ಕಾಸರಗೋಡು: ಕಾಸರಗೋಡು ಕೇಂದ್ರೀಕರಿಸಿ ಭಾರಿ ಪ್ರಮಾಣದ ನಕಲಿ ಮರಳು ಪಾಸ್ ತಯಾರಿಸುತ್ತಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಸಾಬೀತುಗೊಂಡಿದೆ.
ಈ ಹಿನ್ನೆಲೆಯಲ್ಲಿ ಕಾಸರಗೋಡು ಠಾಣಾ ವೃತ್ತ ನಿರೀಕ್ಷಕ ಅಬ್ದುಲ್ ರಹೀಂ ನೇತೃತ್ವದ ಪೊಲೀಸ್ ತಂಡ ಜಿಲ್ಲೆಯ 20 ಸ್ಥಳಗಳಿಗೆ ದಾಳಿ ನಡೆಸಿದ್ದು. ಮೂರು ಕಂಪ್ಯೂಟರ್ ಹಾಗೂ ಎರಡು ಪ್ರಿಂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಕೇಂದ್ರೀಕರಿಸಿ ಈ ತಂಡ ಕಾರ್ಯಾಚಾರಿಸುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ದಾಸ್ತಾನು ಮತ್ತು ಹಾಗೂ ಸಾಗಾಟಕ್ಕೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ನಕಲಿ ಮರಳು ಪಾಸ್ ಜಾಲ ಸಕ್ರಿಯಗೊಂಡಿದೆ ಎನ್ನಲಾಗಿದೆ.
ಜಿಲ್ಲೆಯ ವಿವಿಧ ಹೊಳೆ ಹಾಗೂ ಸಮುದ್ರದಿಂದ ಅಕ್ರಮವಾಗಿ ಮರಳು ಸಾಗಾಟದ ಹಿಂದೆ ಬೃಹತ್ ಮಾಫಿಯಾಗಳು ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ತುರ್ತಿ ಹೊಳೆಯಲ್ಲಿ ಮೂರು ದಿನಗಳ ಹಿಂದೆ ಅಕ್ರಮವಾಗಿ ಮರಳು ಗಾರಿಕೆ ನಡೆಸುತ್ತಿದ್ದ ನಾಲ್ಕು ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದು ನಾಶಗೊಳಿಸಿದ್ದಾರೆ.