ಕಾಸರಗೋಡು: ಕಾರು ಡಿಕ್ಕಿ ಹೊಡೆದು ಶಬರಿಮಲೆ ಯಾತ್ರಾರ್ಥಿ ಮೃತಪಟ್ಟ ಘಟನೆ ರಾಷ್ಟ್ರ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ತುಮಕೂರು ಚಿಕ್ಕನಾಯಕ ಹಳ್ಳಿಯ ಸತೀಶ್ ನಾರಾಯಣ (೫೫) ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಆರಿಕ್ಕಾಡಿ ಹನುಮಾನ್ ಕ್ಷೇತ್ರದ ಸಮೀಪ ವಾಹನ ನಿಲ್ಲಿಸಿ ಇಳಿದು ರಸ್ತೆ ದಾಟುತ್ತಿದ್ದಾಗ ಕಾಸರಗೋಡು ಪಡನ್ನದಿಂದ ಮಂಗಳೂರು ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟರು.
ತುಮಕೂರಿನಿಂದ 20 ಮಂದಿಯ ತಂಡ ಶಬರಿಮಲೆಗೆ ಮಿನಿ ಬಸ್ಸಿನಲ್ಲಿ ಹೊರಟಿದ್ದು, ಆರಿಕ್ಕಾಡಿ ಬಳಿ ಉಪಹಾರ ಸೇವಿಸಲು ಬಸ್ಸು ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಿಟ್ಟು ಕೊಡಲಾಯಿತು.