ಕಾರ್ಕಳ: ಕಾರ್ಕಳ ಪುರಸಭಾ ಸಾಮಾನ್ಯಸಭೆಯ ಅಂತಿಮ ಹಂತದಲ್ಲಿ ಪ್ರಗತಿ ವಿಚಾರದ ವೇಳೆಗೆ ಕೌನ್ಸಿಲರ್ಗಳ ನಡುವೆ ಹೊ-ಕೈ ಘಟನಾವಳಿ ನಡೆದಿದೆ.
ಆಡಳಿತ ಪಕ್ಷದ ಬಿಜೆಪಿಯ ಪ್ರಕಾಶ್ ರಾವ್ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷದ ಕಾಂಗ್ರೆಸ್ನ ಸುಭದರಾವ್ ನಡೆದ ವಾಗ್ವಾದವು ವಿಕೋಪಕ್ಕೆ ತಲುಪಿ ಹೊ-ಕೈ ನಡೆಯಿತು. ಇದಕ್ಕೆ ಅಲ್ಲಿ ಉಪಸ್ಥಿತರಿದ್ದ ಎರಡು ಪಕ್ಷಗಳ ಕೌನ್ಸಿಲರು ಮುಖಸಾಕ್ಷಿಗಳಾದರು. ಸಾಮಾನ್ಯ ಸಭೆಯಲ್ಲಿ ಇವರಿಬ್ಬರ ನಡುವೆ ಒಂದಲ್ಲ ವಿಚಾರದಲ್ಲಿ ವಾಗ್ವಾದ ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಒಂದೇ ಜಾತಿಗೆ ಸೇರಿದವರಾಗಿದ್ದರೂ ವೈಯಕ್ತಿಕ ಹಾಗೂ ಪಕ್ಷ ಸಿದ್ಧಾಂತಗಳಲ್ಲಿ ವಿಭಿನ್ನ ಅಭಿಪ್ರಾಯ ಹೊಂದಿರುವುದು ಇದಕ್ಕೆಲ್ಲ ಕಾರಣವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ ವಲಯದಲ್ಲಿ ಹಲ್ಲೆ ಎಂಬ ಕೂಗು ಕೇಳಿಬರುತ್ತಿದ್ದು, ಬಿಜೆಪಿ ತಾಲೂಕು ಅಧ್ಯಕ್ಷ ಮಣಿರಾಜ್ ಶೆಟ್ಟಿ ಹಾಗೂ ಇತರರು ಇದರ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು ಒಟ್ಟಿನಲ್ಲಿ ಪ್ರಕರಣವು ರಾಜಕೀಯ ಮಹತ್ವ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.