ಕಾಸರಗೋಡು: ಪೀಠೋಪಕರಣ ತಯಾರಿ ಘಟಕಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ. ನಾಶ ನಷ್ಟ ಉಂಟಾದ ಘಟನೆ ವಿದ್ಯಾನಗರದಲ್ಲಿ ಆದಿತ್ಯವಾರ ಬೆಳಿಗ್ಗೆ ನಡೆದಿದೆ.
ಚೆಟ್ಟ೦ಗುಯಿಯಲ್ಲಿರುವ ಘಟಕಕ್ಕೆ ಬೆಂಕಿ ತಗಲಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಐದಕ್ಕೂ ಅಧಿಕ ಅಗ್ನಿಶಾಮಕ ಘಟಕಗಳ ಸಿಬಂದಿಗಳು ಬೆಂಕಿ ಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಉಪ್ಪಳದಿಂದ ಒಂದು, ಕಾಸರಗೋಡಿನಿಂದ ಮೂರು, ಕಾಞ೦ಗಾಡ್ ನಿಂದ ಒಂದು ಅಗ್ನಿಶಾಮಕ ದಳದ ಘಟಕ ಆಗಮಿಸಿದ್ದು ಗಂಟೆಗಳ ಅವಿರತ ಪ್ರಯತ್ನದಿಂದ ಬೆಂಕಿಯನ್ನು ನಂದಿಸಲಾಯಿತು. ಘಟಕದಲ್ಲಿದ್ದ ಹಲವು ತರದ ಪೀಠೋಪಕರಣಗಳು, ಮರಮಟ್ಟು ಮೊದಲಾದವು ಉರಿದಿವೆ. ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ.
ಎಂ . ಸಲೀಂ ಎಂಬವರ ಮಾಲಕತ್ವದಲ್ಲಿರುವ ಈ ಘಟಕ ಚೆಟ್ಟ೦ಗುಯಿ ಹಿದಾಯತ್ ನಗರದಲ್ಲಿ ಕಾರ್ಯಾಚರಿಸುತ್ತಿದ್ದು , ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ