ಕಾರ್ಕಳ: ಮದುವೆಯಾಗುತ್ತೇನೆಂಬ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ, ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿಯಾಗಿರುವ ಗ್ರಾಮ ಪಂಚಾಯತ್ ಸದಸ್ಯನೊಬ್ಬನ ವಿರುದ್ಧ ಯುವತಿಯೊಬ್ಬಳು ಪೊಲೀಸ್ ಠಾಣಾ ಮೆಟ್ಟಲೇರಿದ ಘಟನೆ ಬೈಲೂರು ಗೋವಿಂದೂರು ಎಂಬಲ್ಲಿ ನಡೆದಿದೆ.
ನೀರೆ-ಬೈಲೂರು ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಪ್ರಕರಣದ ಆರೋಪಿಯಾಗಿದ್ದಾನೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಆತ ಗೋವಿಂದೂರು ಪರಿಸರದ 24 ಹರೆಯದ ಅನ್ಯ ಕೋಮಿನ ನರ್ಸ್ ವೊಬ್ಬಳನ್ನು ತನ್ನ ಚೆಲ್ಲಾಟಕ್ಕೆ ಬಳಸಿಕೊಂಡಿದ್ದಾನೆ. ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ದುಡಿಯಲು ಹೋಗುತ್ತಿದ್ದ ಹಾಗೂ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಶರತ್ ಶೆಟ್ಟಿ ತನ್ನ ರಿಕ್ಷಾದಲ್ಲಿಯೇ ಆಕೆಯನ್ನು ಕರೆದುಕೊಂಡು ಹೋಗಿ ಬರುತ್ತಿದ್ದನು.
ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಅದೇ ಸಂದರ್ಭದಲ್ಲಿ ಶರತ್ ಶೆಟ್ಟಿ ಮದುವೆ ಭರವಸೆಯನ್ನು ಆಕೆಗೆ ನೀಡಿದನು. ಅದೊಂದು ದಿನ ಆಕೆಯ ಮನೆಯಲ್ಲಿ ಇತರರು ಯಾರು ಇಲ್ಲದ ಸಂದರ್ಭದಲ್ಲಿ ನಯಮಾತುಗಳನ್ನಾಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಶರತ್ ಶೆಟ್ಟಿಯ ಗಮನಕ್ಕೂ ತರಲಾಗಿತ್ತೆಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ. ನವಂಬರ್ 27ರ ಬೆಳಿಗ್ಗೆ ಸುಮಾರು 11ರವೇಳೆಗೆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶರತ್ ಶೆಟ್ಟಿ ತನ್ನ ಆಟೋದಲ್ಲಿ ಪಳ್ಳಿ ಕ್ರಾಸ್ ಬೈಲೂರು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆ ವೇಳೆಗೆ ಯುವತಿಯ ತಾಯಿಯು ಜೊತೆಗಿದ್ದರು. ನ.28 ರಂದು 1;41 ವೇಳೆಗೆ ಮಣಿಪಾಲ ಕೆ.ಎಂ ಸಿ ಯಲ್ಲಿ ಯುವತಿ ಹೆಣ್ಣು ಮಗುವಿಗೆಜನ್ಮ ನೀಡಿದ್ದಾಳೆ. ಆ ವಿಚಾರವನ್ನು ಯುವತಿಯ ತಾಯಿ ಶರತ್ ಶೆಟ್ಟಿಯ ಗಮನಕ್ಕೆ ತಂದಿದರಲ್ಲದೇ ಆಸ್ಪತ್ರೆಗೆ ಬರುವಂತೆ ತಿಳಿಸಿದರು. ಆ ಸಂದರ್ಭದಲ್ಲಿ ನಾನು ಯಾಕೆ ಬರಬೇಕು ನನಗೆ ಯಾಕೆ ಹೇಳುತ್ತೀರಿ ಎಂದು ಹೇಳಿ ಶರತ್ ಶೆಟ್ಟಿಯವರು ಕರೆಯನ್ನು ಕಟ್ ಮಾಡಿರುತ್ತಾನೆ. ವಿಚಾರ ತಿಳಿದು ಕಂಗಾಲಾದ ಯುವತಿ ನವಂಬರ್ 30ರಂದು ಕರೆ ಮಾಡಿದ್ದಾಳೆ. ಮದುವೆಯ ಪ್ರಸ್ತಾಪವನ್ನು ಮತ್ತೇ ಮುಂದಿಟ್ಟಿದ್ದಾಳೆ. ಆಕೆಯ ಬೇಡಿಕೆಗಳನ್ನು ಸರಸಗಾಟವಾಗಿ ಶರತ್ ಶೆಟ್ಟಿ ನಿರಾಕರಿಸಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದು ಕೊಂಡಿದ್ದ ಯುವತಿ ನನ್ನ ಹೆಣ್ಣು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾಳೆ.
ಮದುವೆಯ ಭರವಸೆ….
ಡಿಸೆಂಬರ್ 1ರ ಸಂಜೆ 7.50 ರವೇಳೆಗೆ ಶರತ್ ಶೆಟ್ಟಿ,ಸುಧೀರ್ ಶೆಟ್ಟಿ,ಶಿವರಾಂ ಶೆಟ್ಟಿ ಯುವತಿಯ ಮನೆಗೆ ಅಗಮಿಸಿದ್ದಾರೆ. ಇತ್ತಂಡ ಮನೆಯವರ ನಡುವೆ ಮದುವೆ ಮಾತುಕತೆ ನಡೆದಿದೆ. ಆ ಸಂದರ್ಭದಲ್ಲಿ ಯುವತಿಯನ್ನು ವಿವಾಹವಾಗುವ ಭರವಸೆಯನ್ನು ಹೊರಟು ಹೋದವನು ಮೊಬೈಲ್ ಸಂಪರ್ಕಕ್ಕೆ ದೊರಕುತ್ತಿಲ್ಲ.
ವಿಚಲಿತ ಮನೆಮಂದಿ ಸಾಂತ್ವನ ಕೇಂದ್ರಕ್ಕೆ
ಯುವತಿಯ ಹೆತ್ತವರು ಹಾಗೂ ಬಂಧುಗಳು ಕಾರ್ಕಳದಲ್ಲಿ ಇರುವ ಸಾಂತ್ವನ ಕೇಂದ್ರಕ್ಕೆ ಮೊರೆ ಹೋಗಿದ್ದಾರೆ. ಸಾಂತ್ವನ ಕೇಂದ್ರದ ಕುಟುಂಬ ಸಲಹೆಗಾರರಾಗಿರುವ ಸುನೀತಾ ಅವರ ಮಾರ್ಗದರ್ಶನದಂತೆ ಡಿಸೆಂಬರ್ 6ರಂದು ಬದುಕಿನೊಂದಿಗೆ ಚೆಲ್ಲಾಟವಾಡಿದ ಆರೋಪಿ ಶರತ್ ಶೆಟ್ಟಿ ವಿರುದ್ಧ ಕಾರ್ಕಳ ನಗರ ಠಾಣೆಗೆ ಯುವತಿ ದೂರು ಸಲ್ಲಿಸಿದ್ದಾಳೆ. ಪ್ರಕರಣದ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ ವಿಚಾರಣೆ ನಡೆಸುತ್ತಿದ್ದಾರೆ.
ಬಿಜೆಪಿ ಬೆಂಬಲಿತರಹಿತನಾಗಿ ಜಯಭೇರಿ ಸಾಧಿಸಿದ
ಶರತ್ ಶೆಟ್ಟಿ ಬಿಜೆಪಿ ಸಕ್ರಿಯಾ ಕಾರ್ಯಕರ್ತನಾಗಿದ್ದರೂ ಕಳೆದ ಸಾಲಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ರಹಿತನಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ರಮೇಶ್ ಕಲ್ಲೊಟ್ಟೆಯ ವಿರುದ್ಧ ಜಯಭೇರಿ ಸಾಧಿಸಿದ್ದಾನೆ. ನಂತರ ರಾಜಕೀಯ ಬೆಳವಣಿಗೆಯಲ್ಲಿ ಮತ್ತೇ ಬಿಜೆಪಿಯಲ್ಲಿಯೇ ಸಕ್ರಿಯಾವಾಗಿ ಕಾಣಿಸಿಕೊಂಡಿದ್ದಾನೆ.