ಉಳ್ಳಾಲ: ಓಮ್ನಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಅಪಫಾತದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ.
ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಓಮ್ನಿ ಕಾರು ತೆರಳುವ ಸಂದರ್ಭ ಮಾಸ್ತಿಕಟ್ಟೆ ಸಮೀಪ ಆಕ್ಟಿವಾ ಸ್ಕೂಟರ್ ರಸ್ತೆ ದಾಟುತಿತ್ತು. ಇದರಿಂದ ನಿಯಂತ್ರಣ ತಪ್ಪಿ ಸ್ಕೂಟರಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಹತೋಟಿ ತಪ್ಪಿದ ಕಾರು ಸ್ಕೂಟರನ್ನು ಎಳೆದೊಯ್ದು ಸಮೀಪದ ಹೊಂಡಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಕಾರು ಹಾಗೂ ಸ್ಕೂಟರಿನಲ್ಲಿದ್ದ ಇಬ್ಬರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ.