News Kannada
Tuesday, February 07 2023

ಕರಾವಳಿ

ಕಾಸರಗೋಡಿನಲ್ಲಿ ಜಿಲ್ಲಾ ಮಟ್ಟದ ಕೃಷಿ ಉತ್ಸವ

Photo Credit :

ಕಾಸರಗೋಡಿನಲ್ಲಿ ಜಿಲ್ಲಾ ಮಟ್ಟದ ಕೃಷಿ ಉತ್ಸವ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ ಕಾಸರಗೋಡು ಮತ್ತು ಕೃಷಿ ಉತ್ಸವ ಸ್ವಾಗತ ಸಮಿತಿ ಬಾಯಿಕಟ್ಟೆ ಪೈವಳಿಕೆ ಇವುಗಳ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಕೃಷಿ ಉತ್ಸವ- ಪೈವಳಿಕೆ ಸಮೀಪದ ಬಾಯಿಕಟ್ಟೆಯಲ್ಲಿ ನಡೆಯುತ್ತಿದ್ದು, ಶನಿವಾರದಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿದರು.

ಕೊಂಡೆವೂರು ನಿತ್ಯಾನಂದ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂದನೀಯ ವಿಕ್ಟರ್ ಡಿ ಸೋಜ, ಪಳ್ಳಿಕೆರೆ ಖಾಝಿ ಪಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್, ಕ್ಯಾ೦ಪ್ಕೋ ಉಪಾಧ್ಯಕ್ಷ  ಶ೦ನಾ ಖಂಡಿಗೆ, ಲಿಗೋರಿ ಡಿ ಸೋಜ ಕೊಂದಲಕ್ಕಾಡ್, ಯು. ಕೆ ಯೂಸಫ್, ಹರ್ಷೇ೦ದ್ರ ಪೂಜಾರಿ, ಪಿ.ಆರ್  ಶೆಟ್ಟಿ, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮ್ಮೆಕ್ಕಳ, ಮನೋಜ್ ಕುಮಾರ್, ಪೈವಳಿಕೆ ಕೆ ಎಸ್ ಇ ಬಿ ಸಹಾಯಕ ಅಭಿಯಂತರ ಕುಮಾರ ಸುಬ್ರಹ್ಮಣ್ಯ ಭಟ್, ಸತೀಶ್ ಅಗ್ಪಾಲ್, ಭಾಸ್ಕರ ರೈಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಾನುವಾರು ಪ್ರದರ್ಶನ, ವಸ್ತುಮಳಿಗೆ ಉದ್ಘಾಟನೆಯನ್ನು ನೆರವೇರಿಸಲಾಯಿತು. ಬಳಿಕ ನಡೆದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕ್ಯಾ೦ಪ್ಕೋ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣ  ಮಾಡಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ರಂಗತ್ರ್ಯೆ  ಬಲ್ಲಾಳ್, ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ  ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಕೃಷಿಯಲ್ಲಿ ಯುವಜನರ ಪಾತ್ರ, ಕಾಸರಗೋಡು ಗಿಡ್ಡತಳಿ ಹಸು ಮತ್ತು ಲಾಭದಾಯಕ ಹೈನುಗಾರಿಕೆ, ಭತ್ತದ ಅಧಿಕ ಇಳುವರಿಗೆ ಮಾರ್ಗೋಪಾಯಗಳು ಎಂಬ ವಿಚಾರದಲ್ಲಿ  ವಿಚಾರಗೋಷ್ಠಿಗಳು ನಡೆದವು.

ಇಂದು ( ಡಿ. ೧೮)  ಸಂಜೆ  ನಾಲ್ಕು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಯೋಜನೆ ಮತ್ತು ಸಾಂಘಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ಕೇರಳ ಕಂದಾಯ ಇಲಾಖೆ ಸಚಿವ ಇ.ಚಂದ್ರಶೇಖರನ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಅತಿಥಿಗಳಾಗಿ ಉಪಸ್ಥಿತರಿರುವರು.
ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಕೃಷಿ ಅಭಿವೃದ್ಧಿಗೆ ಪೂರಕವಾಗಿ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಮಾರ್ಗದರ್ಶನ ನೀಡುವ ವಿನೂತನವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೃಷಿ ಮೇಳ ಆಕರ್ಷಣೆಯ ಕೇಂದ್ರವಾಗಿದೆ.

See also  ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಕಸಾಯಿಖಾನೆ ಗದ್ದಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು