ಕಾರ್ಕಳ: ದೇವಸ್ಥಾನ ಹಾಗೂ ಮನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿಯೋರ್ವನನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಉಪ್ಪಿನಂಗಡಿಯವನಾಗಿದ್ದು ಪ್ರಸಕ್ತ ಮಿಯ್ಯಾರು ಚರ್ಚ್ ಎದುರಿನ ರಸ್ತೆಯ ಮನೆಯೊಂದರಲ್ಲಿ ವಾಸವಾಗಿರುವ ಉಮಾನಾಥ ಪ್ರಭು ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ವಿವಿಧ ಹಂತಗಳಲ್ಲಿ 8 ಮನೆಗಳು ಹಾಗೂ 1 ದೇವಸ್ಥಾನದಲ್ಲಿ ಕಳವು ನಡೆಸಿದ ಆತ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ,ಬೆಳ್ಳಿಭರಣ ಹಾಗೂ ನಗದು ಎಗರಿಸಿದ್ದನು.
ಕಾರ್ಕಳ ಎಎಸ್ಪಿ ಡಾ. ಸುಮಾನ ಡಿ.ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಜೋಯ್ ಅಂತೋನಿ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ರಫೀಕ್ , ನಗರ ಠಾಣಾಧಿಕಾರಿ ರವಿ ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಆರೀಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 134 ಗ್ರಾಂ ಚಿನ್ನಾಭರಣ, ಕಾಲು ಕೆ.ಜಿ ಬೆಳ್ಳಿ ಅಭರಣ ಮತ್ತು 14,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ನಗರ, ಹೆಬ್ರಿ ಠಾಣೆಗಳಲ್ಲಿ ಈತನ ಮೇಲೆ ಹಲವು ಕೇಸುಗಳಿವೆ. ಪ್ರಕರಣ ಸುಳಿವು ಲಭಿಸಿರಲು ಆರೋಪಿಯ ಬೆರಳಚ್ಚು ಕಳವು ನಡೆದ ಸ್ಥಳಗಳಲ್ಲಿ ಪತ್ತೆಯಾಗಿರುವುದು ಕಾರಣವಾಗಿದೆ ಎಂದು ತಿಳಿದುಬಂದಿದೆ.