ಬೆಳ್ತಂಗಡಿ: ತಾಲೂಕಿನ ಕಾಶಿಪಟ್ಣದಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸ್ವತ್ತು ಸಹಿತ ವಶಪಡಿಸಿಕೊಂಡಿರುವ ವೇಣೂರು ಅರಣ್ಯ ಇಲಾಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಶಿಪಟ್ಣ-ಬಡಕೋಡಿ ರಸ್ತೆಯ ನೆಲ್ಲಿಗುಡ್ಡೆ ಮೀಸಲು ಅರಣ್ಯದಿಂದ ಆರೋಪಿಗಳು ಕಿಲಾಲು ಬೋಗಿಯ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದರು.