ಕಾಸರಗೋಡು: ಯುವಕನೋರ್ವ ಕ್ಲಬ್ ಕಟ್ಟಡದಲ್ಲಿ ನೇಣು ಬಿಗಿದು ಮೃತಪಟ್ಟ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಬಂದಡ್ಕ ಶಂಕರಪಾಡಿಯ ಎಚ್.ಮಣಿಕಂಠ (೨೯) ಎಂದು ಗುರುತಿಸಲಾಗಿದೆ.
ಕುತ್ತಿಕೋಲ್ ಗ್ರಾಮ ಪಂಚಾಯತ್ ನೌಕರರಾಗಿದ್ದ ಇವರಿಗೆ ವಿವಾಹ ನಿಶ್ಚಯವಾಗಿತ್ತು. ಡಿಸೆ೦ಬರ್ ೨೨ರಂದು ವಿವಾಹ ನಡೆಯಬೇಕಿತ್ತು.
ಶುಕ್ರವಾರ ರಾತ್ರಿ ತಡರಾತ್ರಿ ತನಕ ಮಣಿಕಂಠ ಕ್ಲಬ್ ನಲ್ಲೇ ಉಳಿದುಕೊಂಡಿದ್ದರು. ಜೊತೆಗಿದ್ದವರು ರಾತ್ರಿ ಮನೆಗೆ ತೆರಳಿದ್ದರು. ಆದರೆ ಬೆಳಿಗ್ಗೆ ತನಕ ಮನೆಗೆ ತಲುಪದೇ ಇದ್ದುದರಿಂದ ಮೊಬೈಲ್ ಗೆ ಕರೆ ಮಾಡಿದ್ದಾಗ ಸ್ವಿಚ್ಡ್ ಆಫ್ ಆಗಿತ್ತು. ಕೊನೆಗೆ ಕ್ಲಬ್ ಗೆ ಬಂದಾಗ ಶಟರ್ ಅರ್ಧದಷ್ಟು ಮುಚ್ಚಿರುವುದು ಕಂಡುಬಂದಿದೆ. ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.