ಕಾಸರಗೊಡು: ಚಿಲ್ಲರೆ ಸಮಸ್ಯೆಯಿಂದ ವರ್ತಕರಿಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕು, ವರ್ತಕರ ಸಾಲ ಮರುಪಾವತಿ ಕಾಲಾವಧಿಯನ್ನು ವಿಸ್ತರಿಸಬೇಕು, ಹಳೆ ಚಿನ್ನಾಭರಣಖರೀದಿ ಮೇಲಿನ ಹೆಚ್ಚುವರಿ ತೆರಿಗೆಯನ್ನು ರದ್ದುಮಾಡಬೇಕು ಎಂದು ಒತ್ತಾಯಿಸಿ ವರ್ತಕರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಕಾಸರಗೊಡು ವಿದ್ಯಾನಗರದಲಿರುವ ಎಸ್ ಬಿಐ ಬ್ಯಾಂಕ್ ಶಾಖೆ ಮುಂಭಾಗದ ಧರಣಿ ನಡೆಸಿತು.
ಧರಣಿಯನ್ನು ರಾಜ್ಯ ಉಪಾದ್ಯಕ್ಷ ಕೆ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಕೆ.ವಿ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು . ಪ್ರಧಾನ ಕಾರ್ಯದರ್ಶಿ ಟಿ.ಎಂ ಜೋಸ್ ತಯ್ಯಿಲ್ , ಮಂಜುನಾಥ ಪ್ರಭು , ಮಾಹಿನ್ ಕೋಳಿಕ್ಕರ, ಎ ಕೆ ಮೊಯಿದೀನ್ ಕುoಞ, ಎಎ ಅಝೀಜ್ , ಕೆ. ಮಣಿಕಂಠ ಮೊದಲಾದವರುನೇತೃತ್ವ ನೀಡಿದರು. ಧರಣಿಯ ಮೊದಲು ನಗರದ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.