ಕಾಸರಗೋಡು: ತುಳು ಸಂಸ್ಕೃತಿ ಅನಾವರಣಗೊಳಿಸುವ ಜೊತೆಗೆ ತುಳುವರನ್ನು ಒಗ್ಗೂಡಿಸುವ ಹಾಗೂ ತುಳುವನ್ನು ಎಂಟನೇ ಪರಿಚ್ಚೇಧಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವಾಗಿ ವಿಶ್ವ ತುಳುವರೆ ಆಯೋನಕ್ಕೆ ಬದಿಯಡ್ಕದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಬದಿಯಡ್ಕ ಬೋಳುಕಟ್ಟೆ ಮೈದಾನದ ಐದು ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮವನ್ನು ಒಡಿಯೂರು ಕ್ಷೇತ್ರದ ಶ್ರೀ ಗುರುದೇವದತ್ತ ಸ್ವಾಮೀಜಿ ಉದ್ಘಾಟಿಸಿದರು. ಸಮಾರಂಭದಲ್ಲಿ ಬಾಳೆಕೋಡಿ ಶ್ರೀ ಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ, ತುಳುವೆರೆ ಆಯನೊ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ , ಡಾ. ರಾಜೇಶ್ ಆಳ್ವ , ಬಿ . ಸುಬ್ಬಯ್ಯ ರೈ, ಎ. ಸಿ ಭಂಡಾರಿ , ಮಂಜುನಾಥ ಆಳ್ವ , ಕೆ . ಎನ್ ಕೃಷ್ಣ ಭಟ್ , ಜಯರಾಮ ಮಂಜತ್ತಾಯ, ತಾರಾನಾಥ ಕೊಟ್ಟಾರಿ, ಡಾ.ಶ್ರೀನಿಧಿ ಸರಳಾಯ, ಪ್ರೊ. ಶ್ರೀನಾಥ್, ಕೋಳಾರು ಸತೀಶ್ಚಂದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ,ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಬಾಳೆಕೋಡಿ ಶ್ರೀ ಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ಧ್ವಜಾರೋಹಣ ನೆರವೇರಿಸಿದರು. ತುಳುವೆರೆ ಆಯನೊ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮುಂದಾಳುಗಳಾದ ಎಂ.ಸಿ. ಭಂಡಾರಿ, ಐ. ಸುಬ್ಬಯ್ಯ ರೈ, ನಾಗಬೆಮ್ಮೆರೆ ಪದವು ಕೋಟೆದ ಬಬ್ಬುದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪ್ರದರ್ಶನಗಳ ಉದ್ಘಾಟನೆಯೂ ಇಂದು ಬೆಳಿಗ್ಗೆ ನಡೆಯಿತು.
ಬಳಿಕ ವೇದಿಕೆ ಒಂದಾದ ತುಳುವೇಶ್ವರ ಚಾವಡಿ ತುಳುವಕ್ಕೆ ಬಲ್ಲಾಳ್ತಿ ದೊಂಪದಲ್ಲಿ ಕೃಷಿಕರ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಉದ್ಘಾಟನೆ ಜರಗಿತು. ನಾಳೆ ( 10) ಬೆಳಿಗ್ಗೆ ‘ದೈವಾರಾಧನೆ ಕೋಡೆ-ಇನಿ-ಎಲ್ಲೆ’ ವಿಚಾರಗೋಷ್ಠಿ ನಡೆಯಲಿದ್ದು, ನೀಲೇಶ್ವರದಿಂದ ಬಾರ್ಕೂರುವರೆಗಿನ 12 ರಾಜಮನೆತನದ ಪ್ರತಿನಿಧಿಗಳು ಸಂಯುಕ್ತವಾಗಿ ಉದ್ಘಾಟಿಸಿದರು. ಅಪರಾಹ್ನ ೩ ಗಂಟೆಗೆ ‘ದೇಬೆರೆ ಅಂಗಣದಲ್ಲಿ ದೈವಗಳು’ ಎಂಬ ಪ್ರಾತ್ಯಕ್ಷಿಕೆಯನ್ನು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ನೆರವೇರಿಸಿ ಕೊಡಲಿದ್ದಾರೆ.
ಐದು ದಿನಗಳ ಕಾಲ ವಿವಿಧ ಗೋಷ್ಠಿಗಳು, ಜಾನಪದ ಸಾಂಸ್ಕೃತಿಕ ಪ್ರದರ್ಶನ, ಗುಡಿ ಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನ, ಜಾನಪದ ಕ್ರೀಡೆ ಗಳು ಮತ್ತು ಮೆರವಣಿಗೆ ನಡೆಯಲಿದೆ.200ಕ್ಕೂ ಅಧಿಕ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ .