ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಆಳ್ವಾಸ್ ಕ್ರಿಸ್ಮಸ್-2016 ಅನ್ನು ಸಂಭ್ರಮದಿಂದ ಆಚರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಮಾರು 300 ವಿದ್ಯಾರ್ಥಿಗಳು ವಿಶೇಷ ಧಿರಿಸನ್ನು ಧರಿಸಿ ಕ್ರಿಸ್ಮಸ್ ಗೀತೆ ಹಾಡಿದರು. ಸಭಾ ಕಾರ್ಯಕ್ರಮ ಮೊದಲು ನಡೆದ ಮೆರವಣಿಯಲ್ಲಿ ಸುಮಾರು 300 ವಿದ್ಯಾರ್ಥಿಗಳು ಕ್ಯಾಂಡಲ್ ದೀಪವನ್ನು ಹಿಡಿದು, ಗಣ್ಯರೊಂದಿಗೆ ಹೆಜ್ಜೆ ಹಾಕಿದರು. ರತ್ನಾಕರ ಸಭಾಭವನವನ್ನು ಕ್ರಿಸ್ಮಸ್ ನಕ್ಷತ್ರ, ಗೂಡುದೀಪಗಳಿಂದ ಅಲಂಕರಿಸಲಾಗಿತ್ತು. ಯೇಸು ಕ್ರಿಸ್ತನ ಜನನ ಸನ್ನಿವೇಶ ಮಹತ್ವವನ್ನು ವಿದ್ಯಾರ್ಥಿಗಳು ವೇಷ ಧರಿಸುವುದರ ಮೂಲಕ ಸಾರಿದರು. ಕ್ರಿಸ್ಮಸ್ ವಿಶೇಷ ಔತಣಕೂಟವನ್ನು ಹಮ್ಮಿಕೊಳ್ಳಲಾಯಿತು.
ರೆ.ಫಾ ಹೆನ್ರಿ ಡಿ’ಸೋಜಾ ಸಂದೇಶ
ಮೂಡುಬಿದಿರೆ: ವೈಯಕ್ತಿಕ, ಸಾಮಾಜಿಕ ಗೌರವ, ಪ್ರೀತಿ, ಶಾಂತಿ ಸಮಾನತೆಯ ಸಾರವೇ ಕ್ರಿಸ್ಮಸ್. ಸಮುದಾಯವನ್ನು ಪವಿತ್ರ ಪ್ರೀತಿಯಿಂದ ಕಾಣುವ ಮಾನವೀಯತೆಯ ದಿವ್ಯ ಪ್ರೀತಿಯನ್ನು ಬೆಳೆಗುವ ಹಬ್ಬ ಕ್ರಿಸ್ಮಸ್ ಎಂದು ಬಳ್ಳಾರಿಯ ಬಿಷಪ್ ಹೆನ್ರಿ ಡಿ’ಸೋಜಾ ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಬುಧವಾರ ನಡೆದ ಆಳ್ವಾಸ್ ಕ್ರಿಸ್ಮಸ್-2016 ಸಮಾರಂಭದಲ್ಲಿ ಕ್ರಿಸ್ಮಸ್ ಸಂದೇಶವನ್ನು ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳು ಅದರ ಮೂಲತತ್ವವಾದ ಸಾಮರಸ್ಯದೊಂದಿಗೆ ಆಚರಣೆಯದಾಗ ಅದು ಅರ್ಥಪೂರ್ಣವೆನಿಸುತ್ತದೆ. ಅದರಿಂದ ವಿಮುಖವಾದಲ್ಲಿ ಅದು ದುರಂತವಾಗಿ ಪರಿವರ್ತನೆಗೊಳ್ಳುತ್ತದೆ ಎಂದರು.
ಆಳ್ವಾಸ್ ಆಸ್ಪತ್ರೆಯ ವಾರ್ಡ್ ಗೆ ಮದರ್ ತೆರೇಸಾ ಅವರ ಹೆಸರನ್ನಿಟ್ಟಿದ್ದು, ರೋಗಿಗಳ ಸೇವೆ ಮಾಡುತ್ತಿದ್ದೇವೆ. ಆಳ್ವಾಸ್ ಕ್ಯಾಂಪಸ್ನ್ಲ್ಲಿ ಮದರ್ ತರೇಸಾ ಅವರ ಪ್ರತಿಮೆಯನ್ನು ಒಂದು ವರ್ಷದೊಳಗಡೆ ನಿರ್ಮಿಸುತ್ತೇವೆ ಎಂದು ಮೋಹನ ಆಳ್ವ ತಿಳಿಸಿದರು.
ಅಲಂಗಾರು ಚರ್ಚಿನ ಧರ್ಮಗುರು ಬೇಸಿಲ್ವಾಮಸ್, ಸವೆರಾಪುರದ ಧರ್ಮಗುರು ರಾಕೇಶ್ ಮ್ಯಾಥೀಸ್, ಎಫ್.ಎಕ್ಸ್ ಗೋಮ್ಸ್, ಎವ್ಜಿನ್ ಡಿ’ಸಿಲ್ವ, ಸಿ.ಪ್ರೆಸಿಲ್ಲಾ ಡಿ’ಮೆಲ್ಲೊ, ಪಾಸ್ಟೆರ್ ಅಬೇ ಅಬ್ರಾಹಂ, ಮಾಂಡ್ ಸೊಭಾಣ್ನ ಎರಿಕ್ ಒಜಾರಿಯೋ ಮುಖ್ಯ ಅತಿಥಿಯಾಗಿದ್ದರು. ಎಲ್.ಜೆ ಫೆರ್ನಾಂಡಿಸ್ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ದೇವಿ ಸ್ಪರ್ಧಾ ವಿಚೇತರ ವಿವರ ನೀಡಿದರು. ಡಾ.ಕುರಿಯನ್ ವಂದಿಸಿದರು.