್ಲಿ ಕುಸಿದು ಹೋಗಿದೆ. ಈ ಯೋಜನೆ ಅನುಷ್ಠಾನ ಮಾಡಿದ ಇಂಜನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮ್ಮೆ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸಾರ್ವಜನಿಕರು ಎತ್ತಿದ ಹಲವು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದ ಇಂಜನಿಯರ್ಗಳಿಗೆ ಸಾರ್ವಜನಿಕರು ಬಿಸಿ ಮುಟ್ಟಿಸಿದರು. ಅಣೆಕಟ್ಟು ಕುಸಿಯಲು ಕಾರಣರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಮತ್ತು ಬದಲಿ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಹಿರಿಯ ಇಂಜಿನಿಯರ್ಗಳು ಭರವಸೆ ನೀಡಿದರು. ಹಿಂದೆ ಅಣೆಕಟ್ಟಿದ್ದ ಸ್ಥಳವನ್ನು ಇಂಜನಿಯರ್ಗಳ ತಂಡ ಪರಿಶೀಲನೆ ನಡೆಸಿತು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಬರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಉಬರಡ್ಕ, ಪ್ರಮುಖರಾದ ಶ್ರೀನಿವಾಸ ಉಬರಡ್ಕ, ಅಜೇಯಕೃಷ್ಣ ಕಂದಡ್ಕ, ಕೃಷ್ಣಕುಮಾರ್ ಕಲ್ಚಾರ್, ಪ್ರಮೋದ್ ಪೈಲೂರ್, ಈಶ್ವರ, ಸಾಯಿರಂಜನ್, ಭಾಸ್ಕರ ರಾವ್, ಚಂದ್ರಶೇಖರ ನಾಯರ್, ಹರಿ ಪಾನತ್ತಿಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಳ ಭಾಗದಲ್ಲಿ ಶೀಘ್ರ ಡ್ಯಾಂ ಕಾಮಗಾರಿ ಆರಂಭಕ್ಕೆ ಒತ್ತಾಯ:
ಕುಸಿದು ಹೋಗಿರುವ ಕಿಂಡಿ ಅಣೆಕಟ್ಟಿನ ಬದಲಿಗೆ ಅಲ್ಲೇ ಕೆಳಗಿನ ಭಾಗದಲ್ಲಿ ಹಿಂದೆ ಅಣೆಕಟ್ಟಟಿದ್ದ ಸ್ಥಳದಲ್ಲಿ ಹೊಸತಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಉಬರಡ್ಕ ಒತ್ತಾಯಿಸಿದ್ದಾರೆ. ಅಲ್ಲದೆ ಕಳಪೆ ಗುಣಮಟ್ಟದ ಅಣೆಕಟ್ಟು ನಿರ್ಮಾಣಕ್ಕೆ ಕಾರಣರಾದ ಇಂಜಿನಿಯರ್ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮ್ಮೆ ದಾಖಲಿಸಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು. ಕಿಂಡಿ ಅಣೆಕಟ್ಟು ಕುಸಿದ ಬಗ್ಗೆ ಸಾರ್ವಜನಿಕರ ಪರವಾಗಿ ಕಾನೂನು ಹೋರಾಟವನ್ನು ನಡೆಸುವುದಾಗಿ ಅವರು ಹೇಳಿದರು.
ತಪ್ಪಿತಸ್ಥರಿಗೆ ಶಿಕ್ಷೆ- ಇಂಜಿನಿಯರ್:
ಕಿಂಡಿ ಅಣೆಕಟ್ಟು ಕುಸಿದಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ಮೇಲಧಿಕಾರಿಗಳಿಗೆ ಘಟನೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಇಲಾಖೆಯ ಕಾಮಗಾರಿ ಪರೀಕ್ಷಾ ತಂಡ ಕಾಮಗಾರಿಯ ಸಮಗ್ರ ಪರಿಶೀಲನೆ ನಡೆಸಲಿದೆ. ಕಾಮಗಾರಿಯ ಕ್ರಿಯಾ ಯೋಜನೆ, ವಿನ್ಯಾಸ, ಅನುಷ್ಠಾನ ಸೇರಿ ಸಂಪೂರ್ಣ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.