ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ ( ಸಿಪಿಸಿಆರ್ ಐ) ನ ಶತಮಾನೋತ್ಸವದ ದಂಗವಾಗಿ ಡಿಸೆ೦ಬರ್ 10ರಂದು ಬೃಹತ್ ಕಿಸಾನ್ ಮೇಳ ಆಯೋಜಿಸಲಾಗಿದೆ ಎಂದು ಸಿಪಿಸಿಆರ್ ಐ ನಿರ್ದೇಶಕ ಡಾ. ಪಿ . ಚೌಡಪ್ಪ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತೆಂಗು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಗಾರ ಹಾಗೂ ಕಿಸಾನ್ ಮೇಳ ಜರುಗಲಿದೆ. ಕಿಸಾನ್ ಮೇಳದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವರು. ಡಿ.10 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಉದ್ಘಾಟನೆ ನೆರವೇರಿಸುವರು ಎಂದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಕಟ್ಟಡ , ಶತಮಾನೋತ್ಸವ ಪಾರ್ಕ್ ಹಾಗೂ ಮಿಲ್ಲೇನಿಯಂ ಅತಿಥಿಗೃಹವನ್ನು ಸಚಿವರು ಉದ್ಘಾಟಿಸುವರು. ಸಿಪಿಸಿಆರ್ ಐ ನ ಸಾಧನೆ ಕುರಿತ ಪುಸ್ತಕವನ್ನು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸುವರು ಎಂದರು.
ಕಿಸಾನ್ ಮೇಳದಂಗವಾಗಿ ಡಿ.10 ರಿಂದ 13 ರ ತನಕ ರಾಷ್ಟ್ರ ಮಟ್ಟದ ಕೃಷಿ ವಸ್ತು ಪ್ರದರ್ಶನ , ಸಂವಾದ , ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು , ಪ್ರಗತಿಪರ ಕೃಷಿಕರು ವಿಜ್ಞಾನಿಗಳು , ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಿಜ್ಞಾನಿ ಡಾ . ಮುರಳೀಧರ್ , ಕೆ .ಪಿ ಚಂದ್ರನ್ , ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.