ಕಾಸರಗೋಡು: ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ.
ಕುಂಬಳೆ ಕಳತ್ತೂರಿನ ಸಿರಾಜುದ್ದೀನ್ (೨೫) ಮೃತಪಟ್ಟವರು. ಗುರುವಾರದಂದು ಬಂದ್ಯೋಡು-ಪೆರ್ಮುದೆ ರಸ್ತೆಯ ಅಡ್ಕ ಸಮೀಪ ಅಪಘಾತ ನಡೆದಿತ್ತು.
ಅಪಘಾತದಲ್ಲಿ ಸಿರಾಜುದ್ದೀನ್ ಅಲ್ಲದೆ ಹಿಂಬದಿ ಸವಾರ ಸಿರಾಜ್ ಹಾಗೂ ಬೈಕ್ ಸವಾರರಾದ ಉಪ್ಪಳ ಮಣಿಮುಂಡದ ಶೇಖ್ ಸುಬಾಹ್ (೨೨), ಮಣ್ಣಂಗುಯಿಯ ಹನೀಫ್ (೨೦) ಗಾಯಗೊಂಡಿದ್ದರು. ಇವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿರಾಜುದ್ದೀನ್ ನಾಳೆ (೧೯) ಗಲ್ಫ್ ಗೆ ತೆರಳಬೇಕಿತ್ತು. ಈ ಹಿನ್ನಲೆಯಲ್ಲಿ ಕುಬಣೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದ ಸಂದರ್ಭದಲ್ಲಿ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.