ಪುತ್ತೂರು: ಬೊಳುವಾರು ಸ.ಕಿ.ಪ್ರಾ.ಶಾಲೆಯ ಬಳಿಯ ಬಾಡಿಗೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಾಮಾಗ್ರಿಗಳು ಸುಟ್ಟು ಹೋದ ಘಟನೆ ದ.16ರಂದು ಮಧ್ಯಾಹ್ನ ನಡೆದಿದೆ.
ಕೊಂಕಣ್ ಗ್ಯಾಸ್ ನ ಮಾಲಕ ಬೊಳುವಾರು ನಿವಾಸಿ ಉದಯ ಭಟ್ರವರ ಮಾಲಕತ್ವದ ಕಟ್ಟಡವೊಂದರಲ್ಲಿ ಆನಂದ ಮತ್ತು ವಿಜಯ ದಂಪತಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆನಂದ್ ಮತ್ತು ವಿಜಯರವರು ಅನ್ಯ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು. ಮಧ್ಯಾಹ್ನ ವೇಳೆ ಮನೆಯೊಳಗಿನಿಂದ ಹೊಗೆ ಬರುತ್ತಿರುವುದು ಗಮನಿಸಿದ ಪಕ್ಕದ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರಾದ ಮಂಜುನಾಥ್, ಯೋಗೀಶ್, ಹರಿದಾಸ್ ಶೆಣೈ, ಕಾರ್ಮಿಕರಾದ ಮಿಥುನ್, ಹರೀಶ್, ಕಿಶೋರ್, ಬಾಲಕೃಷ್ಣ, ಪುರುಷೋತ್ತಮ, ಸುಧೀರ್ ರವರು ಬೆಂಕಿ ನಂದಿಸಲು ಸಹಕರಿಸಿದರು. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ ಬಳಿಕ ಸಿಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಸ್.ಐ ಒಮನ ರವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸಕ್ಯೂರ್ಟ್ ನಿಂದಾಗಿ ಬೆಂಕಿ ಹತ್ತಿಕೊಂಡಿಂತೆ ಮೇಲ್ನೋಟಕ್ಕೆ ಕಾಣುತ್ತಿತ್ತು.