ಕಾಸರಗೋಡು: ಬೋವಿಕ್ಕಾನದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೋವಿಕ್ಕಾನ ಮೊದಲ ಮುದಲಪ್ಪಾರದ ಅಹಮ್ಮದ್ ನಾಸಿರ್ ( 33) ಮತ್ತು ಮುಳಿಯಾರು ಬಾಲನಡ್ಕದ ಸಾಲಿ (26) ಎಂದು ಗುರುತಿಸಲಾಗಿದೆ.
ಪೊವ್ವಲ್ ನ ಅಬ್ದುಲ್ ಖಾದರ್ ( 19) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಐದು ಮಂದಿ ಶಾಮೀಲಾಗಿದ್ದು , ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ.
ಡಿಸೆ೦ಬರ್ ಒಂದರಂದು ಸಂಜೆ ಬೋವಿಕ್ಕಾನ ಪೇಟೆಯಲ್ಲಿ ಕೃತ್ಯ ನಡೆದಿತ್ತು. ಕ್ಲಬ್ ಗಳ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಅಬ್ದುಲ್ ಖಾದರ್ ಕೊಲೆಗೈಯ್ಯಲ್ಪಟ್ಟು, ಜೊತೆಗಿದ್ದ ಆಸಿಯಾದ್ ಮತ್ತು ಸತ್ತಾದ್ ಅನಾಸ್ ಗಂಭೀರ ಗಾಯಗೊಂಡಿದ್ದರು.
ಕೃತ್ಯದ ಬಳಿಕ ತಲೆಮರೆರೆಸಿಕೊಂಡಿದ್ದ ಆರೋಪಿಗಳು ಊರಿಗೆ ಮರಳಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಆರೋಪಿಗಳನ್ನು ಬಂಧಿಸಲಾಗಿದೆ.